ಚನ್ನಪಟ್ಟಣ: ಹಿರಿಯ ನಾಗರಿಕರು ದೇಶದ ಅಭಿವೃದ್ಧಿಯ ಚಿಂತಕರಾಗಿದ್ದು, ಸಮಾಜದ ಅಮೂಲ್ಯ ಆಸ್ತಿಯಾಗಿರುವ ಇವರ ರಕ್ಷಣೆ ಮತ್ತು ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು ಅಗತ್ಯ ಎಂದು ಚನ್ನಪಟ್ಟಣ ಜೆಎಂಎಫ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಟೇಶಪ್ಪ ಹೇಳಿದರು.
ಪಟ್ಟಣದ ಬಾಲು ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಭಾರತ ವಿಕಾಸ ಪರಿಷದ್ ಕಣ್ವ ಶಾಖೆ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಹಿರಿಯರಿಗೆ ಪ್ರೀತಿ ಮತ್ತು ಸಹಾನುಭೂತಿ ದೊರೆಯುತ್ತಿಲ್ಲ. ವಯಸ್ಸಾದ ಹಿರಿಯರಿಗೆ ಪ್ರೀತಿ ಹಾಗೂ ಗೌರವ ನೀಡಿದರೆ ಅವರ ಜೀವನ ನೆಮ್ಮದಿಯಾಗಿರುತ್ತದೆ. ತಂದೆ, ತಾಯಿ, ಅಜ್ಜ, ಅಜ್ಜಿ ಸೇರಿದಂತೆ ಹಿರಿಯರ ಕಡೆಗಣನೆ ಇಂದು ಸಾಮಾನ್ಯವಾಗಿದೆ. ಇದರಿಂದ ಅವರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಇದನ್ನು ತಡೆಗಟ್ಟುವುದು ಯುವ ಪೀಳಿಗೆಯ ಜವಾಬ್ದಾರಿ ಎಂದು ಹೇಳಿದರು.ಸರ್ಕಾರಿ ಸಹಾಯಕ ಅಭಿಯೋಜಕಿ ಶಾರದ ಮಾತನಾಡಿ, ಹಿರಿಯ ನಾಗರಿಕರ ಕಾಯಿದೆ ಜಾರಿಯಲ್ಲಿದೆ. ಮಕ್ಕಳಿಂದ ಅಥವಾ ಕುಟುಂಬದವರಿಂದ ತೊಂದರೆ ಎದುರಿಸಿದರೆ ಕಾನೂನಿನ ನೆರವು ಪಡೆಯಬಹುದು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಸಹಾಯ ದೊರೆಯುತ್ತದೆ. ಸರ್ಕಾರದ ಸೌಲಭ್ಯಗಳನ್ನು ಹಿರಿಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಲಯನ್ಸ್ ಸಂಸ್ಥೆಯ ಅಧ್ಯಕ್ಷ ವೆಂಕಟಸುಬ್ಬಯ್ಯ ಚಟ್ಟಿ ಮಾತನಾಡಿ, ಹಿರಿಯರ ಅನುಭವ ಬಹುಮುಖ್ಯವಾದದ್ದು. ಪ್ರಸ್ತುತ ಕಾಲದಲ್ಲಿ ಹಿರಿಯರನ್ನು ನಿರ್ಲಕ್ಷಿಸುವುದು ವಿಷಾದನೀಯ. ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ, ಬದುಕು ಕಟ್ಟಿಕೊಡುವ ತಂದೆ-ತಾಯಿಯನ್ನು ವೃದ್ಧಾಪ್ಯದಲ್ಲಿ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಹೇಳಿದರು.ಭಾರತ ವಿಕಾಸ ಪರಿಷತ್ತಿನ ಅಧ್ಯಕ್ಷ ಪುಟ್ಟಸ್ವಾಮಿಗೌಡ(ಡಿಪಿಎಸ್) ಮಾತನಾಡಿ, ಪ್ರತಿ ಕುಟುಂಬಕ್ಕೂ ಹಿರಿಯರ ಮಾರ್ಗದರ್ಶನ ಅಗತ್ಯ, ಭಾರತ ವಿಕಾಸ ಪರಿಷತ್ತಿನ ವತಿಯಿಂದ ಪ್ರತಿವರ್ಷ ಹಿರಿಯರ ಸೇವೆ ಮತ್ತು ಕೊಡುಗೆಗಳನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ವಕೀಲರ ಸಂಘದ ಉಪಾಧ್ಯಕ್ಷ ಎಸ್.ಬಿ.ಧನಂಜಯ ಹಾಗೂ ಖಜಾಂಚಿ ಹೇಮಂತ್ ಹಿರಿಯರ ಹಕ್ಕುಗಳ ಕುರಿತು ಮಾತನಾಡಿದರು. ಕಾರ್ಯಕ್ರಮವನ್ನು ಭಾವಿಪ ಕಾರ್ಯದರ್ಶಿ ಯೋಗೇಶ್ ಚಕ್ಕೆರೆ ನಿರೂಪಿಸಿದರು. ಮಾಜಿ ಅಧ್ಯಕ್ಷ ವಸಂತಕುಮಾರ್ ಸ್ವಾಗತಿಸಿ, ಖಜಾಂಚಿ ವಿ.ಟಿ. ರಮೇಶ್ ವಂದಿಸಿದರು.ಭಾರತ ವಿಕಾಸ ಪರಿಷತ್ತಿನ ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ವಕೀಲ ಲಕ್ಷ್ಮಣ್, ರಂಗಭೂಮಿ ಕಲಾವಿದ ಗೋಪಾಲಗೌಡ, ಭಜನಾ ಕಲಾವಿದೆ ಜಯಲಕ್ಷ್ಮಮ್ಮ ನಂಜಪ್ಪ ಹಾಗೂ ಬಾಲು ಪಬ್ಲಿಕ್ ಶಾಲೆಯ ಸಂಸ್ಥಾಪಕ ಲಯನ್ ವೆಂಕಟಸುಬ್ಬಯ್ಯ ಚಟ್ಟಿ ಮೊದಲಾದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯ ಮೇಲ್ವಿಚಾರಕ ಕೃಷ್ಣಪ್ಪ, ಕಾರ್ಯಕಾರಿ ಸದಸ್ಯ ಶಿವಶಂಕರ್, ವಕೀಲ ಧರ್ಮೇಂದ್ರ, ಗುರುಮಾದಯ್ಯ, ತಿಪ್ಪೇಗೌಡ, ಬೆಸ್ಕಾಂ ಶಿವಲಿಂಗಯ್ಯ, ಎಲೆಕೆರೆ ಮಂಜುನಾಥ್, ರಾಜಶೇಖರ್, ಬಿ.ಕೆ. ರಾಮನಾಥ್,ಟಿ. ಚನ್ನಪ್ಪ, ಪದ್ಮಾವತಿವೆಂಕಟಚಲಯ್ಯ, ಕೃಷ್ಣಮ್ಮಸೋಮರಾಜ್, ಕೃಷ್ಣಕುಮಾರ್, ಬಸವರಾಜು, ಕಾಂತರಾಜು, ಚಂದ್ರಿಕಾ ಗಿರೀಶ್, ಎ.ಎಸ್. ಪ್ರೇಮ, ಸಿದ್ದಾರ್ಥ, ಚೌ.ಪು. ಸ್ವಾಮಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಪೊಟೋ೧೯ಸಿಪಿಟಿ೨: ಚನ್ನಪಟ್ಟಣದ ಬಾಲು ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.