ಸಹಕಾರ ಕ್ಷೇತ್ರದಲ್ಲಿ ಸಾರ್ವಜನಿಕರೂ ಕೈಜೋಡಿಸಲಿ

KannadaprabhaNewsNetwork |  
Published : Aug 25, 2025, 01:00 AM IST
5 | Kannada Prabha

ಸಾರಾಂಶ

ಸಹಕಾರಿ ವ್ಯವಸ್ಥೆಯ ಕುರಿತು ಅರಿವಿನ ಕೊರೆತ ಇದೆ. ಹೀಗಾಗಿ, ಕೇಂದ್ರ ಸರ್ಕಾರವು ಶಿಕ್ಷಣದಲ್ಲಿ ಸಹಕಾರ ಕ್ಷೇತ್ರದ ವಿಷಯವನ್ನು ಸೇರಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಹಕಾರ ಕ್ಷೇತ್ರದಲ್ಲಿ ಸರ್ಕಾರಗಳಷ್ಟೇ ಅಲ್ಲದೆ ಸಾರ್ವಜನಿಕರೂ ಕೈಜೋಡಿಸಿದಾಗ ಬೃಹತ್ ಶಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಶ್ರೀ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್‌ ಭಾನುವಾರ ಆಯೋಜಿಸಿದ್ದ ಹಿರಿಯ ಸಹಕಾರಿಗಳು ಸನ್ಮಾನ ಮತ್ತು ಬ್ಯಾಂಕಿನ ಸದಸ್ಯರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಹಕಾರಿ ವ್ಯವಸ್ಥೆಯ ಕುರಿತು ಅರಿವಿನ ಕೊರೆತ ಇದೆ. ಹೀಗಾಗಿ, ಕೇಂದ್ರ ಸರ್ಕಾರವು ಶಿಕ್ಷಣದಲ್ಲಿ ಸಹಕಾರ ಕ್ಷೇತ್ರದ ವಿಷಯವನ್ನು ಸೇರಿಸಿಕೊಂಡಿದೆ. ಇದರಿಂದ ಜನರನ್ನು ಸಹಕಾರ ಕ್ಷೇತ್ರದ ಕಡೆಗೆ ಸೆಳೆಯಲು ಸಾಧ್ಯ. ಸರ್ಕಾರಗಳಷ್ಟೇ ಈ ವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯವಿಲ್ಲ. ಸಾರ್ವಜನಿಕರೂ ಕೈ ಜೋಡಿಸಿದಾಗ ಬೃಹತ್‌ ಶಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಅವರು ಹೇಳಿದರು.

ಸಹಕಾರಿ ವ್ಯವಸ್ಥೆಯು 10ನೇ ಚಾಮರಾಜ ಒಡೆಯರ್‌ ಕಾಲದಲ್ಲಿ ಆರಂಭವಾಗಿತ್ತು. ರಾಜಪ್ರಭುತ್ವ ವ್ಯವಸ್ಥೆಯಲ್ಲೂ ಜನರ ಪಾಲ್ಗೊಳ್ಳುವಿಕಯನ್ನು ಅವರ ನಿರ್ಧಾರ ಪ್ರತಿಪಾದಿಸಿತ್ತು. ಆಧುನಿಕ ಕಾಲಕ್ಕೆ ಸೂಕ್ತವಾದ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಹೀಗಾಗಿ, ಸಹಕಾರಿಗೆ ಪ್ರತ್ಯೇಕ ಮಂತ್ರಾಲಯ ಆರಂಭಿಸಿದೆ ಎಂದರು.

ಕೃಷ್ಣರಾಜೇಂದ್ರ ಬ್ಯಾಂಕ್‌ ಸ್ವಾತಂತ್ರ್ಯ ಪೂರ್ವದಲ್ಲಿ ಸೃಷ್ಟಿಯಾದ ಸಂಸ್ಥೆ. ಅಂದಿನ ಕಾಲದಲ್ಲಿ ಸಾಮಾಜಿಕವಾಗಿ ಸಹಕಾರಿ ವ್ಯವಸ್ಥೆ ಜಾರಿಗಾಗಿ ಹೋರಾಟ ಮಾಡಿದೆ. ಮೈಸೂರಿನ ಹೃದಯ ಭಾಗದಲ್ಲಿದ್ದು, ಅರಮನೆಯ ಪರಂಪರೆಗೆ ಹತ್ತಿರವಾಗಿದೆ. ಮೈಸೂರಿನ ಸುವರ್ಣ ಯುಗದಲ್ಲಿ ಸಹಕಾರಿ ಬ್ಯಾಂಕ್‌ ಪರಿಣಾಮಕಾರಿಯಾಗಿ ಗುರುತಿಸಿಕೊಂಡಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಹೆಸರನ್ನು ತನ್ನ ಕೆಲಸದ ಮೂಲಕ ಎತ್ತಿ ಹಿಡಿದಿದೆ ಎಂದು ಅವರು ಶ್ಲಾಘಿಸಿದರು.

ಕೆ.ಆರ್. ಸಹಕಾರ ಬ್ಯಾಂಕ್ ಅಧ್ಯಕ್ಷ ಡಿ. ಬಸವರಾಜು, ಉಪಾಧ್ಯಕ್ಷೆ ಎಚ್.ಎಸ್. ಸರ್ವಮಂಗಳಾ, ನಿರ್ದೇಶಕರಾದ ನಂ. ಸಿದ್ದಪ್ಪ, ಜಿ.ಎಂ. ಪಂಚಾಕ್ಷರಿ, ಎಚ್.ವಿ. ಭಾಸ್ಕರ್, ಎಂ.ಡಿ. ಪಾರ್ಥಸಾರಥಿ, ಪ್ರತಿಧ್ವನಿ ಪ್ರಸಾದ್, ತಾಯೂರು ಗಣೇಶ್ ಮೂರ್ತಿ, ಬಿ. ನಾಗಜ್ಯೋತಿ ಪ್ರತಿಧ್ವನಿ ಪ್ರಸಾದ್, ಎಂ.ಎನ್. ನವೀನ್ ಕುಮಾರ್, ಎಂ.ಎಸ್. ಅರುಣ್ ಸಿದ್ದಪ್ಪ, ಎಚ್. ವಾಸು, ಎಂ. ಶಿವಪ್ರಕಾಶ್, ಪ್ರಭಾರ ವ್ಯವಸ್ಥಾಪಕ ಡಿ. ಅನಂತ ವೀರಪ್ಪ ಇದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ