ಶಿಗ್ಗಾಂವಿ: ಜಿಲ್ಲೆಯಲ್ಲಿ ಜರುಗಿದ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಬ.ಫ. ಯಲಿಗಾರ ಅವರು ಸಾಕಷ್ಟು ಮಾರ್ಗದರ್ಶನ ಮಾಡಿದ್ದರು. ಅದೇ ರೀತಿ ಸಾಹಿತ್ಯಿಕ ಆಸಕ್ತಿಯ ಜತೆಗೆ ಹೋರಾಟದ ಸ್ವಭಾವ ಅವರಲ್ಲಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ಹಾಗೂ ಶ್ರೀಮಂತ ಬ.ಬು. ಮಾಮಲೆದೇಸಾಯಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಜಂಟಿ ಆಶ್ರಯದಲ್ಲಿ ಹಿರಿಯ ಸಾಹಿತಿ ಬ.ಫ. ಯಲಿಗಾರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಾಚಾರ್ಯರ ಸಂಘ ಆರಂಭವಾಗಲು ಮತ್ತು ಅದರ ನಿವೇಶನ ಗುರುತಿಸಲು ಶ್ರಮಿಸಿದ್ದರು. ಇವೆಲ್ಲವುಗಳ ಮಧ್ಯೆ ಅವರ ವ್ಯಕ್ತಿತ್ವವನ್ನು ಅವರ ಶಿಷ್ಯರ ರೂಪದಲ್ಲಿ ಅರಿಯಬಹುದು ಎಂದರು.ವಿಶ್ರಾಂತ ಪ್ರಾಂಶುಪಾಲ ಧೀರೇಂದ್ರ ಏಕಬೋಟೆ ಮಾತನಾಡಿ, ಬ.ಫ. ಯಲಿಗಾರ ಅದ್ಭುತ ಭಾಷಾ ಕೌಶಲ್ಯವಿತ್ತು. ನಿರರ್ಗಳವಾಗಿ ಮಾತನಾಡುವ ಮತ್ತು ವಿಷಯ ಬೋಧಿಸುವ ಅವರ ಶೈಲಿ ಅನುಕರಣೀಯ. ಅವರ ಶಿಷ್ಯನಾಗಿ ಗುರುತಿಸಿಕೊಂಡಿರುವುದು ನನಗೆ ಹೆಮ್ಮೆ ಇದೆ ಎಂದರು.ಸಾಹಿತಿ ಸಿ.ಎಸ್. ಮರಳಿಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ನಾಗಪ್ಪ ಬೆಂತೂರ, ಮಲ್ಲಪ್ಪ ರಾಮಗೇರಿ, ಶಿವಾನಂದ ಮ್ಯಾಗೇರಿ, ಶಂಕರ ಅರ್ಕಸಾಲಿ, ದೇವರಾಜ ಸುಣಗಾರ, ಅರಳಿಕಟ್ಟಿ ಗೂಳಪ್ಪ ಮಾತನಾಡಿದರು.ಎಸ್.ಪಿ. ಜೋಶಿ, ಶಿವಪ್ಪ ಚಿನ್ನಪ್ಪನವರ, ಶಶಿಕಲಾ ಯಲಿಗಾರ, ಸಿ.ವಿ. ಮತ್ತಿಗಟ್ಟಿ, ಪ್ರೇಮಾ ಪಾಟೀಲ, ಬಸವರಾಜ ಹೆಸರೂರ, ಜಿ.ಎನ್. ಯಲಿಗಾರ, ಲತಾ ನಿಡಗುಂದಿ, ಕೆ.ಬಿ. ಚನ್ನಪ್ಪ, ರಾಘವೇಂದ್ರ ದೇಶಪಾಂಡೆ, ಅರುಣ ಹುಡೇದಗೌಡ್ರ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.ದತ್ತಣ್ಣ ವೆರ್ಣೇಕರ್ ಅಧ್ಯಕ್ಷತೆ ವಹಿಸಿದ್ದರು. ಆರ್.ಎಸ್. ಭಟ್ ಸ್ವಾಗತಿಸಿದರು. ಕೆ.ಎಚ್. ಬಂಡಿವಡ್ಡರ ನಿರೂಪಿಸಿದರು. ಸಿ.ಡಿ.ಯತ್ನಳ್ಳಿ ವಂದಿಸಿದರು.