ರಿಲೀಸ್ದ್....ಪ್ರತ್ಯೇಕ ಅಪಘಾತ: ಇಬ್ಬರಿಗೆ ಗಾಯ

KannadaprabhaNewsNetwork | Published : Jul 5, 2024 12:46 AM

ಸಾರಾಂಶ

ಒಂದೇ ದಿನ ಎರಡು ಪ್ರತ್ಯೇಕ ಅಪಘಾತ ಸಂಭವಿಸಿ ವಾಹನ ಸವಾರರು ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಹುಲುಸುಗುಡ್ಡೆ ಬಳಿ ಅಪಘಾತ ಜರುಗಿದೆ. ಹನೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೊಳ್ಳೇಗಾಲ ಹಾಗೂ ಹನೂರುಪಟ್ಟಣದ ಹುಲುಸು ಗುಡ್ಡೆ ಬಳಿ ಕೆಸಿಎಫ್ ರಸ್ತೆಯಲ್ಲಿ ಅಪಘಾತವಾಗಿ ಕಾರು ಹಳ್ಳಕ್ಕೆ ಪಲ್ಟಿಯಾಗಿ ಬೈಕ್ ಸವಾರನ ಕಾಲು ತೀವ್ರ ಪೆಟ್ಟಾಗಿದೆ. ಕೊಳ್ಳೇಗಾಲ ಹನೂರು ಮುಖ್ಯ ರಸ್ತೆಯ ಕರ್ನಾಟಕ ಗೃಹ ಮಂಡಳಿ ಬಡಾವಣೆ ಹತ್ತಿರ ಅಪರಿಚಿತ ವಾಹನವು ಟಿವಿಎಸ್ ಎಕ್ಸೆಲ್ ವಾಹನ ಸವಾರನಿಗೆ ಅಪಘಾತ ಮಾಡಿ ಕೊಳ್ಳೇಗಾಲದ ಕಡೆ ವಾಹನ ನಿಲ್ಲಿಸದೆ ಪರಾರಿಯಾಗಿದೆ.

ಚಾಮರಾಜನಗರ ಕೊಳ್ಳೆಗಾಲ ಅಪಘಾತ

ಇಬ್ಬರಿಗೆ ಗಾಯ ಕಾರು ಪಲ್ಟಿ

ಅಪರಿಚಿತ ವಾಹನ ಡಿಕ್ಕಿ

ಬೈಕ್ ಸವಾರಿಗೆ ತೀವ್ರ ಗಾಯ

ಕನ್ನಡಪ್ರಭ ವಾರ್ತೆ ಹನೂರು

ಒಂದೇ ದಿನ ಎರಡು ಪ್ರತ್ಯೇಕ ಅಪಘಾತ ಸಂಭವಿಸಿ ವಾಹನ ಸವಾರರು ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಹುಲುಸುಗುಡ್ಡೆ ಬಳಿ ಅಪಘಾತ ಜರುಗಿದೆ. ಹನೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೊಳ್ಳೇಗಾಲ ಹಾಗೂ ಹನೂರುಪಟ್ಟಣದ ಹುಲುಸು ಗುಡ್ಡೆ ಬಳಿ ಕೆಸಿಎಫ್ ರಸ್ತೆಯಲ್ಲಿ ಅಪಘಾತವಾಗಿ ಕಾರು ಹಳ್ಳಕ್ಕೆ ಪಲ್ಟಿಯಾಗಿ ಬೈಕ್ ಸವಾರನ ಕಾಲು ತೀವ್ರ ಪೆಟ್ಟಾಗಿದೆ.

ಬೈರನಾಥ ಗ್ರಾಮದ ಮಹದೇವಪ್ಪ(60) ಎಂಬಾತನಿಗೆ ತೀವ್ರ ಪೆಟ್ಟಾಗಿದೆ. ಮಹದೇಶ್ವರ ಬೆಟ್ಟ ದಿಂದ ಕಾರು ಹಾಗೂ ಕಣ್ಣೂರಿನಿಂದ ಹನೂರಿನತ್ತ ಆಗಮಿಸುತ್ತಿದ್ದ ಬೈಕ್ ಸವಾರ ನಡುವೆ ಈ ಅವಘಡ ಸಂಭವಿಸಿ ರಸ್ತೆ ಸಮೀಪದ ಹಳ್ಳಕ್ಕೆ ಕಾರು ಪಲ್ಟಿಯಾದರೆ, ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟಿವಿಎಸ್ ಬೈಕ್ ಸವಾರನಿಗೆ ತೀವ್ರ ಪೆಟ್ಟಾಗಿ ಸಮೀಪದ ಹೋಲಿ ಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ.

ಇಟ್ ಅಂಡ್ ರನ್ ಕೇಸ್ ದಾಖಲು

ಕೊಳ್ಳೇಗಾಲ ಹನೂರು ಮುಖ್ಯ ರಸ್ತೆಯ ಕರ್ನಾಟಕ ಗೃಹ ಮಂಡಳಿ ಬಡಾವಣೆ ಹತ್ತಿರ ಅಪರಿಚಿತ ವಾಹನವು ಟಿವಿಎಸ್ ಎಕ್ಸೆಲ್ ವಾಹನ ಸವಾರನಿಗೆ ಅಪಘಾತ ಮಾಡಿ ಕೊಳ್ಳೇಗಾಲದ ಕಡೆ ವಾಹನ ನಿಲ್ಲಿಸದೆ ಪರಾರಿಯಾಗಿದೆ.

ಕೆ ಎ 10 ಎಲ್ 6981 ಟಿವಿಎಸ್ ಎಕ್ಸೆಲ್ ಬೈಕ್ ಸವಾರ ಗೋವಿಂದರಾಜು ನಾಯ್ದ ಹನೂರು ಟೌನಿನ ನಿವಾಸಿಯಾಗಿದ್ದಾರೆ.

ಗಾಯಾಳು ಗೋವಿಂದರಾಜು ನಾಯ್ಡು ಅವರಿಗೆ ತಲೆಯ ಭಾಗ ಹಾಗೂ ಇನ್ನಿತರ ಕಡೆ ರಕ್ತ ಗಾಯಗಳಾಗಿ ತುರ್ತು ವಾಹನ 108 ಆಂಬ್ಯುಲೆನ್ಸ್ ನಲ್ಲಿ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಪ್ರಥಮ ಚಿಕಿತ್ಸೆ ನೀಡಿ ತಲೆಗೆ ಪೆಟ್ಟಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share this article