)
ಕನ್ನಡಪ್ರಭ ವಾರ್ತೆ ಬೆಂಗಳೂರು
ಜಯನಗರ ಸಮೀಪದ ಸಿದ್ದಾಪುರದ ನಿವಾಸಿ ಆಗಿರುವ ಟೋಯಿಂಗ್ ವಾಹನದ ಚಾಲಕ ನೂರುಲ್ಲಾ ಫಯಾಜ್ ಖಾನ್ (41) ಶಿಕ್ಷೆಗೊಳಗಾದವರು.
2024ರ ಫೆಬ್ರವರಿಯಲ್ಲಿ ಯಶವಂತಪುರದ ಎಂಇಎಸ್ ರಿಂಗ್ ರಸ್ತೆಯಲ್ಲಿ ನಡೆದಿದ್ದ ಅಪಘಾತದಲ್ಲಿ ಬೈಕ್ ಸವಾರ ಟಿ.ಆರ್.ರಾಜೀವ್ (21) ಸಾವಿಗೆ ಕಾರಣವಾದ ಪ್ರಕರಣದಲ್ಲಿ 1 ವರ್ಷ 3 ತಿಂಗಳು ಜೈಲು ಶಿಕ್ಷೆ ಹಾಗೂ 6000 ರು. ದಂಡ ವಿಧಿಸಲಾಗಿದೆ.2024ರ ಫೆಬ್ರವರಿ 26 ರ ಸಂಜೆ ಎದುರಿನಿಂದ ಬಂದ ವಾಹನವು ತಗುಲಿ ದ್ವಿಚಕ್ರ ವಾಹನ ಸವಾರ ಕೆಳಗೆ ಬಿದ್ದ ವೇಳೆ ಹಿಂದೆ ಬರುತ್ತಿದ್ದ ನೂರುಲ್ಲಾ ಫಯಾಜ್ ಖಾನ್ ಚಲಾಯಿಸುತ್ತಿದ್ದ ವಾಹನ ರಾಜೀವ್ ಅವರ ಮೇಲೆ ಹರಿದ ಪರಿಣಾಮ ಅವರು ಮೃತಪಟ್ಟಿದ್ದರು. ಸಿಸಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಸ್ಥಳದಲ್ಲಿ ಸಂಗ್ರಹಿಸಲಾದ ಖಾನ್ ಅವರ ವಾಹನದ ಹಾನಿಗೊಳಗಾದ ಭಾಗಗಳು ಸೇರಿದಂತೆ ವಿವಿಧ ಸಾಕ್ಷ್ಯಗಳು ಅವರ ಅಪರಾಧವನ್ನು ಸಾಬೀತುಪಡಿಸಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
11 ಸಾವಿರ ದಂಡ:
ಈ ಪ್ರಕರಣದಲ್ಲಿ ಕೃಷ್ಣಮೂರ್ತಿ ಅವರನ್ನು ದೋಷಿಯೆಂದು ಘೋಷಿಸಿದ ನ್ಯಾಯಾಲಯ 11 ಸಾವಿರ ದಂಡ ಪಾವತಿಸಬೇಕು. ದಂಡ ಪಾವತಿಸಲು ವಿಫಲವಾದರೆ 45 ದಿನಗಳ ಸರಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಧೀಶೆ ಮಂಜು ಅವರು ಈ ತೀರ್ಪು ನೀಡಿದ್ದರು. ಎಎಸ್‌ಐ ಹನುಮಮೂರ್ತಿ ಅವರು ತನಿಖೆ ನಡೆಸಿ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾ ಚಂದ್ರಕಲಾ ವಾದ ಮಂಡಿಸಿದ್ದರು.