ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸೆಪ್ಸಿಸ್ ಸೋಂಕು ಜಾಗೃತಿ ಕಾರ್ಯಕ್ರಮ

KannadaprabhaNewsNetwork |  
Published : Feb 09, 2024, 01:47 AM ISTUpdated : Feb 09, 2024, 03:54 PM IST
ಸೆಪ್ಸಿಸ್ ಕೆಎಂಸಿ | Kannada Prabha

ಸಾರಾಂಶ

ಶಾಖೆಯ ಸದಸ್ಯರು, ಸಾರ್ವಜನಿಕರು, ವೈದ್ಯರು ಮತ್ತು ಇತರ ಆರೋಗ್ಯ ವೃತ್ತಿಪರರಿಗೆ ಈ ಕಾರ್ಯಕ್ರಮ ಆಯೋಜಿಸಲಾಯಿತು. ಇದರಲ್ಲಿ ಸೆಪ್ಸಿಸ್ ಸೋಂಕು ಬಗ್ಗೆ ಮಾಹಿತಿ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗ ಇಂಡಿಯನ್ ಸೊಸೈಟಿ ಆಫ್ ಕ್ರಿಟಿಕಲ್ ಕೇರ್ ಮೆಡಿಸಿನ್ ನ ಮಣಿಪಾಲ ಶಾಖೆಯ ವತಿಯಿಂದ ಸೆಪ್ಸಿಸ್ ಸೋಂಕು ಮತ್ತು ಅದರ ಮಾರಣಾಂತಿಕ ಪರಿಣಾಮಗಳ ಕುರಿತು ಶೈಕ್ಷಣಿಕ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಶಾಖೆಯ ಸದಸ್ಯರು, ಸಾರ್ವಜನಿಕರು, ವೈದ್ಯರು ಮತ್ತು ಇತರ ಆರೋಗ್ಯ ವೃತ್ತಿಪರರಿಗೆ ನಡೆದ ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ತಜ್ಞ ವೈದ್ಯರು, ಮೂತ್ರ, ಚರ್ಮ ಅಥವಾ ಶ್ವಾಸಕೋಶದ ಸೋಂಕಿನ ಜ್ವರ ಸೇರಿದಂತೆ ಯಾವುದೇ ಸೋಂಕನ್ನು ಜನರು ಎಂದಿಗೂ ನಿರ್ಲಕ್ಷಿಸಬಾರದು ಮತ್ತು ಆದಷ್ಟು ಬೇಗ ವೈದ್ಯಕೀಯ ಸಹಾಯವನ್ನು ಪಡೆಯಬೇಕು ಎಂದು ಒತ್ತಿ ಹೇಳಿದರು.

ಸೋಂಕು ಹರಡುವುದನ್ನು ತಡೆಯಲು ನಿಯಮಿತವಾಗಿ ಕೈ ತೊಳೆಯುವಂತಹ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು, ಇದು ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಐಎಸ್‌ಸಿಸಿಎಂ ಮಣಿಪಾಲ ಶಾಖೆಯ ಅಧ್ಯಕ್ಷ ಡಾ. ಸೌವಿಕ್ ಚೌಧುರಿ, ಕಾರ್ಯದರ್ಶಿ ಡಾ. ಸುನಿಲ್ ಆರ್. ಮತ್ತು ಖಜಾಂಚಿ ಡಾ. ಮಾರ್ಗಿ ಭಟ್ ಮತ್ತು ಐಎಸ್‌ಸಿಸಿಎಂ ಮಣಿಪಾಲ ಶಾಖೆಯ ಇತರ ಪ್ರಮುಖ ಸದಸ್ಯರು ಸೆಪ್ಸಿಸ್ ಲಕ್ಷಣಗಳನ್ನು ಸಾಮಾನ್ಯರಿಗೆ ಶೀಘ್ರವಾಗಿ ಗುರುತಿಸುವ ಮಹತ್ವವನ್ನು ವಿವರಿಸಿದರು.

ಸಾರ್ವಜನಿಕರು, ವೈದ್ಯರು ಇತರ ವೈದ್ಯಕೀಯ ವೃತ್ತಿಪರರು ಸೇರಿದಂತೆ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಸೆಪ್ಸಿಸ್ ಒಂದು ಮಾರಣಾಂತಿಕ ಸೋಂಕಾಗಿದ್ದು, ಭಾರತದಲ್ಲಿ ಪ್ರತಿ ವರ್ಷ ಸುಮಾರು 1.2 ಕೋಟಿ ಜನರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಭಾರತದಲ್ಲಿ ಪ್ರತಿ ವರ್ಷ ಸುಮಾರು 30 ಲಕ್ಷ ಜನರು ಸಾವನ್ನಪ್ಪುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ