ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲಾಡಳಿತ ನಿರ್ವಹಣೆ ಮಾಡುವ ಈ ವಸತಿ ಸಮುಚ್ಛಯದಲ್ಲಿ ಒಟ್ಟು 34 ಕುಟುಂಬಗಳ ವಾಸವಿದೆ. ಆದರೆ ಕಟ್ಟಡದ ಯಾವ ಭಾಗದಲ್ಲಿಯೂ ಒಂದೇ ಒಂದು ಸಿಸಿ ಕ್ಯಾಮರಾ ಇಲ್ಲ. ಸಾರ್ವಜನಿಕರಿಗೆ ಸಿಸಿ ಕ್ಯಾಮರಾ ಅಳವಡಿಸಿ ಎಂದು ಹೇಳುವ ಆಡಳಿತ ತನ್ನ ನೌಕರರ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.ಅಲ್ಲದೇ ಈ ವಸತಿ ಸಮುಚ್ಛಯದ ಆವರಣದಲ್ಲಿರುವ ವಿದ್ಯುತ್ ಕಂಬದಲ್ಲಿ ದಾರಿದೀಪಗಳು ಕೆಟ್ಟಿದ್ದು, ಅದು ಉರಿಯುತ್ತಿಲ್ಲ. ಸೋಮವಾರ ಬೆಳಗ್ಗೆ ತರಾತುರಿಯಲ್ಲಿ ದಾರಿ ದೀಪವನ್ನು ಹಾಕಲಾಗಿದೆ. ಇದೆಲ್ಲವನ್ನು ತಿಳಿದುಕೊಂಡೇ ಕಳ್ಳರು, ಪೊಲೀಸ್ ಠಾಣೆಯ ಪರಿಸರದಲ್ಲಿಯೇ ಕಳ್ಳತನದ ಧೈರ್ಯ ತೋರಿದ್ದಾರೆ. ಪೊಲೀಸರಿಗೆ ಸವಾಲು ಹಾಕಿದ್ದಾರೆ.
-------ಡೆಂಘೀ ಚಿಕಿತ್ಸೆಗೆ ತಂದಿಟ್ಟ ಹಣಚಿನ್ನ ಕಳೆದುಕೊಂಡ ಮನೆಯ ನಿವಾಸಿ ಪ್ಲಾವಿಯ ಡಿಸೋಜ ಪ್ರತಿಕ್ರಿಯಿಸಿ, ಪಕ್ಕದ ಮನೆಯಲ್ಲಿ ಯಾರು ಇರಲಿಲ್ಲ. ಆದ್ದರಿಂದ ನಾನೂ ಒಬ್ಬಳೇ ಇರುವುದು ಬೇಡ ಎಂದು ಸ್ನೇಹಿತೆಯ ಮನೆಗೆ ಹೋಗಿ ಮಲಗಿದ್ದೆ. ಸೋಮವಾರ ಬೆಳಗ್ಗೆ ಬಂದಾಗ ಮನೆಯ ಬಾಗಿಲು ತೆರೆದಿತ್ತು. ಒಳಗೆ ಹೋದಾಗ ಬಟ್ಟೆಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದು, ಜೀವಮಾನವಿಡೀ ದುಡಿದು ಖರೀದಿಸಿದ ಚಿನ್ನಾಭರಣ ಕಳವಾಗಿದೆ. ಡೆಂಘೀ ಬಂದು ಸುಧಾರಿಸಿಕೊಳ್ಳುತ್ತಿದ್ದೆ, ಅದರ ಚಿಕಿತ್ಸೆಗೆ 25 ಸಾವಿರ ರು. ಹಣವನ್ನು ಡ್ರಾ ಮಾಡಿ ತಂದಿದ್ದೆ. ಅದನ್ನು ಕಳವು ಮಾಡಿದ್ದಾರೆ ಎಂದಿದ್ದಾರೆ.
----------ಬಕೆಟ್ ನಲ್ಲಿಟ್ಟಿದ್ದ ಚಿನ್ನ ಸೇಫ್!
ಇದೇ ವಸತಿ ಸಮುಚ್ಛಯದಲ್ಲಿರುವ ಮತ್ತೋರ್ವ ಸರ್ಕಾರಿ ನೌಕರರು ರಜೆಗೆ ಊರಿಗೆ ತೆರಳುವಾಗ ಮನೆಯಲ್ಲಿದ್ದ ಚಿನ್ನಾಭರಣವನ್ನು ಬಟ್ಟೆಯಲ್ಲಿ ಕಟ್ಟಿ, ಬಕೆಟ್‌ನೊಳಗೆ ಇಟ್ಟು ಹೋಗಿದ್ದರು. ಪೆಟ್ಟಿಗೆ, ಬೀರುಗಳನ್ನು ಜಾಲಾಡಿ, ಬಟ್ಟೆಬರೆಗಳನ್ನು ಹೊರಗೆಳೆದು ಹಾಕಿದ್ದ ಕಳ್ಳರು, ಬಕೆಟ್‌ನತ್ತ ಗಮನ ಹರಿಸದಿದ್ದುದರಿಂದ ಲಕ್ಷಾಂತರ ರು.ಗಳ ಚಿನ್ನಾಭರಣ ಸುರಕ್ಷಿತವಾಗಿ ಉಳಿದುಕೊಂಡಿತ್ತು.