-ಸಿಸಿಟಿವಿ, ಬಂದೋಬಸ್ತ್ ಒದಗಿಸುವಂತೆ ವರ್ತಕರು ಉಪತಹಸೀಲ್ದಾರರಿಗೆ ಮನವಿ
ಕನ್ನಡಪ್ರಭ ವಾರ್ತೆ ಕೊಡೇಕಲ್
ಸಾರ್ವಜನಿಕರ ಅಂಗಡಿಗಳನ್ನು ಗುರಿಯಾಗಿಸಿಕೊಂಡು ತಡರಾತ್ರಿ ಸರಣಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ವ್ಯಾಪಾರ ಮುಗಿಸಿ ತೆರಳಿದ್ದ ಸಮಯ ಬಳಸಿಕೊಂಡು ಕಳ್ಳರು ಅಂಗಡಿಯ ಬಾಗಿಲಿನ ಬೀಗ ಮುರಿದು ಖದೀಮರು ಕೈಚಳಕ ತೋರಿದ್ದಾರೆ. ಕಳ್ಳರು, ಗಲ್ಲಾಪೆಟ್ಟಿಗೆಯಲ್ಲಿದ್ದ ನಗದು ಹಾಗೂ ಬೆಲೆಬಾಳುವ ಸಾಮಗ್ರಿಗಳನ್ನು ದೋಚಿದ್ದಾರೆ.* ಸಿಸಿಟಿವಿ, ಬಂದೋಬಸ್ತ್ ಗೆ ಮನವಿ : ಇತ್ತೀಚೆಗೆ ಅಂಗಡಿ-ಮುಂಗಟ್ಟುಗಳ ಕಳ್ಳತನ ಹೆಚ್ಚಾಗಿದ್ದು ಅಂಗಡಿ ಮಾಲೀಕರಲ್ಲಿ ಆತಂಕ ಮೂಡಿಸಿದೆ. ಜನರು ಅಂಗಡಿಗಳ ರಕ್ಷಣೆಗೆ ಸಿ.ಸಿ.ಕ್ಯಾಮೆರಾ ಅಳವಡಿಸಿದ್ದರೂ ಕಳ್ಳರು ಅದನ್ನು ಧ್ವಂಸಗೊಳಿಸಿದ್ದಾರೆ. ಸಾರ್ವಜನಿಕರ ಪ್ರದೇಶಗಳಲ್ಲೇ ಇಂತಹ ಘಟನೆಗಳು ಮರುಕಳಿಸುತ್ತಿರುವುದರಿಂದ ವ್ಯಾಪಾರಿಗಳು ಆತಂಕದಲ್ಲಿದ್ದು, ಈ ಕುರಿತಾಗಿ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿಗಳ ಅಳವಡಿಸಲು ಹಾಗೂ ಕಳ್ಳರನ್ನು ಶೀಘ್ರವೇ ಬಂಧಿಸುವುದರೊಟ್ಟಿಗೆ ರಾತ್ರಿ ವೇಳೆ ಈ ಭಾಗದಲ್ಲಿ ಪೋಲಿಸ್ ಗಸ್ತು ಹೆಚ್ಚಿಸಬೇಕು ಎಂದು ವರ್ತಕರು ಉಪತಹಸೀಲ್ದಾರ ಹಾಗೂ ಸ್ಥಳೀಯ ಪೋಲಿಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.ಈ ಸಮಯದಲ್ಲಿ ಕಪ್ಪಡಿ ಸಂಗಯ್ಯ, ರಮೇಶ ಉಪ್ಪಲದಿನ್ನಿ, ಚನ್ನಬಸವ ಧನ್ನೂರ, ರಾಜು ಮೈಲೇಶ್ವರ, ಸಂಗು ವದರಿ, ಶಿವು ತಂಗಡಗಿ, ಹಲಕಲಪ್ಪಗೌಡ ಪಾಟೀಲ ಇದ್ದರು. -6ವೈಡಿಆರ್4 : ಕೊಡೇಕಲ್ ಗ್ರಾಮದಲ್ಲಿ ಹೆಚ್ಚಾಗಿರುವ ಸರಣಿಕಳ್ಳತನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿಸಿಟಿವಿ ಹಾಗೂ ಬಂದೋಬಸ್ತ್ ಒದಗಿಸಿಕೊಡುವಂತೆ ವರ್ತಕರು ಉಪತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಕಂದಾಯ ನಿರೀಕ್ಷಕ ಶಾಂತಪ್ಪ ದೊಡ್ಡಮನಿ ಇದ್ದರು.