7ಕ್ಕೂ ಹೆಚ್ಚು ಅಂಗಡಿ, ಮೆಡಿಕಲ್ ಶಾಪ್, ಮಾರ್ಟ್‌ಗಳಲ್ಲಿ ಕಳವು । ಕಳ್ಳರ ಬಂಧನಕ್ಕೆ ಸಾರ್ವಜನಿಕರ ಆಗ್ರಹ
ನಗರದಲ್ಲಿ ಮಂಗಳವಾರ ರಾತ್ರಿ ಕಳ್ಳರ ೭ಕ್ಕೂ ಹೆಚ್ಚು ಅಂಗಡಿ-ಮುಂಗಟ್ಟು, ಮೆಡಿಕಲ್ ಶಾಪ್, ಮಾರ್ಟ್‌ಗಳಲ್ಲಿ ಸರಣಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ನಗರದ ಡೂಂ ಲೈಟ್ ವೃತ್ತ, ಪಿ.ಸಿ ಬಡಾವಣೆ ಮುಖ್ಯರಸ್ತೆಯಲ್ಲಿರುವ ಅಂಗಡಿ-ಮುಂಗಟ್ಟುಗಳಲ್ಲಿ ಶೆಟರ್ ಮುರಿದು ಸರಣಿ ಕಳವು ಮಾಡಲಾಗಿದೆ. ಅಪೊಲೊ ಮೆಡಿಕಲ್ಸ್, ಮೆಡ್ ಪ್ಲಸ್, ಸೇರಿ ದಿನಸಿ ಸಾಮಗ್ರಿ ಮಾರ್ಟ್‌ಗಳಲ್ಲಿ ಕಳವು ಮಾಡಿರುವ ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.ರಾಡ್‌ನಿಂದ ಮುಂಭಾಗದ ಬಾಗಿಲು ಒಡೆದು ಕಳವು ಮಾಡಿರುವ ಕಳ್ಳರು, ಮೆಡ್ ಪ್ಲಸ್ ಮಳಿಗೆಯಲ್ಲಿದ್ದ ೫೦ ಸಾವಿರ ರು. , ಅಪೊಲೊ ಮಡಿಕಲ್ಸ್‌ನಲ್ಲಿದ್ದ ೧೧ ಸಾವಿರ ರು. ಕಳವು ಮಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ದಿನಸಿ ಮಾರ್ಟ್‌ಗಳ ಕ್ಯಾಶ್ ಬಾಕ್ಸ್‌ನಲ್ಲಿದ್ದ ಸಾವಿರಾರು ರು. ಕಳವು ಮಾಡಿ ಪರಾರಿಯಾಗಿರುವ ಆರೋಪಿಗಳು ಬಳಿಕ ಡೂಂಲೈಟ್ ವೃತ್ತ, ಪಿ.ಸಿ. ಬಡಾವಣೆ ಮುಖ್ಯರಸ್ತೆಯ ಒಟ್ಟು ೭ ಮಳಿಗೆಗಳಲ್ಲಿ ಕಳ್ಳತನ ಮಾಡಿದ್ದಾರೆ.