ಸರಣಿ ರಜೆ: ಪ್ರವಾಸಿ ತಾಣಗಳು ಗಿಜಿಗಿಜಿ

KannadaprabhaNewsNetwork |  
Published : Oct 05, 2026, 02:00 AM IST
ಈಶಾ ದೇಗುಲ | Kannada Prabha

ಸಾರಾಂಶ

ಗಾಂಧಿ ಜಯಂತಿ, ಶನಿವಾರ ಮತ್ತು ಭಾನುವಾರದ ಸಾಲು ಸಾಲು ರಜೆಗಳಿಂದಾಗಿ ರಾಜ್ಯಾದ್ಯಂತ ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕುತ್ತಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳುರು

ಗಾಂಧಿ ಜಯಂತಿ, ಶನಿವಾರ ಮತ್ತು ಭಾನುವಾರದ ಸಾಲು ಸಾಲು ರಜೆಗಳಿಂದಾಗಿ ರಾಜ್ಯಾದ್ಯಂತ ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕುತ್ತಿತ್ತು.

ಧಾರ್ಮಿಕ ಸ್ಥಳಗಳು, ಯಾತ್ರಾ ಕ್ಷೇತ್ರಗಳು, ಸ್ಮಾರಕ, ಅರಮನೆಗಳು ಪ್ರವಾಸಿಗರ ಮೆಚ್ಚಿನ ತಾಣವಾಗಿತ್ತು.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವಿಶ್ವ ವಿಖ್ಯಾತ ಹಂಪಿ ಸ್ಮಾರಕಕ್ಕೆ ಭಾನುವಾರ ಪ್ರವಾಸಿಗರ ದಂಡೇ ಹರಿದುಬಂದಿತ್ತು.

ಚಿಕ್ಕಬಳ್ಳಾಪುರ ಜಿಲ್ಲೆಯ ಈಶಾ ಫೌಂಡೇಷನ್‌ನ 112 ಅಡಿಯ ಪ್ರಸಿದ್ಧ ಶಿವನ ಆದಿಯೋಗಿ ಪ್ರತಿಮೆ ವೀಕ್ಷಿಸಲು ಜನಸಾಗರವೇ ಹರಿದುಬಂದಿತ್ತು. ಕಣ್ಣು ಹಾಯಿಸಿದ ಕಡೆಯೆಲ್ಲ ಜನವೊ ಜನ. ಇನ್ನು ಶಿವಮೊಗ್ಗ ಜಿಲ್ಲೆಯ ಸಕ್ರೇಬೈಲು ಆನೆ ಬಿಡಾರಕ್ಕೆ ಅ.4ರ ಒಂದೇ ದಿನ 1160 ಮಂದಿ ದಾಂಗುಡಿಯಿಟ್ಟರು. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯಕ್ಕೆ ಒಂದೇ ದಿನ 30,000 ಜನರು ಭೇಟಿ ನೀಡಿದ್ದರು. ಧರ್ಮಸ್ಥಳ ಭಾನುವಾರ ಭಜನಾ ಕಮ್ಮಟದ ಸಮಾರೋಪ ಇದ್ದುದರಿಂದ ಭಕ್ತರ ಸಂಖ್ಯೆ ಸಾಕಷ್ಟು ಇತ್ತು. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ ಭಾನುವಾರ ಭಕ್ತರ ಪ್ರವಾಹವೇ ಹರಿದುಬಂದಿತ್ತು. ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ತಮಿಳುನಾಡಿನಿಂದಲೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಶೃಂಗೇರಿ ಶಾರದಾ ಪೀಠ, ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಕ್ಕೂ ಭಾರೀ ಜನದಟ್ಟಣೆ ಇತ್ತು. ಮೈಸೂರು, ಕೆಆರ್‌ಎಸ್‌, ಮೇಲುಕೋಟೆ, ಆದಿಚುಂಚನಗಿರಿ, ನಿಮಿಷಾಂಬ, ಕೆ.ಆರ್‌.ಪೇಟೆಯ ಭೂವರಾಹಸ್ವಾಮಿ, ಮಳವಳ್ಳಿ ತಾಲೂಕು ಹಲಗೂರು ಮುತ್ತತ್ತಿ ಆಂಜನೇಯಸ್ವಾಮಿ ದೇಗುಲ ಸೇರಿ ರಾಜ್ಯದ ಬಹುತೇಕ ಎಲ್ಲ ಪ್ರವಾಸಿ, ಯಾತ್ರಾ ಸ್ಥಳಗಳು ಜನರಿಂದ ತುಂಬಿ ತುಳುಕಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಲುವೆಗಳಿಗೆ ಸಮರ್ಪಕ ನೀರು ಹರಿಸಲು ತುಂಗಭದ್ರಾ ರೈತ ಸಂಘ ಆಗ್ರಹ
ಕಾಣೆಯಾದ ಮಕ್ಕಳ ಪತ್ತೆಗೆ ಪೊಲೀಸ್ ಇಲಾಖೆ ಚುರುಕು