- ಯಲವಟ್ಟಿ ಗುರುಸಿದ್ದಾಶ್ರಮದಲ್ಲಿ ಅಮಾವಾಸ್ಯೆ ಸತ್ಸಂಗ ಕಾರ್ಯಕ್ರಮ
ಮಲೇಬೆನ್ನೂರು: ಗುರುವಿನ ಅನುಗ್ರಹ ತೋರಲು ಗುರುಸೇವೆ ಅಗತ್ಯವಿದೆ ಎಂದು ಗುರುಸಿದ್ದಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ನುಡಿದರು.
ಇಲ್ಲಿಗೆ ಸಮೀಪದ ಯಲವಟ್ಟಿ ಗುರುಸಿದ್ದಾಶ್ರಮದಲ್ಲಿ ಭಾನುವಾರ ರಾತ್ರಿ ಅಮಾವಾಸ್ಯೆ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಭಕ್ತರಿಗೆ ಸಂದೇಶ ನೀಡಿದರು. ಕಲಿಯುಗದಲ್ಲಿ ಗುರುಸೇವೆ ಕಷ್ಟವಾಗಿತ್ತು. ಗುರುಭಕ್ತಿ, ಸೇವಾನಿಷ್ಠೆ, ಪ್ರಾಮಾಣಿಕತೆ ತುಂಬಿ ತುಳುಕುತ್ತಿತ್ತು ಎಂದರು.ಹಿಂದಿನ ಮಹಾತ್ಮರಾದ ಸಿದ್ದಾರೂಢರು, ಗರಗದ ಮಳಿವಾಳಪ್ಪ, ಶಿಶುನಾಳ ಷರೀಫ್, ನಾಗಲಿಂಗಜ್ಜ, ಶಿವಾನಂದ ಗುರುಗಳು ನಿತ್ಯಾನಂದರು ತಮ್ಮ ಪವಾಡದಿಂದ ಹೆಸರಾಗಿದ್ದಾರೆ. ಯಾವ ಭಕ್ತರು ಗುರುಗಳಿಗೆ ಶರಣಾಗುತ್ತಾರೋ ಅವರಿಗೆ ಗುರುರಕ್ಷಣೆ ಒದಗಿಸುತ್ತಾರೆ ಎಂದರು.
ಶರಣರಾದ ಹೊನ್ನಪ್ಪ ಮುದೇನೂರು, ಬಿ.ಹನುಮಂತಪ್ಪ, ಕೆ.ಮಹದೇವಪ್ಪ, ಪ್ರವಚನಕಾರ ಡಿ.ಸಿದ್ದೇಶ್ ಅನುಭವ ಹಂಚಿಕೊಂಡರು. ಹಲವು ಗ್ರಾಮಗಳ ಮಾಳಗಿ ಗುಡ್ಡಪ್ಪ, ಡಿ.ರಾಜಣ್ನ, ನಾಗರಾಜಪ್ಪ, ಶೇಖರಪ್ಪ, ರೇವಣಸಿದ್ದಯ್ಯ, ಯೋಧ ಶಿವಕುಮಾರ್, ಕೃಷ್ಣಪ್ಪ, ಭೀಷ್ಮಾಚಾರ್ ಹಾಗೂ ಕುಂಬಳೂರು, ಮಲೇಬೆನ್ನೂಉರ, ಹೊಳೆಸಿರಿಗೆರೆ, ಜಿಗಳಿ ಗ್ರಾಮಗಳ ಭಕ್ತರು ಇದ್ದರು.
ಕಲಾವಿದರಾದ ವೆಂಕಟೇಶ್, ಕವನಶ್ರೀ, ಕೆ.ಕುಬೇರಪ್ಪ ಅವರು ವಚನ ಗೀತೆ, ಭಕ್ತಿಗೀತೆ ಹಾಡಿದರು. ಜಿಗಳಿ, ಲಕ್ಕಶೆಟ್ಟಿಹಳ್ಳಿ ಕಲಾವಿದರಿಂದ ಭಜನೆ ನಡೆಯಿತು.- - -
-ಚಿತ್ರ೧: ಯಲವಟ್ಟಿ ಗುರುಸಿದ್ದಾಶ್ರಮದಲ್ಲಿ ಮಾಸಿಕ ಸತ್ಸಂಗ ಕಾರ್ಯಕ್ರಮ ನಡೆಯಿತು.