ಸೇವಾ ಮನೋಭಾವವೇ ನಿಜವಾದ ಉದ್ಯಮಶೀಲತೆ

KannadaprabhaNewsNetwork |  
Published : Sep 14, 2025, 01:04 AM IST
ಿ್ಿ್ | Kannada Prabha

ಸಾರಾಂಶ

ತುಮಕೂರು ವಿಶ್ವವಿದ್ಯಾಲಯದ ಪ್ರೋತ್ಸಾಹದಿಂದ ತುಮಕೂರು ಇನ್ನೋವೇಶನ್ ಇಂಕ್ಯುಬೇಶನ್ ಆ್ಯಂಡ್ ಎಂಟ್ರಪ್ರಿನರ್‌ಶಿಪ್ ಕೌನ್ಸಿಲ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಉದ್ಯಮಶೀಲತಾ ಬಿಸಿನೆಸ್ ಕಾನ್ಕ್ಲೇವ್ – ಅನ್ವಯ 2025 ಶನಿವಾರ ಯಶಸ್ವಿಯಾಗಿ ನೆರವೇರಿತು. ವಿವಿಧ ಕ್ಷೇತ್ರಗಳ ಗಣ್ಯರು ತಮ್ಮ ಚಿಂತನೆಗಳೊಂದಿಗೆ, ಜೀವನಾನುಭವಗಳೊಂದಿಗೆ, ಕೇವಲ ಲಾಭಕ್ಕಿಂತ ಹೆಚ್ಚಾಗಿ ಮೌಲ್ಯಾಧಾರಿತ ಉದ್ಯಮಶೀಲತೆಯ ಸಂದೇಶವನ್ನು ಹಂಚಿಕೊಂಡರು.

ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ವಿಶ್ವವಿದ್ಯಾಲಯದ ಪ್ರೋತ್ಸಾಹದಿಂದ ತುಮಕೂರು ಇನ್ನೋವೇಶನ್ ಇಂಕ್ಯುಬೇಶನ್ ಆ್ಯಂಡ್ ಎಂಟ್ರಪ್ರಿನರ್‌ಶಿಪ್ ಕೌನ್ಸಿಲ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಉದ್ಯಮಶೀಲತಾ ಬಿಸಿನೆಸ್ ಕಾನ್ಕ್ಲೇವ್ – ಅನ್ವಯ 2025 ಶನಿವಾರ ಯಶಸ್ವಿಯಾಗಿ ನೆರವೇರಿತು. ವಿವಿಧ ಕ್ಷೇತ್ರಗಳ ಗಣ್ಯರು ತಮ್ಮ ಚಿಂತನೆಗಳೊಂದಿಗೆ, ಜೀವನಾನುಭವಗಳೊಂದಿಗೆ, ಕೇವಲ ಲಾಭಕ್ಕಿಂತ ಹೆಚ್ಚಾಗಿ ಮೌಲ್ಯಾಧಾರಿತ ಉದ್ಯಮಶೀಲತೆಯ ಸಂದೇಶವನ್ನು ಹಂಚಿಕೊಂಡರು.ಕಾರ್ಯೆಕ್ರಮವನ್ನು ಉದ್ಘಾಟಿಸಿದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಉದ್ಯಮಶೀಲತೆ ಕೇವಲ ಹಣ ಸಂಪಾದನೆಗಾಗಿ ಅಲ್ಲ, ಅದು ಪ್ರಾಮಾಣಿಕತೆ, ಚಿಂತನೆ ಮತ್ತು ಸೇವಾ ಮನೋಭಾವದ ಮೇಲೆ ನಿಲ್ಲಬೇಕು ಎಂದು ತಿಳಿಸಿದರು. ತಮ್ಮ ವೃತ್ತಿ ಜೀವನದ ಉದಾಹರಣೆಗಳು ಮತ್ತು ಪ್ರಕರಣಗಳಿಂದ ಅವರು ಸಮಾಜಮುಖಿ ಉದ್ಯಮದ ಅಗತ್ಯವನ್ನು ಮನದಟ್ಟುಗೊಳಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಪ್ರಾಡ್ ಇಂಡಸ್ಟ್ರೀಸ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ಎಚ್. ಜಿ. ಚಂದ್ರಶೇಖರ್ ಮಾತನಾಡಿ ತಾವು ದೊಡ್ಡ ಕಬ್ಬಿಣ-ತಾಮ್ರೋದ್ಯಮವನ್ನು ಕಟ್ಟಿದ ಹಾದಿಯನ್ನು ಹಂಚಿಕೊಂಡರು. ಹಣ ಮತ್ತು ಲಾಭ ಅಲ್ಪಾವಧಿಯಲ್ಲಿ ಫಲ ಕೊಡಬಹುದು, ಆದರೆ ದೀರ್ಘಾವಧಿಯಲ್ಲಿ ಉದ್ಯಮವನ್ನು ಉಳಿಸಿಕೊಳ್ಳುವುದು ಸೇವಾ ಮನೋಭಾವ ಮಾತ್ರವೇ ಎಂದು ಸಂದೇಶ ನೀಡಿದರು. ಜೊತೆಯಲಿ ಮತ್ತು ಸ್ವಯಂ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ ನಿಶಾ ಯೋಗೇಶ್ವರ್, ಉದ್ಯಮಶೀಲತೆಯ ಅಡಗಿರುವ ಸವಾಲುಗಳನ್ನು ಬಿಚ್ಚಿಟ್ಟರು. ಗರ್ಭಗುಡಿ ಐವಿಎಫ್ ಗುಂಪಿನ ಸಹ ಸಂಸ್ಥಾಪಕಿ, ಹೂಡಿಕೆದಾರರ ಹಿಂದೆ ಓಡುವುದಕ್ಕಿಂತ ಬೂಟ್ಸ್ಟ್ರಾಪ್ಡ್ ಮಾದರಿಯ ಶಕ್ತಿಯನ್ನು ಹಂಚಿಕೊಂಡರು. ಕರ್ನಾಟಕ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ರಾಮಕೃಷ್ಣಯ್ಯ, ಗುರುಗಳ ಪಾತ್ರವನ್ನು ನೆನಪಿಸಿ, ಗ್ರಾಮೀಣ ಸ್ಟಾರ್ಟ್ ಅಪ್‌ಗಳು ಭಾರತದ ಜಿಡಿಪಿ ಯಲ್ಲಿ ನೀಡುತ್ತಿರುವ ಮಹತ್ವದ ಕೊಡುಗೆ ಬಗ್ಗೆ ಪ್ರಸ್ತಾಪಿಸಿದರು.ಬಿಆರ್ ಎಐ ಉಪಾಧ್ಯಕ್ಷ ಎನ್. ಆರ್. ಬಿ. ಗಾರ್ಡಾ, ತಮ್ಮ ಅನುಭವ ಹಂಚಿಕೊಳ್ಳುತ್ತಾ “ದೌಲತ್” (ಸಂಪತ್ತು) ಮತ್ತು “ಶೌಲತ್” (ಶಕ್ತಿ)ಎಂಬ ಪದಗಳಿಂದ ಆರ್ಥಿಕ ಲಾಭದ ಜೊತೆಗೆ ನೈತಿಕ ಮೌಲ್ಯಗಳ ಸಮತೋಲನದ ಅಗತ್ಯವನ್ನು ವಿವರಿಸಿದರು. ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಅವರು ಮಾತನಾಡಿ ತುಮಕೂರು ವಿವಿ ಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಇನ್ನೋವೇಶನ್ ಮತ್ತು ಇಂಕ್ಯುಬೇಶನ್ ಕೇಂದ್ರ ಸ್ಥಾಪನೆಯಾಗಿದೆ. ಇದೇ ರೀತಿ ಭಾರತದಲ್ಲಿ ಮೊದಲ ಬಾರಿಗೆ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಊಟ ಯೋಜನೆ ಜಾರಿಗೆ ತಂದಿದೆ. ಇದು ಕೇವಲ ಕಲ್ಯಾಣ ಯೋಜನೆ ಅಲ್ಲ, ಬದಲಿಗೆ ಯಾವುದೇ ವಿದ್ಯಾರ್ಥಿ ಆರ್ಥಿಕ ಅಡೆತಡೆಗಳಿಂದ ಹಿಂದುಳಿಯದಂತೆ ಮಾಡಲು ಕೈಗೊಂಡ ತಂತ್ರಜ್ಞಾನಿ ಹೂಡಿಕೆ ಎಂದು ಅವರು ವಿವರಿಸಿದರು.ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ, ಅವರು ಈ ಕಾನ್ಕ್ಲೇವ್‌ನಿಂದ ಏನು ನಿರೀಕ್ಷಿಸುತ್ತೀರಿ ಮತ್ತು ನೀವು ಇದಕ್ಕೆ ಏನು ಕೊಡುಗೆ ನೀಡಬಹುದು ಎಂದು ಪ್ರಶ್ನಿಸಿ ಆಲೋಚನೆಗೆ ಪ್ರೇರೇಪಿಸಿದರು. ಕೇಂದ್ರಗಳು ಕೇವಲ ಕಟ್ಟಡಗಳು ಅಲ್ಲ, ಬದಲಿಗೆ ಮಾರ್ಗದರ್ಶನ, ಗುರುತ್ವ ಮತ್ತು ಸಹಕಾರದ ಪರಿಸರ ವ್ಯವಸ್ಥೆಎಂದು ತಿಳಿಸಿದರು. ಕೊನೆಯಲ್ಲಿ ಅವರು ಒಬ್ಬ ಉದ್ಯೋಗಿ ಒಂದು ಕುಟುಂಬಕ್ಕೆ ಸಾಕಾಗಬಹುದು, ಆದರೆ ಒಬ್ಬ ಉದ್ಯಮಿ ಅನೇಕ ಕುಟುಂಬಗಳನ್ನು ಬದುಕಿಸಬಲ್ಲನು ಎಂಬ ಸಂದೇಶ ನೀಡಿ, ಡಾ. ಚಂದ್ರಶೇಖರ್ ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿದರು.ಎರಡು ದಿವಸಗಳ ಕಾಲ ನಡೆಯುವ ಈ ವ್ಯವಹಾರ ಸಮಾವೇಶದಲ್ಲಿ ಹೊಸ ಉದ್ದಿಮೆದಾರರು, ಕೈಗಾರಿಕೆಗಳ ಮುಖ್ಯಸ್ಥರು ಸೇರಿದಂತೆ 400 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ತುಮಕೂರು, ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆಯಿಂದ ಸುಮಾರು 20 ಕ್ಕೂ ಹೆಚ್ಚು ಸ್ಟಾಲ್ ಗಳು ಬಂದಿದ್ದವು. ಕೃಷಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ಟಾಲ್ ಗಳು ಹೆಚ್ಚು ಬಂದಿದ್ದವು. ತೆಂಗಿನಕಾಯಿ, ಹುಣಸೆಹಣ್ಣು , ಮಳೆ ನೀರು ಕೊಯ್ಲು, ಈಶಾ ಸೇರಿದಂತೆ 20 ಕ್ಕೂ ಹೆಚ್ಚು ಸ್ಟಾಲ್ ಗಳು ಬಂದಿದ್ದವು. ಕಾರ್ಯಕ್ರಮದಲ್ಲಿ ಟಿಐಐಇಸಿ ಸಿಇಓ ಡಾ. ಸತೀಶ್ ಭವಂಕರ್ ಮತ್ತಿತರರು ಉಪಸ್ಥಿತರಿದ್ದರು. ಸಮಾವೇಶದಲ್ಲಿ ಬಂದಿದ್ದ ಸ್ಟಾಲ್ ಗಳನ್ನು ವೀಕ್ಷಿಸಿದ ಯುವ ಉದ್ದಿಮೆದಾರರು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ಟ್ರಾಟೆಜಿಕ್ ಪಾಲುದಾರರಾಗಿ ಓಎನ್ಎಫ್ ವೈ ಎಕ್ಸ್ , ಸಹಭಾಗಿಗಳಾಗಿ – ಇಷಾ ಔಟ್‌ರೀಚ್ ಮತ್ತು ಫುಡ್ ಚೈನ್ ಕ್ಯಾಂಪೇನ್ ಹಾಗೆಯೇ ಡಿಜಿಟಲ್ ಮಾರ್ಕೆಂಟಿಂಗ್ ಪಾರ್ಟನರ್ ಆಗಿ ಆಸ್ಪರಿನ್‌ ಕೂಜೆ ಪ್ರೈ.ಲಿ. ಸಹಕರಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ