ಆರೋಗ್ಯ ವ್ಯವಸ್ಥೆಯಲ್ಲಿ ದಾದಿಯರ ಸೇವೆ ಅಮೂಲ್ಯ: ಕೆ.ಟಿ.ಹನುಮಂತು

KannadaprabhaNewsNetwork |  
Published : May 12, 2026, 02:00 AM IST
11ಕೆಎಂಎನ್ ಡಿ21 | Kannada Prabha

ಸಾರಾಂಶ

ದಾದಿಯರು ರೋಗಿಗಳ ಪಾಲಿಗೆ ನಿಜವಾದ ದೇವರು. ಜಗತ್ತಿನಲ್ಲಿ ತಾಯಿ ನಂತರದ ಸ್ಥಾನ ದಾದಿಯರಿಗೆ ಇದೆ. ಸಾಂಕ್ರಾಮಿಕ ರೋಗಗಳು, ತುರ್ತು ಚಿಕಿತ್ಸೆ, ದೈನಂದಿನ ರೋಗಗಳ ಆರೈಕೆಯಲ್ಲಿ ತೊಡಗುವ ದಾದಿಯರು ರೋಗಿಗಳ ಪಾಲಿಗೆ ನಿಜವಾದ ದೇವರುಗಳಿದ್ದಂತೆ.

ಕನ್ನಡಪ್ರಭ ವಾರ್ತೆ ಮದ್ದೂರು

ಆರೋಗ್ಯ ವ್ಯವಸ್ಥೆಯಲ್ಲಿ ದಾದಿಯರ ಸೇವೆ ಅಮೂಲ್ಯವಾಗಿದೆ ಎಂದು ಅಲೆಯನ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.

ತಾಲೂಕಿನ ಕೆಸ್ತೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಅಲಯನ್ಸ್ ಕ್ಲಬ್ ಇಂಟರ್ನ್ ನ್ಯಾಷನಲ್ ಸಂಸ್ಥೆ ವತಿಯಿಂದ ಅಂತಾರಾಷ್ಟ್ರೀಯ ದಾದಿಯರ ದಿನದ ಅಂಗವಾಗಿ ಕೆ.ಪಿ.ಶಶಿಕಲಾ, ಪಿ.ರೂಪ, ಜಿ.ದಾಕ್ಷಾಯಿನಿ, ಬಿ.ಆಶಾರಾಣಿ, ಎಸ್.ರೇಣುಕಾ, ರಾಧಾ, ಎಸ್.ಕೆ.ಮನು ಹಾಗೂ ಜಿ.ಫಾತೀಮಾ ಅವರುಗಳಿಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪುರಸ್ಕಾರ ನೀಡಿ ಬಳಿಕ ಮಾತನಾಡಿದರು.

ಕೊರೋನಾ ಸಾಂಕ್ರಾಮಿಕ ಪಿಡುಗಿನಿಂದಾಗಿ ಇಡೀ ಜಗತ್ತು ಪರಿತಪಿಸುತ್ತಿತ್ತು. ಇಂತಹ ಸಂದರ್ಭದಲ್ಲಿ ದಾದಿಯರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಯೋಧರಂತೆ ಕೆಲಸ ಮಾಡಿರುವುದು ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ದಾದಿಯರು ರೋಗಿಗಳ ಪಾಲಿಗೆ ನಿಜವಾದ ದೇವರು. ಜಗತ್ತಿನಲ್ಲಿ ತಾಯಿ ನಂತರದ ಸ್ಥಾನ ದಾದಿಯರಿಗೆ ಇದೆ. ಸಾಂಕ್ರಾಮಿಕ ರೋಗಗಳು, ತುರ್ತು ಚಿಕಿತ್ಸೆ, ದೈನಂದಿನ ರೋಗಗಳ ಆರೈಕೆಯಲ್ಲಿ ತೊಡಗುವ ದಾದಿಯರು ರೋಗಿಗಳ ಪಾಲಿಗೆ ನಿಜವಾದ ದೇವರುಗಳಿದ್ದಂತೆ ಎಂದು ಅಭಿಪ್ರಾಯಪಟ್ಟರು.

ಅಲಯನ್ಸ್ ಸಂಸ್ಥೆಯ ಕೆ.ಆರ್.ಶಶಿಧರ್ ಮಾತನಾಡಿ, ಸರ್ಕಾರ ದಾದಿಯರ ಸೇವೆಯನ್ನು ಗುರುತಿಸಿ ಸೂಕ್ತ ವೇತನ ಹಾಗೂ ವಿಶೇಷ ಸೌಲಭ್ಯಗಳು ನೀಡಬೇಕು ಎಂದು ಆಗ್ರಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯಆರೋಗ್ಯ ನಿರೀಕ್ಷಕ ಶಂಕರೇಗೌಡ, ಒಡೆಯಾಧ್ಯಕ್ಷ ಎಸ್.ಎನ್. ಕೃಷ್ಣಪ್ಪ, ಜಿಲ್ಲಾ ಸಂಚಾಲಕ ಜಿ. ಧನಂಜಯ, ವೈದ್ಯಾಧಿಕಾರಿ ಡಾ.ನಿಸರ್ಗ, ಆಡಳಿತ ಅಧಿಕಾರಿ ಡಾ.ಆಯುಷಾ ದಬ್ಬಾನಿ, ಮದ್ದೂರು ವಕೀಲರ ಸಂಘದ ಅಧ್ಯಕ್ಷ ಎಂ. ಎನ್. ಶಿವಣ್ಣ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವತತ್ವ ಪಾಲಿಸಿದರೆ ಜನ್ಮ ಸಾರ್ಥಕ: ಎಸ್.ಎಸ್.ಪಾಟೀಲ್
ಸರ್ಕಾರಿ ಗೌರವದೊಂದಿಗೆ ಸುಧಾಕರ್‌ ಅಂತ್ಯಕ್ರಿಯೆ