ಭಕ್ತರ ನೆರವಿದ್ದರಷ್ಟೇ ಮಠಗಳಿಂದ ಸೇವೆ ಸಾಧ್ಯ

KannadaprabhaNewsNetwork |  
Published : Jun 10, 2026, 01:15 AM IST
ಭಕ್ತರಿಂದ ಭಕ್ತರಿಗೋಸ್ಕರ ಕೆರೆಗೋಡಿ-ರಂಗಾಪುರ ಶ್ರೀಮಠದಲ್ಲಿ ಮಹಾಮನೆ ನಿರ್ಮಾಣ : ರಂಗಾಪುರ ಶ್ರೀಗಳ ಅಭಿಮತ | Kannada Prabha

ಸಾರಾಂಶ

ಮಠಗಳು ಮತ್ತು ಭಕ್ತರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಭಕ್ತರ ನೆರವು ಮತ್ತು ಅವರ ಸಹಕಾರವಿದ್ದರಷ್ಟೇ ಸೇವೆ ಸಲ್ಲಿಸಲು ಸಾಧ್ಯ ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭವಾರ್ತೆ ತಿಪಟೂರು

ಮಠಗಳು ಮತ್ತು ಭಕ್ತರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಭಕ್ತರ ನೆರವು ಮತ್ತು ಅವರ ಸಹಕಾರವಿದ್ದರಷ್ಟೇ ಸೇವೆ ಸಲ್ಲಿಸಲು ಸಾಧ್ಯ ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಕೆರಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ನೂತನ ಮಹಾಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಮಾತನಾಡಿದ ಅವರು, ಮಠಗಳನ್ನು, ದೇವಾಲಯಗಳ ಕಟ್ಟುವ, ಬೆಳೆಸುವ ಶಕ್ತಿ ಭಕ್ತರಿಂದ ಸಾಧ್ಯ. ಈಗಿರುವ ನಮ್ಮ ಶ್ರೀ ಮಠದ ಮಹಾಮನೆ ನಿರ್ಮಾಣವಾಗಿ ಬಹಳಷ್ಟು ವರ್ಷಗಳಾಗಿವೆ. ಶ್ರೀಮಠದ ಭಕ್ತರು, ಹಿರಿಯ ವಿದ್ಯಾರ್ಥಿ ಸಂಘದವರು ಮಹಾಮನೆಯನ್ನು ನೂತನವಾಗಿ ಶ್ರೀಮಠದ ಹಿನ್ನಲೆ, ಇತಿಹಾಸ ಎಲ್ಲವೂ ಒಳಗೊಂಡಂತೆ ನಾವೇ ನಿರ್ಮಾಣ ಮಾಡಿಕೊಡುತ್ತೇವೆ ಎಂದು ನೀಲನಕ್ಷೆ ತಯಾರಿಸಿ ನಿರಂತರವಾಗಿ ಒತ್ತಡ, ಒತ್ತಾಯ ಮಾಡುತ್ತಿರುವುದರಿಂದ ನಾವೂ ಸಹ ಒಪ್ಪಿ ನೂತನ ಮಹಾಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದೇವೆ ಎಂದರು.

ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ. ಸೋಮಣ್ಣನ ಮಾತನಾಡಿ, ಕೆರೆಗೋಡಿ-ರಂಗಾಪುರ ಶ್ರೀ ಮಠ ಈ ನಾಡಿನ ಪ್ರಮುಖ ಮಠಗಳ ಸಾಲಿಗೆ ಸೇರಿದ್ದು ಶಿವ-ವಿಷ್ಣು ಒಟ್ಟಿಗೆ ನೆಲೆಸಿರುವ ವಿಶೇಷ ಸಂಗಮ ಕ್ಷೇತ್ರವಾಗಿದೆ. ಜಿಲ್ಲೆಯಲ್ಲಿ ಸಿದ್ಧಗಂಗಾ ಶ್ರೀಮಠದ ರೀತಿಯಲ್ಲೇ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರು ಶ್ರೀಮಠದ ೬ ಲಿಂಗೈಕ್ಯ ಶ್ರೀಗಳ ಮಹದಾಸೆಯಂತೆ ತಮ್ಮ ನೇತೃತ್ವದಲ್ಲಿ ತ್ರಿವಿಧ ದಾಸೋಹ ನಡೆಸುತ್ತಿದ್ದಾರೆ. ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಉಚಿತ ಅನ್ನಾಶ್ರಯದೊಂದಿಗೆ ಶಿಕ್ಷಣ ನೀಡುವಂತ ಬಹುದೊಡ್ಡ ಸೇವೆ ಸಲ್ಲಿಸುತ್ತಿರುವುದು ಸಂತೋಷದಾಯಕ. ನೂತನ ಮಹಾಮನೆಯ ಶಿಲನ್ಯಾಸವನ್ನು ಅತ್ಯಂತ ಸಂತೋಷದಿAದ ನೆರವೇರಿಸಿ ನಿರ್ಮಾಣ ಕಾರ್ಯ ಸುಸೂತ್ರವಾಗಿ ನಡೆಯಲಿ ಎಂದು ಹಾರೈಸಿದ್ದೇನೆ ಎಂದರು. ಶ್ರೀಮಠಕ್ಕೆ ಯಾವುದೇ ರೀತಿಯ ಆದಾಯವಿಲ್ಲದಿದ್ದರೂ ಶ್ರೀಗಳು ಪ್ರತಿನಿತ್ಯ ಗ್ರಾಮೀಣ ಭಾಗದ ಹಳ್ಳಿಗಳಿಗೆ ತೆರಳಿ ರೈತರಿಂದ ಸ್ವೀಕರಿಸುವ ಭಿಕ್ಷೆಯಲ್ಲೇ ಸಾಕಷ್ಟು ಸೇವೆಗಳನ್ನು ನೀಡುತ್ತಿದ್ದಾರೆ. ಶ್ರೀಮಠದ ಜೊತೆ ನಾನು ಯಾವಾಗಲೂ ಕೈಜೋಡಿಸುವವನಿದ್ದು ಶ್ರೀಗಳ ಸೇವೆ ಮಾದರಿಯಾಗಿದೆ ಎಂದು ಹೇಳಿದರು. ಬಿಜೆಪಿ ಅಧ್ಯಕ್ಷರಾದ ಹೆಬ್ಬಾಕ ರವಿ, ಶ್ರೀ ಕ್ಷೇತ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಯು ಕೆ ಶಿವಪ್ಪ ಕಾರ್ಯದರ್ಶಿ ಯು ಎಸ್ ಬಸವರಾಜು, ಶ್ರೀಮಠದ ಶಂಕರಪ್ಪ, ಗಂಗಣ್ಣ, ಜೆಡಿಎಸ್ ಮುಖಂಡರಾದ ಕೆ.ಟಿ. ಶಾಂತಕುಮಾರ್, ಬೋರ್ವೆಲ್ ಮಧುಸೂದನ್, ಕೊಬ್ಬರಿ ವರ್ತಕರಾದ ಲೋಕೇಶ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಶಶಿಕಿರಣ್, ವಿಶ್ವದೀಪ ನಾಗೇಶ್, ಅರಸೀಕೆರೆ ಬಿಜೆಪಿ ಮುಖಂಡರಾದ ಜಿವಿಟಿ ಬಸವರಾಜು, ಹಾಸನ ಜಿಲ್ಲಾ ಬಿಜೆಪಿ ಮುಖಂಡರಾದ ಗಂಗೂರು ಶಿವಕುಮಾರ್, ಹಾಸನ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷರಾದ ನವಿಲೆಪರಮೇಶ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಯಶಸ್ವಿಗೊಳಿಸಿ
ಅಧಿಕಾರಿಗಳ ವರ್ಗಾವಣೆಗೆ ಶಾಸಕ ಚಿಮ್ಮನಕಟ್ಟಿ ಸೂಚನೆ