- ಮೆಣಸೂರು ಗ್ರಾಮದ ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತ ಸೈನಿಕರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸೈನಿಕನಾಗಿ ದೇಶ ಸೇವೆಸಲ್ಲಿಸಿರುವುದರಿಂದ ಸಮಯ ಪಾಲನೆ, ಕರ್ತವ್ಯ ಪ್ರಜ್ಞೆ ಬಗ್ಗೆ ನನಗೆ ಹೆಚ್ಚು ಅನುಭವವಾಗಿದೆ. ದೇಶ ಸೇವೆ ಮಾಡುವುದು ಪುಣ್ಯದ ಕೆಲಸ ಎಂದು ನಿವೃತ್ತ ಸೈನಿಕ ಪ್ರಸಾದ್ ಹೇಳಿದರು.ತಾಲೂಕಿನ ಮೆಣಸೂರು ಗ್ರಾಮದ ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ 79 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯದ ಕಲಿಕೆ ಜತೆಗೆ ಸಂಸ್ಕಾರ ಕಲಿಯಬೇಕು. ಭವಿಷ್ಯದಲ್ಲಿ ಉದ್ಯೋಗ ಪಡೆಯುವಲ್ಲಿ ಆಸಕ್ತಿವಹಿಸಿ ಮಿಲಿಟರಿ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಉದ್ಯೋಗ ಸುಲಭವಾಗಿ ಪಡೆಯಬಹುದು. ಉದ್ಯೋಗಕ್ಕೆ ಅರ್ಜಿಸಲ್ಲಿಸಿ ಅದನ್ನು ಪಡೆಯುವಲ್ಲಿ ನಿರಂತರ ಕಠಿಣ ಪರಿಶ್ರಮವಹಿಸಬೇಕು. ಹಿಂದೆ ಗುರುಗಳು ನೀಡಿದ ಶಿಕ್ಷಣ ಮತ್ತು ಶಿಕ್ಷೆಯಿಂದ ನನಗೆ ಉನ್ನತ ಸ್ಥಾನಕ್ಕೇರುವಂತೆ ಮಾಡಿದೆ. ನಾವು ಓದಿದ ಶಾಲೆಯಲ್ಲಿ ನಮ್ಮನ್ನು ಕರೆದು ಸನ್ಮಾನಿಸಿರುವುದು ಸಂತಸ ತಂದಿದೆ ಎಂದರು.
ಸನ್ಮಾನ ಸ್ವೀಕರಿಸಿದ ಇನ್ನೊಬ್ಬ ನಿವೃತ್ತ ಸೈನಿಕ ಸಿಬಿ ಮಾತನಾಡಿ, ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ಭಾರತ ಅತ್ಯಂತ ಸುರಕ್ಷಿತ ಪ್ರದೇಶ. ಮಕ್ಕಳು ಕಾಲೇಜು ಹಂತದಲ್ಲಿಯೇ ದೇಶಾಭಿಮಾನ, ದೇಶ ಪ್ರೇಮ ಬೆಳೆಸಿಕೊಳ್ಳಬೇಕು. ಅವಕಾಶ ಸಿಕ್ಕರೆ ದೇಶ ಸೇವೆ ಮಾಡಬೇಕು ಎಂದರು.ಪ್ರಾಂಶುಪಾಲೆ ಸಿಸ್ಟರ್ ಶುಭಾ ಮಾತನಾಡಿ. ವಿದ್ಯಾರ್ಥಿಗಳು ಸ್ವತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕು. ದೇಶ ಸೇವೆ ಸಲ್ಲಿಸಿದ ಮಾಜಿ ಸೈನಿಕರು ನೀಡಿದ ಸಲಹೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಜೀವನದಲ್ಲಿ ಸಾಧನೆ ಮಾಡಬೇಕು ಎಂದರು.
ಕಾರ್ಮೆಲ್ ವಿದ್ಯಾಸಂಸ್ಥೆ ವ್ಯವಸ್ಥಾಪಕಿ ಸಿಸ್ಟರ್ ಜೋಯ್ಸಿ, ಕಾರ್ಮೆಲ್ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಸಿಸ್ಟರ್ ಟೀನಾ, ಸಹ ಶಿಕ್ಷಕಿ ಸಿಸ್ಟರ್ ಲಿಸೆಟ್, ಉಪನ್ಯಾಸಕರಾದ ಟಿ.ಮಂಜುನಾಥ್, ಸ್ವಪ್ನ ಹೆಗ್ಡೆ, ನಂದಿನಿ ಆಲಂದೂರು, ಅನುಷಾ, ಪ್ರಿಜೀನಾ, ಕೆ.ವಿ.ನಾಗರಾಜ್,ವಿದ್ಯಾರ್ಥಿಗಳಾದ ಪೌರ್ಣಮಿ, ಪ್ರಥಮ್ ಇದ್ದರು.