ಕನ್ನಡಪ್ರಭ ವಾರ್ತೆ ಪಾಂಡವಪುರ
ಸಾರ್ವಜನಿಕರು ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಲು ಇಚ್ಛಿಸಿದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ, ಕಾನೂನು ಸೇವೆಗಳ ಪ್ರಾಧಿಕಾರ/ ತಾಲೂಕು ಕಾನೂನು ಸೇವೆಗಳ ಸಮಿತಿಗಳಿಗೆ ಆನ್-ಲೈನ್/ವೀಡಿಯೋಕಾನ್ಫರೆನ್ಸ್/-ಮೇಲ್/ಮುಖಾಂತರ/ E-mail: tiscpandavapura@gmail.com ಅಥವಾ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳನ್ನು ಮತ್ತು ತಾಲ್ಲೂಕು ಕಾನೂನು ಸೇವೆಗಳ ಸಮಿತಿಗಳನ್ನು ಖುದ್ದಾಗಿ ಆನ್-ಲೈನ್/ವೀಡಿಯೋ ಕಾನ್ಸೆರೆನ್ಸ್ /ಇ-ಮೇಲ್/ ವಾಟ್ಸ್ ಆಪ್/ ಎಲೆಕ್ಟ್ರಾನಿಕ್ ಮೋಡ್ ಮೂಲಕ ಸಂಪರ್ಕಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಕೋರಿದರು.ಪಾಂಡವಪುರ ತಾಲೂಕಿನಲ್ಲಿ ಫೆ.1, 2026ರ ಅನ್ವಯ ಒಟ್ಟು 6397 ಪ್ರಕಣಗಳಲ್ಲಿ, ಬಾಕಿ ಇರುವ ಪ್ರಕರಣಗಳನ್ನು ರಾಜಿಗಾಗಿ ತೆಗೆದುಕೊಳ್ಳಲಾಗಿದ್ದು, ಎಂ.ವಿ.ಸಿ ಪ್ರಕರಣಗಳು 120, ಎಂ.ಎಂ.ಆರ್.ಡಿ ಪ್ರಕರಣಗಳು 5, ಎಲ್.ಎ.ಸಿ ಪ್ರಕರಣಗಳು 2, ವಿಭಾಗದ ದಾವೆ ಪ್ರಕರಣಗಳು 140, ಇತರೆ ಸಿವಿಲ್ ಪ್ರಕರಣಗಳು 250, ನಿರ್ಧಿಷ್ಟ ಪರಿಹಾರಕ್ಕಾಗಿ ದಾವೆ 200, ಕ್ರಿಮಿನಲ್ ಪ್ರಕರಣಗಳು 50 ಹಾಗೂ ಎನ್.ಐ ಆಕ್ಟ್ ಪ್ರಕರಣಗಳು 360 ಸೇರಿದಂತೆ ಒಟ್ಟು 1127 ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಆದಾಲತ್ಗೆ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಬಿ.ಪಾರ್ವತಮ್ಮ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಬಾಬು, ವಕೀಲರ ಸಂಘದ ಅಧ್ಯಕ್ಷ ಗಂಗರಾಜು ಇತರರಿದ್ದರು.