ಕನ್ನಡಪ್ರಭ ವಾರ್ತೆ ಹೊನ್ನಾಳಿ:
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ಭಾರತ ಸೇವಾ ದಳದ ವತಿಯಿಂದ ತಾಲೂಕಿನ ದೈಹಿಕ ಶಿಕ್ಷಕರು, ಶಿಕ್ಷಕರಿಗೆ ರಾಷ್ಟ್ರಗೀತೆ, ರಾಷ್ಟ್ರಧ್ವಜ ಹಾಗೂ ಡ್ರಮ್ ಸೆಟ್ ನಿರ್ವಹಣೆ ಕುರಿತ ಕಾರ್ಯಾಗಾರದ ಸಮಾರೋಪ ಸಮಾಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಕರಿಗೆ ಸೂಕ್ತ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ದೇಶಾಭಿಮಾನ, ದೈಹಿಕ ಮತ್ತು ಮಾನಸಿಕ ಆರೋಗ್ಯ, ಯೋಗ, ಧ್ಯಾನ ಪ್ರಾಣಾಯಾಮದ ಬಗ್ಗೆ ಅತ್ಯುತ್ತಮವಾದ ತರಬೇತಿ ಭಾರತ ಸೇವಾದಳ ನೀಡುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ರಾಜ್ಯ ಸಂಪನ್ಮೂಲ ಶಿಕ್ಷಕರಾದ ಜಯಪ್ಪ ರಾಷ್ಟ್ರಧ್ವಜ ಆರೋಹಣ, ಅವರೋಹಣ ಮತ್ತು ಧ್ವಜ ಇತಿಹಾಸದ ಬಗ್ಗೆ ಇರುವ ನೀತಿ ನಿಯಾಮಾವಳಿಗಳ ಬಗ್ಗೆ ಮಾಹಿತಿ ನೀಡಿದರು.
ಭಾರತ ಸೇವಾದಳ ಜಿಲ್ಲಾ ಸಂಘಟಕರಾದ ಫಕ್ಕೀರ್‌ಗೌಡ, ಜಿಲ್ಲಾ ಸಮಿತಿ ಸದಸ್ಯರಾದ ಹನುಮಂತಪ್ಪ, ಸಂಪನ್ಮೂಲ ಶಿಕ್ಷಕರಾದ ಮಂಜುನಾಥ ಭೀಮಪ್ಪ, ಜಿಲ್ಲಾ ಸಮಿತಿ ಸದಸ್ಯರು ಹಾಗೂ ನಿವೃತ್ತ ಶಿಕ್ಷಕ ರುದ್ರಯ್ಯ ಅವರು ಸೇವಾದಳದ ಧ್ವಜಾರೋಹಣ ಮಾಡುವ ಮೂಲಕ ಸೇವಾದಳದ ತಮ್ಮ 47 ವರ್ಷಗಲ ಅನುಭವಗಳನ್ನು ಹಂಚಿಕೊಂಡರು.