ಸೇವಾಲಾಲ ಒಬ್ಬ ದನಗಾಹಿಯಾಗಿದ್ದರೂ ಜೀವನದ ಅನುಭವವನ್ನು ತತ್ವದ ಮೂಲಕ ಭೋದಿಸಿ ಜನರಲ್ಲಿದ್ದ ಅಜ್ಞಾನ ದೂರ ಮಾಡಿದ ಮಹಾನ ದಾರ್ಶನಿಕ ಎಂದು ರಾಷ್ಟೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.
ಬಸವನಬಾಗೇವಾಡಿ: ಸೇವಾಲಾಲ ಒಬ್ಬ ದನಗಾಹಿಯಾಗಿದ್ದರೂ ಜೀವನದ ಅನುಭವವನ್ನು ತತ್ವದ ಮೂಲಕ ಭೋದಿಸಿ ಜನರಲ್ಲಿದ್ದ ಅಜ್ಞಾನ ದೂರ ಮಾಡಿದ ಮಹಾನ ದಾರ್ಶನಿಕ ಎಂದು ರಾಷ್ಟೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.
ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ ವೃತ್ತದಲ್ಲಿ ರಾಷ್ಟೀಯ ಬಸವ ಸೈನ್ಯದಿಂದ ಹಮ್ಮಿಕೊಂಡಿದ್ದ ಸೇವಾಲಾಲ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು. ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಸಾಗಿ ಎಂದು ಸಾರಿದವರು. ಇದಲ್ಲದೇ ಮಾನವ ಜನ್ಮ ಪವಿತ್ರವಾದದ್ದು ಇದನ್ನು ಹಾಳು ಮಾಡಿಕೊಳ್ಳಬೇಡಿ ಎನ್ನುವ ಅವರ ಬೋಧನೆಗಳು ಬಂಜಾರಾ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.