- ಸೂರಗೊಂಡನಕೊಪ್ಪದಲ್ಲಿ 3 ದಿನಗಳ ಸಂತ ಸೇವಾಲಾಲ್ ಜಾತ್ರೆಗೆ ಚಾಲನೆ
ಕನ್ನಡಪ್ರಭ ವಾರ್ತೆ ನ್ಯಾಮತಿ
ತಾಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್ ಸಂತ ಸೇವಾಲಾಲ್ ಪುಣ್ಯಕ್ಷೇತ್ರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸಂತ ಸೇವಾಲಾಲ್ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಕಾಟಿ ಆರೋಹಣ ಮಾಡುವ ಮೂಲಕ ಅದ್ಧೂರಿಯಾಗಿ ಚಾಲನೆಯಾಯಿತು.ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ದೂದ್ಯಾ ತಳವ್‌ನಿಂದ ಮಹಿಳೆಯರು 101 ಕುಂಭಮೇಳದೊಂದಿಗೆ ಗಂಗೆಪೂಜೆ, ಶ್ರೀ ಸಂತ ಸೇವಾಲಾಲ್, ಮರಿಯಮ್ಮ ದೇವಿಯ ಶಿಲಾ ಮೂರ್ತಿಗಳಿಗೆ ಧಾರ್ಮಿಕ ವಿಧಿವಿಧಾನ ಪೂಜಾ ಕೈಂಕರ್ಯಗಳನ್ನು ನಡೆಸಿ ಭಜನೆಯೊಂದಿಗೆ ಸಾಧು ಸಂತರ ಮೆರವಣಿಗೆ ನಡೆಯಿತು. ದೇವಿಯ ಕಾಟಿ ಆರೋಹಣದ ಮೂಲಕ ಸಂತ ಸೇವಾಲಾಲ್ ಅವರ 287ನೇ ಜಯಂತಿ ಆರಂಭವಾಯಿತು.
ಶ್ರೀ ಸಂತ ಸೇವಾಲಾಲ್ ಮಹಾರಾಜರ, ಶ್ರೀ ಮಾತಾ ಮರಿಯಮ್ಮ ದೇವಿಯ ಕಾಟಿ ಆರೋಹಣ ಕಾರ್ಯಕ್ರಮದಲ್ಲಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ಎನ್.ಜಯದೇವ ನಾಯ್ಕ, ಮಹಾಮಠದ ಧರ್ಮದರ್ಶಿ ಬಿ.ಹೀರಾನಾಯ್ಕ, ನಿರ್ವಹಣಾ ಸಮಿತಿ ಅಧ್ಯಕ್ಷ ಹನುಮಂತ ನಾಯ್ಕ, ಪ್ರಧಾನ ಕಾರ್ಯದರ್ಶಿ ಎನ್.ಅರುಣಕುಮಾರ್, ನಿಗಮ ಮಂಡಳಿ ವ್ಯವಸ್ಥಾಪಕ ಎನ್.ರಾಜು, ನರೇನಹಳ್ಳಿ ಅರುಣಕುಮಾರ್, ಕೆ.ಟಿ.ನಾಗರಾಜ್, ಜೆ.ಹರೀಶ್, ಸಂಸ್ಥಾಪಕ ಅಧ್ಯಕ್ಷ ಡಾ. ಎಲ್.ಈಶ್ವರ ನಾಯ್ಕ, ಆಡಳಿತಾಧಿಕಾರಿ ಸೇವ್ಯಾ ನಾಯ್ಕ, ಎಸ್.ಟಿ.ಎ. ವಾಗೀಶ್ ಲಮಾಣಿ, ಸಮುದಾಯದ ಮುಖಂಡರಾದ ಶಿವರಾಮ ನಾಯ್ಕ ಸೇರಿದಂತೆ ಮಾಲಾಧಾರಿಗಳು ಇದ್ದರು.
-ಚಿತ್ರ: