ಬಾಲಕನಿಗೆ ತೀವ್ರ ಇರಿತ: ಚಿಂತಾಜನಕಸ್ಥಿತಿಯಲ್ಲಿದ್ದವನಿಗೆ ಆಸ್ಪತ್ರೆಯಲ್ಲಿ ಮರುಜನ್ಮ

KannadaprabhaNewsNetwork |  
Published : Mar 03, 2024, 01:31 AM IST
2ಕೆಡಿವಿಜಿ7, 8-ನಾಯಕನಹಟ್ಟಿ ಸಮೀಪದ ಗ್ರಾಮವೊಂದರಲ್ಲಿ ಸ್ನೇಹಿತನಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಬಾಲಕನಿಗೆ ದಾವಣಗೆರೆ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಬಾಲಕ ಚೇತರಿಸಿಕೊಂಡಿರುವುದು. | Kannada Prabha

ಸಾರಾಂಶ

ನಾಯಕನಹಟ್ಟಿ ಸಮೀಪದ ಗ್ರಾಮವೊಂದರಲ್ಲಿ ಸ್ನೇಹಿತನಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಬಾಲಕನಿಗೆ ದಾವಣಗೆರೆ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಬಾಲಕ ಚೇತರಿಸಿಕೊಂಡಿದ್ದಾನೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಶಾಲಾ ಬಾಲಕರ ಮಧ್ಯೆ ಕ್ಷುಲ್ಲಕ ಜಗಳದಲ್ಲಿ ಚಾಕು ಇರಿತಕ್ಕೆ ಒಳಗಾಗಿ, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದ 10ನೇ ತರಗತಿ ವಿದ್ಯಾರ್ಥಿಗೆ 3 ಗಂಟೆ ಕಾಲ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಆತನಿಗೆ ಮರುಜನ್ಮ ನೀಡುವಲ್ಲಿ ಇಲ್ಲಿನ ಆರೈಕೆ ಆಸ್ಪತ್ರೆ ತಜ್ಞ ವೈದ್ಯರ ತಂಡವು ಯಶಸ್ವಿಯಾಗಿದೆ.

ನಾಯಕನಹಟ್ಟಿ ಸಮೀಪದ ಗ್ರಾಮವೊಂದಲ್ಲಿ ಶಾಲಾ ಬಾಲಕರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿತ್ತು. 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಗೆ ಆತನ ಸಹಪಾಠಿಯೇ ಮಾತಿಗೆ ಮಾತು ಬೆಳೆಸಿ, ಚಾಕುವಿನಿಂದ ಇರಿದಿದ್ದನು. ಘಟನೆಯಲ್ಲಿ ತೀವ್ರ ರಕ್ತಸ್ರಾವವಾಗಿದ್ದ ಬಾಲಕನನ್ನು ಅಲ್ಲಿನ ಆಸ್ಪತ್ರೆಯಿಂದ ಒಂದು ದಿನದ ನಂತರ ದಾವಣಗೆರೆಯ ಆರೈಕೆ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿತ್ತು.

ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನ ಅಳಿವು, ಉಳಿವಿನ ಬಗ್ಗೆ ವೈದ್ಯರು ಯಾವುದೇ ಖಾತರಿ ನೀಡಲಿಲ್ಲ. ಒಂದು ದಿನದ ನಂತರ ಬಾಲಕನ ಪರಿಸ್ಥಿತಿ ಬಿಗಡಾ ಯಿಸಿದ ಕಾರಣ ಆತನನ್ನು ದಾವಣಗೆರೆ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶುಕ್ರವಾರ ತಡರಾತ್ರಿ ಕರೆ ತಂದು ದಾಖಲಿಸಲಾಗಿತ್ತು. ತಮ್ಮ ಮಗನನ್ನು ಬದುಕಿಸುವಂತೆ ಪಾಲಕರು ಆಸ್ಪತ್ರೆಯ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ ಧೈರ್ಯ ತುಂಬಿ, ತಕ್ಷಣವೇ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.

ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಎಸ್.ಶ್ರೀನಿವಾಸ, ಡಾ.ದೀಪಕ್‌ರನ್ನು ಒಳಗೊಂಡ ವೈದ್ಯರ ತಂಡವು ಸತತ 3 ಗಂಟೆ ಕಾಲ ಗಾಯಾಳು ವಿದ್ಯಾರ್ಥಿಗೆ ಸಂಕೀರ್ಣವಾದ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದರು. ಸದ್ಯಕ್ಕೆ ಗಾಯಾಳು ಬಾಲಾಕನು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದೇ ವೇಳೆ ಮಾತನಾಡಿದ ಡಾ.ಶ್ರೀನಿವಾಸ, ಆರೈಕೆ ಆಸ್ಪತ್ರೆಗೆ ಗಾಯಾಳು ವಿದ್ಯಾರ್ಥಿಯನ್ನು ಕರೆ ತರುವಷ್ಟರಲ್ಲಿ 1 ಲೀಟರ್ ನಷ್ಟು ರಕ್ತ ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ. ಚಾಕು ಇರಿತದಿಂದ ಜಠರಕ್ಕೆ ತೀವ್ರ ಹಾನಿಯಾಗಿತ್ತು. ಹೆಚ್ಚು ಕಾಲಾವಕಾಶ ಇಲ್ಲದ್ದರಿಂದ ಶುಕ್ರವಾರ ತಡರಾತ್ರಿಯೇ ಶಸ್ತ್ರಚಿಕಿತ್ಸೆ ಮಾಡಿದೆವು. ರಕ್ತ ಹೆಪ್ಪುಗಟ್ಟಿದ್ದರ ಜೊತೆಗೆ ರಕ್ತದೊತ್ತಡ ಕಡಿಮೆ ಇದ್ದು, ಇದರಿಂದ ಒಂದಿಷ್ಟು ಸವಾಲು ಎದುರಾದರೂ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯಾಗಿದೆ ಎಂದರು.

ನಾಯಕನಹಟ್ಟಿ ಸಮೀಪದ ಗ್ರಾಮವೊಂದರಲ್ಲಿ ಸ್ನೇಹಿತನಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಬಾಲಕನಿಗೆ ದಾವಣಗೆರೆ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಬಾಲಕ ಚೇತರಿಸಿಕೊಂಡಿರುವುದು.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ