ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

KannadaprabhaNewsNetwork |  
Published : Oct 06, 2023, 01:08 AM ISTUpdated : Oct 07, 2023, 12:33 PM IST
auraiya rape case

ಸಾರಾಂಶ

ಕುಡಿದ ಅಮಲಿನಲ್ಲಿ ದುಷ್ಕರ್ಮಿಗಳಿಬ್ಬರು ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕೆಜಿಎಫ್: ಕುಡಿದ ಅಮಲಿನಲ್ಲಿ ದುಷ್ಕರ್ಮಿಗಳಿಬ್ಬರು ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳಾದ ಅಯ್ಯಪಲ್ಲಿ ಮಂಜುನಾಥ್ ಹಾಗೂ ಅಂಜನಪ್ಪ ಸೂಮವಾರದಂದು ಅಪ್ರಾಪ್ತ ಬಾಲಕಿಗೆ ನಾಯಿ ಮರಿ ಕೊಡುವುದಾಗಿ ಪುಸಲಾಯಿಸಿ ತೋಟದ ಶೆಡ್‌ಗೆ ಕರೆಸಿಕೊಂಡಿದ್ದಾರೆ. ತೋಟದ ಶೆಡ್‌ನ ಒಳಗೆ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಮಧ್ಯಾಹ್ನ ನಾಯಿ ಮರಿ ತರುತ್ತೇನೆಂದು ಹೋದ ಬಾಲಕಿ ಮನೆಗೆ ಬಾರದ ಇದ್ದಾಗ ತಾಯಿ ಮತ್ತು ಸಹೋದರಿ ಬಾಲಕಿಯನ್ನು ತಡರಾತ್ರಿವರೆಗೂ ಹುಡಕಾಡಿದರೂ ಪತ್ತೆಯಾಗಿಲ್ಲ. ನಂತರ ಅಯ್ಯಪಲ್ಲಿ ತೋಟದ ಶೆಡ್ ಬಳಿ ಹೋದಾಗ ಬಾಲಕಿಯು ಪ್ರಜ್ಞಾಹೀನ ಸ್ಥಿತಿ ಹಾಗೂ ಮೈಮೇಲೆ ಯಾವುದೇ ಬಟ್ಟೆ ಇಲ್ಲದ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ. ಮನೆಗೆ ಕರೆದುಕೊಂಡು ಬಂದ ನಂತರ ಬಾಲಕಿ ವಿಚಾರಣೆ ಮಾಡಿದಾಗ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಬಾಲಕಿ ತಿಳಿಸಿದ್ದಾಳೆ. ಸಂತೃಸ್ತ ಬಾಲಕಿಯ ತಾಯಿ ಬೇತಮಂಗಲ ಠಾಣೆಯಲ್ಲಿ ಆಂಜನಪ್ಪ ಮತ್ತು ಮಂಜುನಾಥ್ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ