ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ವಿಶೇಷ ಕಾಳಜಿಯ ಗ್ಯಾರಂಟಿ ಯೋಜನೆಗಳನ್ನು ದೇಶದ ಇತರೆ ರಾಜ್ಯಗಳಲ್ಲಿಯೂ ಪಕ್ಷಬೇಧ ಮರೆತು ನಕಲು ಮಾಡುವಂತಹ ವ್ಯವಸ್ಥೆಯೂ ನಮ್ಮ ಮುಖ್ಯಮಂತ್ರಿಗಳ ಯೋಜನೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ನುಡಿದರು. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ದೇಶದಲ್ಲೇ ಪ್ರಥಮವಾಗಿ ದೂರದೃಷ್ಠಿಯ ಐದು ಗ್ಯಾರಂಟಿ ಉಚಿತ ಯೋಜನೆಗಳನ್ನು ಜಾರಿ ಮಾಡುವ ಮೂಲಕ ದೇಶದಲ್ಲಿ ಮಾದರಿ ಮುಖ್ಯಮಂತ್ರಿಯಾಗಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಮುಖ್ಯಮಂತ್ರಿಗಳ ಕಾರ್ಯವು ಅಭಿನಂದನೀಯ ಎಂದರು.
ಕೆಎಸ್‌ಆರ್‌ಟಿಸಿ ತಾಲೂಕು ಘಟಕದ ವ್ಯವಸ್ಥಾಪಕ ಪಾಪನಾಯಕ್ ಮಾತನಾಡಿ, ತಾಲೂಕಿನ ಘಟಕದಲ್ಲಿ ಶಕ್ತಿ ಯೋಜನೆಯಡಿಯಲ್ಲಿ ತಿಂಗಳಿಗೆ ಸರಾಸರಿ ೨.೫ ಲಕ್ಷ ರು. ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯಡಿಯಲ್ಲಿ ರಾಜ್ಯದ ೫೦೦ ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ ಕಾರಣದಿಂದ ನೂರಾರು ಮಹಿಳೆಯರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.
ತಾಲೂಕು ಪಂಚಾಯತ್ ಅಧಿಕಾರಿ ಗೋಪಾಲ್ ಹಾಗೂ ಇತರರು ಇದ್ದರು.