ಮಹಿಳಾ ಸಬಲೀಕರಣಕ್ಕೆ ಶಕ್ತಿ ಯೋಜನೆ ಪೂರಕ: ಶಾಸಕ ಬಣಕಾರ

KannadaprabhaNewsNetwork |  
Published : Jul 16, 2025, 12:45 AM IST
ಶಾಸಕ ಯು.ಬಿ. ಬಣಕಾರ ಅವರು ಹಿರೇಕೆರೂರಿನ ಬಸ್ ನಿಲ್ದಾಣದಲ್ಲಿ ಬಸ್ ಪೂಜೆ ಸಲ್ಲಿಸಿ ನಂತರ ಶಕ್ತಿ ಯೋಜನೆಯ ಫಲಾನಿಭವಿ ಮಹಿಳೆಯರನ್ನು ಸನ್ಮಾನಿಸಿದರು. | Kannada Prabha

ಸಾರಾಂಶ

ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಮಹಿಳಾ ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿದ್ದು, ಈ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ.

ಹಿರೇಕೆರೂರು: ರಾಜ್ಯದಲ್ಲಿ ಮಹಿಳಾ ಸಬಲೀಕರಣದ ಉದ್ದೇಶದೊಂದಿಗೆ ಜಾರಿಗೊಂಡ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ 500 ಕೋಟಿ ಉಚಿತ ಪ್ರಯಾಣಗಳನ್ನು ದಾಟಿ ಇತಿಹಾಸ ನಿರ್ಮಿಸಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ 500 ಕೋಟಿ ಗಡಿ ದಾಟಿರುವ ಹಿನ್ನೆಲೆಯಲ್ಲಿ ಇಲ್ಲಿನ ಬಸ್ ನಿಲ್ದಾಣದಲ್ಲಿ ಬಸ್ ಪೂಜೆ ಸಲ್ಲಿಸಿ ನಂತರ ಶಕ್ತಿ ಯೋಜನೆಯ ಫಲಾನಿಭವಿ ಮಹಿಳೆಯರನ್ನು ಸನ್ಮಾನಿಸಿ ಮಾತನಾಡಿದರು.ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಮಹಿಳಾ ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿದ್ದು, ಈ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಈ ಯೋಜನೆಯಿಂದ ಮಹಿಳೆಯರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಆರೋಗ್ಯ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ ಎಂದರು.

ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಧಾ ಚಿಂದಿ, ಗ್ಯಾರಂಟಿ ಸದಸ್ಯರಾದ ಸುನಿತಾ ಕೊಡ್ಲೇರ, ಪಿಎಲ್‌ಡಿ ಮಾಜಿ ಅಧ್ಯಕ್ಷ ಗಣೇಶಗೌಡ ಪಾಟೀಲ, ಹನುಮಂತಗೌಡ ಯಡಗೌಡ್ರ, ಸಿದ್ದು ನರೇಗೌಡ್ರ, ಸನಾವುಲ್ಲಾ ಮಕಾಂದಾರ್, ಅಂಜನೇಯ ಗುತ್ತಲ, ಆರ್ಮಿ ಸಾರ್ಫ್ರಾಜ್ ಮಾಸೂರು, ನಿಸ್ಸಾರ್ ರಾಮತೀರ್ಥ ಇತರರು ಇದ್ದರು.ಎಲ್ಲರಿಗೂ ಗುರು ಮಾರ್ಗದರ್ಶನ ಅಗತ್ಯ

ಶಿಗ್ಗಾಂವಿ: ಸೃಷ್ಟಿಯ ಸಕಲ ಜೀವರಾಶಿಗಳಲ್ಲಿ ಮನುಷ್ಯ ಒಂದು ಜೀವಿಯಾಗಿದ್ದು, ಇತರ ಜೀವಿಗಳಿಗಿಂತ ಬುದ್ಧಿಶಾಲಿಯಾಗಿದ್ದಾನೆ. ಜನನ, ಮರಣಗಳ ಚಕ್ರದಲ್ಲಿ ಸಿಲುಕಿ ಸಾಗುತ್ತಿದ್ದಾನೆ. ಆದರೆ ನನ್ನ ಜನನದ ಹಿನ್ನೆಲೆ ಏನು? ಯಾಕೆ ಇಲ್ಲಿ ಜನಿಸಿದೆ? ಎಂಬ ಸತ್ಯವನ್ನು ತಿಳಿವುದು ಅವಶ್ಯಕವಾಗಿದೆ ಎಂದು ಬೆಂಗಳೂರ ವ್ಯಕ್ತಿ ವಿಕಾಸ ಕೇಂದ್ರದ ಮಂಜುನಾಥ ಗೂರೂಜಿ ತಿಳಿಸಿದರು.ಪಟ್ಟಣದ ಸಾಯಿಮಂದಿರದಲ್ಲಿ ನಡೆದ ಗುರುಪೂರ್ಣಿಮೆ, ಸತ್ಸಂಗ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಗುರುವಿನ ಮಾರ್ಗದರ್ಶನದಲ್ಲಿ ಅರಿವಿನ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.

ಈ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾರತಿ ಜಂಭಗಿ ಮಾತನಾಡಿದರು. ವಿಕಾಸ ಕೇಂದ್ರದ ಕುಮಾರ ಸಿಂಹ, ಗೌತಮಿ, ರಾಜಾರಾಮ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಭಜನೆ, ಮಹಾಭಿಷೇಕ, ಕಾಕಡಾರತಿ, ಮಂಗಳಾರತಿ ಮುಂತಾದ ಧಾರ್ಮಿಕ, ಸಂಗೀತ ಕಾರ್ಯಕ್ರಮ ನಡೆದವು.

ಆರ್ಟ್ ಆಫ್ ಲಿವಿಂಗ್ ತರಬೇತಿ ಕೇಂದ್ರದ ಮುಖ್ಯಶಿಕ್ಷಕ ಶೋಭಾ ಅಳಗವಾಡಿ, ಮಾಮ್ಲೇದೇಸಾಯಿ ಕಾಲೇಜಿನ ಪ್ರಾಚಾರ್ಯ ಎಸ್.ಆರ್. ಭಟ್ಟ, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಕೆ.ಎಸ್. ಚಕ್ರಸಾಲಿ, ಮುಖಂಡರಾದ ಕೆ.ಎಸ್. ಬಗಾಡೆ, ಶಶಿಧರ ಸುರಗಿಮಠ, ಕೆ.ಎನ್. ಕಲಾಲ, ಬಸಣ್ಣ ಹೆಸರೂರ, ಅರ್ಚಕ ನಾಗಯ್ಯ ಪೂಜಾರ, ಕವಿತಾ ಪಾಟೀಲ, ಗೋದಾವರಿ ಭಟ್ಟ, ಮಂಜುನಾಥ ಚಕ್ರಸಾಲಿ ಸೇರಿದಂತೆ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ