ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಸ್ಥಳೀಯ ಖಾಸ್ಗತೇಶ್ವರ ಮಠದಲ್ಲಿ ಮಹಾಸಭಾ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜವನ್ನು ಸಂಘಟಿಸಿ, ಒಗ್ಗಟ್ಟನ್ನು ಪ್ರತಿಪಾದಿಸಿದ, ಅಜಾತಶತ್ರು ಆಗಿದ್ದ ಶಾಮನೂರು ಶಿವಶಂಕರಪ್ಪ ಅವರ ಕಳಿಕಳಿಯನ್ನು ಸಮಾಜ ಅರಿತು ಮುನ್ನಡೆಯ ಬೇಕಾದ ಜವಾಬ್ದಾರಿ ಇಂದು ನಮ್ಮೆಲ್ಲರ ಮೇಲಿದೆ. ಕಾರ್ಮಿಕ ಮುಖಂಡನಾಗಿ, ರಾಜಕೀಯ ನಾಯಕರಾಗಿ, ಸಮಾಜದಲ್ಲಿ ಇರುವ ಬಡತನ ನಿವಾರಿಸಲು ಅವರು ಹಗಲಿರುಳು ಎನ್ನದೆ ದುಡಿದು ನಮ್ಮೆಲ್ಲರಿಗೆ ಮಾದರಿಯಾಗಿದ್ದಾರೆ ಎಂದರು.
ತಾಲೂಕು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಜೇಂದ್ರ ರಾಯಗೊಂಡ ಮಾತನಾಡಿ, ವ್ಯಾಪಾರಸ್ಥರಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿದ ಅವರು, ರಾಜಕೀಯ ನಾಯಕರಾಗಿ ನಾಡಿಗೆ ದೊಡ್ಡ ಕೀರ್ತಿ ತಂದವರು. ಸದಾಕಾಲ ಬಡವರು, ಮಹಿಳೆಯರು ಹಾಗೂ ಕಾರ್ಯಕರ್ತರ ಸೇವೆಯಲ್ಲಿ ತೊಡಗಿ ವೀರಶೈವ ಸಮಾಜದಿಂದ ಸಮಾಜದ ಎಲ್ಲಾ ವರ್ಗದವರಿಗೂ ಸೇವೆ ಮಾಡಿ ಕೀರ್ತಿ ತಂದವರು ಎಂದು ಹೇಳಿದರು.ಸಭೆಯಲ್ಲಿ ಶಿವಶಂಕರಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾನಿಪ ಸಂಘದ ಅಧ್ಯಕ್ಷ ಡಿ.ಬಿ ವಡವಡಗಿ. ತಾಲೂಕು ಘಟಕದ ಸದಸ್ಯರಾದ ಸಿದ್ದರಾಜ ಹೊಳಿ, ಸಂಗಣ್ಣ ಕಂಚಾಣಿ, ಸಂಗಣ್ಣ ಕಟ್ಟಿ, ಅಮರಪ್ಪ ಮೋಟಿಗಿ, ನಾಗರಾಜ ಕಟ್ಟೆ, ಸರಸ್ವತಿ ಪೀರಾಪುರ, ಕಮಲಕ್ಕ ಬಿರಾದಾರ, ಸುವರ್ಣ ಕಟ್ಟಿ, ಉಮೇಶ ಕಂಠಿ, ಶರಣು ದೆಗಿನಾಳ, ದಾನೇಶ್ ಅಂಗಡಿ, ರವೀಂದ್ರ ನಂದಪ್ಪನವರ, ಅಶೋಕ್ ದರಿಗೌಡರ, ಬಸವರಾಜು ಲಿಂಗದಳ್ಳಿ, ಮಂಜು ಅಬ್ಬ್ಯಾಳಮಠ, ಭೀಮಣ್ಣ ಬಳವಾಟ, ಸರೋಜಾ ದೇವೂರ, ಅಂಜನಾ ಬಿರಾದಾರ, ಅಂಬಿಕಾ ಬಳಗಾನೂರ, ರೇಣುಕಾ ಹೂಗಾರ ಮುಂತಾದವರು ಭಾಗವಹಿಸಿದ್ದರು.