ಸ್ವಾಮೀಜಿ 45ನೇ ಹುಟ್ಟುಹಬ್ಬ ಆಚರಣೆ ಕನ್ನಡಪ್ರಭ ವಾರ್ತೆ ಹಾಸನ
ಇಲ್ಲಿಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ 45ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸಮುದಾಯವನ್ನು ಒಗ್ಗೂಡಿಸಿ ಮುನ್ನಡೆಸುತ್ತಿರುವ ಕೀರ್ತಿ ಶಂಭುನಾಥ ಸ್ವಾಮೀಜಿಗೆ ಸಲ್ಲುತ್ತದೆ ಎಂದರು.
‘ಶಂಭುನಾಥ ಸ್ವಾಮೀಜಿಯವರು ಗುಣವಂತ, ಸತ್ಪುರುಷ, ಕರುಣಾಳು, ಛಲಗಾರ ಗುಣದ ಅಪರೂಪದ ವ್ಯಕ್ತಿತ್ವದ ಮಹನೀಯರು . ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಮಾತಿಗೆ ಅನ್ವರ್ಥವಾಗಿ ನಡೆಯುತ್ತಿರುವ ಶಂಭುನಾಥ ಸ್ವಾಮೀಜಿಯವರು ಮಠದ ಕಾರ್ಯಕ್ರಮಗಳು, ಮಠದ ಭಕ್ತರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರನ್ನು ನೆನೆಸದೆ ಎಂದು ಕೂಡ ಮಾತನಾಡಿದ್ದನ್ನು ಕಂಡಿಲ್ಲ. ಇದು ಅವರಲ್ಲಿನ ಗುರುಭಕ್ತಿಯನ್ನು ಎಲ್ಲರಿಗೂ ತೋರುತ್ತದೆ’ ಎಂದು ಹೇಳಿದರು.ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಯವರ ಸಂಕಲ್ಪದೊಂದಿಗೆ ಆರಂಭವಾದ ಕಾರ್ಯಕ್ರಮಗಳಿಗೂ ವಿಶೇಷ ಕಾಳಜಿ ನೀಡಿ ಮುನ್ನಡೆಸಿಕೊಂಡು ಹೋಗುತ್ತಿರುವ ಶಂಭುನಾಥ ಸ್ವಾಮೀಜಿಯವರು ಮಕ್ಕಳ ಸಾಹಿತ್ಯಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು, ಜನಪದ ಕಲೆ, ಕಲಾವಿದರನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಇದು ಅವರಿಗೆ ಗುರುವಿನ ಬಗೆಗಿರುವ ಅಪಾರ ಶ್ರದ್ಧೆಯನ್ನು ತೋರ್ಪಡಿಸುತ್ತದೆ ಎಂದರು.
ಶಾಸಕ ಸಿ.ಎನ್.ಬಾಲಕೃಷ್ಣ, ಬಾಲಗಂಗಾಧರನಾಥ ಸ್ವಾಮೀಜಿಯವರು ತೋರಿದ ದಾರಿಯಲ್ಲಿ ಎಲ್ಲರನ್ನು ನಡೆಸುತ್ತಿರುವ ಶಂಭುನಾಥ ಸ್ವಾಮೀಜಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದು, ಅವರ ಸರಳತೆ ಮತ್ತು ಕ್ರಿಯಾಶೀಲತೆ ಎಲ್ಲರಿಗೂ ಮಾದರಿ ಎಂದರು.
ಹುಣಸೂರು ಶಾಸಕ ಹರೀಶ್ ಗೌಡ ಮಾತನಾಡಿ, ಆದಿಚುಂಚನಗಿರಿ ಮಠದ ಕೀರ್ತಿಯನ್ನು ವಿಶ್ವದೆಲ್ಲೆಡೆ ಹರಡಿದ ಕೀರ್ತಿ ಹೇಗೆ ಬಾಲಗಂಗಾಧರನಾಥ ಸ್ವಾಮೀಜಿಯವರಿಗೆ ಸಲ್ಲುತ್ತದೆಯೊ ಅಂತೆಯೇ ಜಗದ್ಗುರು ನಿರ್ಮಲಾನಂದನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶಾಖಾ ಮಠಗಳ ಸ್ವಾಮೀಜಿ ಕೂಡ ಆ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಅಂತಹ ಮಹತ್ತರವಾದ ಕಾರ್ಯದಲ್ಲಿ ಶಂಭುನಾಥ ಸ್ವಾಮೀಜಿ ಪಾತ್ರ ದೊಡ್ಡದು ಎಂದರು.