ಸಂಡೂರು: ಸತ್ಯ ಶರಣರ ಕಥೆಗಳನ್ನು ಚಿತ್ತವಿಟ್ಟು ಕೇಳುವುದರಿಂದ ಆತ್ಮ ಶುದ್ಧಿಯಾಗುತ್ತದೆ. ಪಾಪಗಳು ಪರಿಹಾರವಾಗಲಿವೆ ಎಂದು ಡಾ. ಮಾತಾ ಬಿ.ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು.
ತಾಲೂಕಿನ ಯಶವಂತನಗರದ ಶ್ರೀಗುರು ಸಿದ್ಧರಾಮೇಶ್ವರ ಸಂಸ್ಥಾನ ವಿರಕ್ತಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೀದರ ಜಿಲ್ಲಾ ಸುಕ್ಷೇತ್ರ ಶ್ರೀಶಂಭುಲಿಂಗೇಶ್ವರ ಪುರಾಣ ಪ್ರವಚನ ಹಾಗೂ ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕುಮಾರದೇವರು ಬೂದಿಸ್ವಾಮಿ ಹಿರೇಮಠ ಶ್ರೀಶಂಭುಲಿಂಗೇಶ್ವರ ಪುರಾಣ ಪ್ರವಚನ ನೀಡಿ, ಸಂಸ್ಕೃತಿ ಸಂಸ್ಕಾರವಿಲ್ಲದ ಬದುಕು ನಿರರ್ಥಕ. ಆನಂದ ಖರೀದಿಸಲಾಗದು. ಅದನ್ನು ಅನುಭವಿಸಬೇಕು ಎಂದರು.
ಶ್ರೀದತ್ತಾವಧೂತ ಮಹಾಕ್ಷೇತ್ರ ೭೬ ವೆಂಕಟಾಪುರ, ಹಂಪಿಯ ಪರತತ್ವಾನಂದ ಸ್ವಾಮೀಜಿಯವರು ಷಟಸ್ಥಳ ಧ್ವಜಾರೋಹಣ ನೆರವೇರಿಸಿದರು. ಉರವಕೊಂಡ ಗವಿಮಠದ ಜಗದ್ಗುರು ಕರಿಬಸವರಾಜೇಂದ್ರ ಸ್ವಾಮೀಜಿ ಹಾಗೂ ಯಶವಂತನಗರದ ಶ್ರೀಸಿದ್ಧರಾಮೇಶ್ವರ ಸಂಸ್ಥಾನ ವಿರಕ್ತಮಠದ ಗಂಗಾಧರ ಸ್ವಾಮೀಜಿಯವರು ಆಶೀರ್ವಚನ ನೀಡಿದರು.ಹಾವೇರಿ-ಗದಗ-ಸಿಂದಗಿ ಮಠದ ಶಿವಾನಂದ ಶಿವಾಚಾರ್ಯರು, ಕಂಪ್ಲಿ ಕಲ್ಮಠದ ಪ್ರಭು ಸ್ವಾಮೀಜಿ, ಕುಕನೂರು ಅನ್ನದಾನೀಶ್ವರ ಶಾಖಾ ಸಂಸ್ಥಾನ ಮಠದ ಡಾ. ಮಹಾದೇವ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರುಗಿದವು. ಸಿ.ಕೆ. ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು.
ದೇವರಾಜ ಯರಕಿಹಾಳ, ಷಣ್ಮುಖಯ್ಯ ಹಿರೇಮಠ ಹಾಗೂ ಹನುಮಂತ ಅಂಕದ ಅವರು ಕ್ರಮವಾಗಿ ಸಂಗೀತ, ವಾಯೋಲಿನ್ ಹಾಗೂ ತಬಲಾದಲ್ಲಿ ಸಾಥ್ ನೀಡಿದರು. ಗ್ರಾಮದ ಮಂಗಳಾ, ಜಿ. ರವಿಕುಮಾರ್ ಮತ್ತು ಮಕ್ಕಳು ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು.ರೇಖುಳಗಿಯ ಶ್ರೀಶಂಭುಲಿಂಗೇಶ್ವರ ಆಶ್ರಮದ ಡಾ.ಸದ್ಗುರು, ಎಂ.ಎಸ್.ಪಿ.ಎಲ್ ಕಂಪನಿಯ ಅಧಿಕಾರಿ ಕೆ. ಪ್ರಭುದೇವ, ಗ್ರಾಮದ ಅಕ್ಕನಬಳಗದ ಅಧ್ಯಕ್ಷೆ ಸಮಂಗಲಮ್ಮ ಚಿತ್ರಿಕಿ, ಉಪಾಧ್ಯಕ್ಷೆ ಎ.ನಾಗರತ್ನಾ, ಸಂಡೂರಿನ ಅಕ್ಕನಬಳಗದ ಅಧ್ಯಕ್ಷೆ ಜ್ಯೋತಿ ಗುಡೆಕೋಟೆ, ಮಹಿಳಾ ಕದಳಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷೆ ನೀಲಾಂಬಿಕಾ, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ೧೦ಎಸ್.ಎನ್.ಡಿ೨
ಶಂಭುಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಡಾ.ಮಾತಾ ಬಿ. ಮಂಜಮ್ಮ ಜೋಗತಿ ಉದ್ಘಾಟಿಸಿದರು.