ಮಹದೇಶ್ವರ ಬೆಟ್ಟದ ಸ್ನಾನ ಘಟ್ಟದಲ್ಲಿ ಶ್ಯಾಂಪು, ಸೋಪು ನಿಷೇಧ

KannadaprabhaNewsNetwork |  
Published : Mar 17, 2025, 12:33 AM IST
ಮಲೆ ಮಹದೇಶ್ವರ ಬೆಟ್ಟದ ಅಂತರಗಂಗೆ ಸ್ನಾನ  ಘಟ್ಟದಲ್ಲಿ ಭಕ್ತಾದಿಗಳು ಸೋಪು ಶಾಂಪೂ  | Kannada Prabha

ಸಾರಾಂಶ

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಅಂತರಗಂಗೆ ಸ್ನಾನ ಘಟ್ಟದಲ್ಲಿ ಭಕ್ತಾದಿಗಳು ಸೋಪು, ಶಾಂಪು ಬಳಸದಂತೆ ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಅಂತರಗಂಗೆ ಸ್ನಾನ ಘಟ್ಟದಲ್ಲಿ ಭಕ್ತಾದಿಗಳು ಸೋಪು, ಶಾಂಪು ಬಳಸದಂತೆ ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ.

ರಾಜ್ಯದ ಪುಣ್ಯಕ್ಷೇತ್ರಗಳ ನದಿಗಳು ಮತ್ತು ಕಲ್ಯಾಣಿ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು ಮತ್ತು ಶಾಂಪು ಮಾರಾಟವನ್ನು ನಿಷೇಧ ಮಾಡಿ ರಾಜ್ಯ ಸರ್ಕಾರ ಮಾ. 10ರಂದು ಮಹತ್ವದ ಆದೇಶ ಹೊರಡಿಸಿತ್ತು.

ನದಿಯಲ್ಲಿ ಸ್ನಾನ ಮಾಡುವ ಭಕ್ತರು ತ್ಯಜಿಸುವ ಶ್ಯಾಂಪು ಪ್ಯಾಕೆಟ್‌ ಗಳು ಮತ್ತು ಸಣ್ಣ ಸೋಪ್‌ಗಳು ನೀರನ್ನು ಮಾಲಿನ್ಯಗೊಳಿಸುತ್ತಿದ್ದು, ಇದು ಜನರ ಮತ್ತು ಜಲಚರ ಪ್ರಾಣಿಗಳ ಆರೋಗ್ಯಕ್ಕೆ ತೀವ್ರ ಹಾನಿಯನ್ನು ಉಂಟು ಮಾಡುತ್ತಿದೆ. ಅಲ್ಲದೆ, ಯಾತ್ರಾ ಸ್ಥಳಗಳಲ್ಲಿ ಬಟ್ಟೆ ತ್ಯಜಿಸುವ ಪ್ರವೃತ್ತಿ ತಡೆಗಟ್ಟಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ.

ಈ ಹಿನ್ನೆಲೆ ರಾಜ್ಯದ ಮಲೆ ಮಹದೇಶ್ವರ ಬೆಟ್ಟದಲ್ಲಿಯೂ ಸೋಪು, ಶ್ಯಾಂಪು ಮಾರಾಟ ಮಾಡುವ ಹಾಗಿಲ್ಲ. ಭಕ್ತರು ನದಿಯಲ್ಲಿ ಯಾವುದೇ ವಸ್ತುಗಳನ್ನು ಬಿಸಾಡುವಂತಿಲ್ಲ, ಭಕ್ತರ ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ನಿಯಮ ಪಾಲನೆ ಮಾಡಬೇಕು ಎಂದು ಧ್ವನಿವರ್ಧಕ ಅಳವಡಿಸಿ ವಿಶೇಷವಾಗಿ ಭಕ್ತಾದಿಗಳಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

-------------------

ನದಿಯಲ್ಲಿ ಸ್ನಾನ ಮಾಡುವ ಭಕ್ತರು ತ್ಯಜಿಸುವ ಶ್ಯಾಂಪ್‌ ಪ್ಯಾಕೆಟ್‌ ಗಳು ಮತ್ತು ಸಣ್ಣ ಸೋಪ್‌ ಗಳು ನೀರನ್ನು ಮಾಲಿನ್ಯಗೊಳಿಸುತ್ತಿದ್ದು, ಇದು ಜನರ ಮತ್ತು ಜಲಚರ ಪ್ರಾಣಿಗಳ ಆರೋಗ್ಯಕ್ಕೆ ತೀವ್ರ ಹಾನಿಯಾಗುತ್ತಿರುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ನಿಯಮಗಳನ್ನು ಸರ್ಕಾರ ಜಾರಿಗೊಳಿಸಿದೆ .ಈ ನಿಟ್ಟಿನಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿನ ಅಂತರಗಂಗೆ ಸ್ನಾನಘಟ್ಟದಲ್ಲಿ ಶ್ಯಾಂಪು ಮತ್ತು ಸೋಪು ಬಳಸದಂತೆ ಭಕ್ತಾದಿಗಳಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ.

ಎ.ಈ. ರಘು, ಕಾರ್ಯದರ್ಶಿ, ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ