ಶಣವಿನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

KannadaprabhaNewsNetwork |  
Published : Sep 02, 2024, 02:08 AM IST
1ಎಚ್ಎಸ್ಎನ್3 : ಸಮಗ್ರ ಪ್ರಶಸ್ತಿ ಪಡೆದ ಶಣವಿನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು. | Kannada Prabha

ಸಾರಾಂಶ

ಅರಕಲಗೂಡು ತಾಲೂಕಿನ ಬೈಚನಹಳ್ಳಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಕಸಬಾ 2 ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಶಣವಿನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ ದೊರಕಿತು.ಬಾಲಕಿಯರ ವಿಭಾಗದ ರಿಲೇಯಲ್ಲಿ ಸೃಜನ, ಸಂಜು, ಸ್ವಪ್ನ ಕೀರ್ತನ ಇವರು ತಾಲೂಕು ಹಂತಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕಿಯರ ವಿಭಾಗದ ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ ಹಾಗೂ ಥ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಬಾಲಕರ ವಿಭಾಗದಲ್ಲಿ 200 ಮೀಟರ್ ಓಟದಲ್ಲಿ ಹೇಮಂತ್ ದ್ವಿತೀಯ ಸ್ಥಾನ, 600 ಮೀಟರ್ ಓಟದಲ್ಲಿ ದಿಲೀಪ್ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಬಾಲಕರ ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಿಗೆ ಆಯ್ಕೆ ಆಗಿರುತ್ತಾರೆ. ಹಾಗೆಯೇ ಥ್ರೋ ಬಾಲ್‌ನಲ್ಲೂ ಸಹ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ಬೈಚನಹಳ್ಳಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಕಸಬಾ 2 ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಶಣವಿನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ ದೊರಕಿತು.

ಹೋಬಳಿ ಮಟ್ಟದ ಕ್ರೀಡಾಕೂಟ ಬಾಲಕಿಯರ ವಿಭಾಗದಲ್ಲಿ 200 ಮೀಟರ್ ಪ್ರಥಮ, 4×100 ಪ್ರಥಮ, 600 ಮೀಟರ್ ದ್ವಿತೀಯ, ಲಾಂಗ್ ಜಂಪ್ ಪ್ರಥಮ, ವಾಲಿಬಾಲ್ ದ್ವಿತೀಯ, ಥ್ರೋಬಾಲ್ ದ್ವಿತೀಯ, 100 ಮೀಟರ್ ತೃತೀಯ, ಬಾಲಕರ ವಿಭಾಗದಲ್ಲಿ 100 ಮೀಟರ್ ದ್ವಿತೀಯ, 600 ಮೀಟರ್ ದ್ವಿತೀಯ ಥ್ರೋಬಾಲ್ ಪ್ರಥಮ, ವಾಲಿಬಾಲ್ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಶಣವಿನಕುಪ್ಪೆ ಶಾಲೆಯ ಕೀರ್ತನಾ 200 ಮೀ.ನಲ್ಲಿ ಪ್ರಥಮ, ಲಾಂಗ್‌ಜಂಪ್‌ನಲ್ಲಿ ಪ್ರಥಮ, ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಹಂತಕ್ಕೆ ಆಯ್ಕೆ ಆಗಿದ್ದಾರೆ. ಹಾಗೆಯೇ ಸಾನಿಕ 600 ಮೀಟರ್ ಓಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೂಕು ಹಂತಕ್ಕೆ ಆಯ್ಕೆ ಆಗಿದ್ದಾರೆ. ಸೃಜನ 100 ಮೀಟರ್‌ ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಬಾಲಕಿಯರ ವಿಭಾಗದ ರಿಲೇಯಲ್ಲಿ ಸೃಜನ, ಸಂಜು, ಸ್ವಪ್ನ ಕೀರ್ತನ ಇವರು ತಾಲೂಕು ಹಂತಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕಿಯರ ವಿಭಾಗದ ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ ಹಾಗೂ ಥ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಬಾಲಕರ ವಿಭಾಗದಲ್ಲಿ 200 ಮೀಟರ್ ಓಟದಲ್ಲಿ ಹೇಮಂತ್ ದ್ವಿತೀಯ ಸ್ಥಾನ, 600 ಮೀಟರ್ ಓಟದಲ್ಲಿ ದಿಲೀಪ್ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಬಾಲಕರ ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಿಗೆ ಆಯ್ಕೆ ಆಗಿರುತ್ತಾರೆ. ಹಾಗೆಯೇ ಥ್ರೋ ಬಾಲ್‌ನಲ್ಲೂ ಸಹ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

ಒಟ್ಟಾರೆಯಾಗಿ ಶಣವಿನಕುಪ್ಪೆ ಶಾಲೆಯ ಮಕ್ಕಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು ಯಾವುದೇ ಖಾಸಗಿ ಶಾಲೆಯ ಮಕ್ಕಳಿಗಿಂತ ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ. ಇವರ ಸಾಧನೆಗೆ ಹಾಗೂ ಶಿಕ್ಷಕರ ಮಾರ್ಗದರ್ಶನಕ್ಕೆ ಗ್ರಾಮದ ಎಲ್ಲಾ ಗ್ರಾಮಸ್ಥರು ಪೋಷಕರು ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ. ರೌಶನ್ ಅರಾ ಶಿಕ್ಷಕರು ರಾಷ್ಟ್ರಮಟ್ಟದ ಕ್ರೀಡಾಪಟುವಾಗಿದ್ದು ಎಲ್ಲಾ ವಿದ್ಯಾರ್ಥಿಗಳಿಗೂ ಮಾದರಿಯಾಗಿದ್ದಾರೆ. ಶಾಲೆಯ ಶಿಕ್ಷಕರಾದ ಪರಮೇಶ್, ಮಕ್ಕಳಿಗೆ ಕ್ರೀಡಾ ಮಾರ್ಗದರ್ಶನವನ್ನು ನೀಡಿದ ಸಾಗರ್, ಶಿಕ್ಷಕರಾದ ದಿವ್ಯಮಣಿ, ಮುಖ್ಯ ಶಿಕ್ಷಕರಾದ ಯಾಸ್ಮಿತಾಜ್, ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ಇವರು ಮಕ್ಕಳ ಕ್ರೀಡಾ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ