ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಫಿ.ಮಾ.ಜನರಲ್ ಕಾರ್ಯಪ್ಪ ಅವರು ದೇಶ ಮತ್ತು ವಿದೇಶ ಕಂಡ ಮಹಾನ್ ಸೇನಾನಿಯಾಗಿದ್ದು, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರವು ಅವರು ಭಾರತದ ಮಹಾನ್ ಸೇನಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಹುಟ್ಟಿದ ಈ ಮನೆಯನ್ನು ಸ್ಮಾರಕವನ್ನಾಗಿ ಮಾಡುವುದು ಮತ್ತು ಅವರ ಪ್ರತಿಮೆ ನಿರ್ಮಾಣದ ಕನಸು ಕನಸಾಗಿಯೇ ಉಳಿದಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಈ ಮನೆಯನ್ನು ಸ್ಮಾರಕವನ್ನಾಗಿ ಮಾಡಲು ಹಾಗೂ ಅವರ ಪುತ್ಥಳಿ ನಿರ್ಮಾಣ ಮಾಡಲು ಸರ್ಕಾರ ಮತ್ತು ಜನ ಪ್ರತಿನಿಧಿಗಳ ಗಮನಕ್ಕೆ ತರಬೇಕಾಗಿದೆ ಎಂದು ಸಲಹೆ ನೀಡಿದರು.ಫಿ.ಮಾ.ಕಾರ್ಯಪ್ಪ ಅವರ ಜನ್ಮ ದಿನಾಚರಣೆ ಪ್ರಯುಕ್ತ ಅವರ ಅಭಿಮಾನಿಗಳು ಗ್ರಂಥಾಲಯ ಮುಂಭಾಗದ ಧ್ವಜಸ್ತಂಭದಲ್ಲಿ ಕಾರ್ಯಪ್ಪ ಅವರ ಭಾವಚಿತ್ರವನ್ನು ಪೂಜಿಸಿ ಪಷ್ಪ ನಮನ ಸಲ್ಲಿಸಿದರು. ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷೆ ಗೀತ ಹರೀಶ್, ಸದಸ್ಯ ಎಸ್.ಸಿ.ಶರತ್‍ಶೇಖರ್, ಪ್ರಮುಖರಾದ ಮಹಮ್ಮದ್ ಪಾಷ, ನಿವೃತ್ತ ಸೈನಿಕರಾದ ಬೆಳ್ಳಿಯಪ್ಪ, ನಾಗರಾಜ್ ಕಾರ್ಯಕ್ರಮದ ಆಯೋಜಕರಾದ ಬಿಲಾಲ್, ಮೋಹನ್‍ಲಾಲ್ ಚೌಧರಿ ಕುಬೇರ್ ಪುರೋಹಿತ್ ಮುಂತಾದವರಿದ್ದರು.