ಕನ್ನಡ ನಾಡಿಗೆ ಶಂಕರ್‌ ನಾಗ್‌, ಎಸ್‌ಪಿಬಿ ಕೊಡುಗೆ ಅಪಾರ

KannadaprabhaNewsNetwork |  
Published : Oct 02, 2026, 02:00 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ನಗರದ ಶ್ರೀಶೈಲ ವೃತ್ತದಲ್ಲಿ ನಟ ಶಂಕರ್ ನಾಗ್ ಅಭಿಮಾನಿಗಳ ಕಲಾ ವೇದಿಕೆ ವತಿಯಿಂದ ಶಂಕರ್ ನಾಗ್, ಎಸ್‌ಪಿಬಿ ರವರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ಶಂಕರ್ ನಾಗ್ ಅಭಿಮಾನಿಗಳ ಕಲಾ ವೇದಿಕೆ ವತಿಯಿಂದ ನಗರದ ಶ್ರೀಶೈಲ ವೃತ್ತದಲ್ಲಿ ನಟ ಶಂಕರ್ ನಾಗ್ ರವರ 36ನೇ ವರ್ಷದ ಚಿರಸ್ಮರಣೆ ಹಾಗೂ ಎಸ್‌ಪಿ ಬಾಲಸುಬ್ರಹ್ಮಣ್ಯಂ ರವರ 6ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ನಡೆಸಲಾಯಿತು.

ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ನಗರದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು ವಿತರಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಜಿವಿ ಟಿವಿ ಮಾಲೀಕ ರಾಘು ಮಾತನಾಡಿ, ಅಗಲಿದ ಹಿರಿಯರನ್ನು ನೆನೆಯುವುದು ಪುಣ್ಯದ ಕೆಲಸವಾಗಿದ್ದು ಜೂನಿಯರ್ ಶಂಕರ್ ನಾಗ್ ಸತತವಾಗಿ ಮೂರು ದಶಕದಿಂದ ಆ ಕೆಲಸ ಮಾಡಿಕೊಂಡು ಬಂದಿರುವುದು ಅಭಿನಂದನಾರ್ಹ. ಕನ್ನಡ ನಾಡಿಗೆ ಶಂಕರ್ ನಾಗ್, ಎಸ್‌ಪಿಬಿ, ಜಾನಕಮ್ಮನವರು ಕೊಟ್ಟ ಕೊಡುಗೆ ಅಪಾರವಾಗಿದ್ದು ಅದಕ್ಕಾಗಿಯೇ ಇಂದಿಗೂ ಸಹ ಅವರು ಜನರ ಮನದಲ್ಲಿ ಅಮರವಾಗಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಕಲಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಸಿ.ದಿವುಶಂಕರ್ ಮಾತನಾಡಿ, ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಬೇಕಾಗಿದೆ. ಮುಂದಿನ ದಿನಗಳಲ್ಲಿ ಶಂಕರ್ ನಾಗ್ ರವರ ಕಲಾಮಂದಿರ ಕಟ್ಟುವ ಕನಸು ನಮಗಿದೆ. ಇದಕ್ಕಾಗಿ ಸಾರ್ವಜನಿಕರು ಹೆಚ್ಚಿನ ಅವಕಾಶಗಳನ್ನು ನೀಡುವ ಜೊತೆಗೆ ಕಲಾ ಮಂದಿರ ನಿರ್ಮಾಣಕ್ಕೆ ಸಹಕರಿಸಬೇಕು. ಕಲಾವಿದರಿಗಾಗಿ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗುರುತಿನ ಚೀಟಿ ನೀಡುತ್ತಿದ್ದಾರೆ. ಕಲಾವಿದರು ಇದರ ಸದುಪಯೋಗ ಪಡೆಯಬೇಕು. ಕಲಾವಿದರಿಗೆ ಅವಕಾಶಕ್ಕೆ ಕೊರತೆ ಇದೆ. ಇಲಾಖೆಯವರಾಗಲಿ, ಸಂಘ ಸಂಸ್ಥೆಗಳಾಗಲಿ ಕಲಾವಿದರಿಗೆ ಪ್ರೋತ್ಸಾಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರತ್ನ ಡಾ.ರಾಜಕುಮಾರ್ ಕಲಾ ಪರಿಷತ್ ಅಧ್ಯಕ್ಷ ಪರಶುರಾಮ ಗೊರಪ್ಪ, ಎಂಡಿ ಸಣ್ಣಪ್ಪ, ಗಡಾರಿ ಕೃಷ್ಣಪ್ಪ, ಅವಿನಾಶ್ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷಯಮುಕ್ತ ಸಮಾಜಕ್ಕಾಗಿ ಆರಂಭಿಕ ಪತ್ತೆ, ಕಡ್ಡಾಯ ನೋಂದಣಿ ಅಗತ್ಯ: ಎಸಿ
ಬಡ ಮಕ್ಕಳ ಅಕ್ಷರದ ಕನಸಿಗೆ ಗಾರೆ ಗೋಪಾಲಣ್ಣನ ಆಸರೆ