ಕೋಟ ಪಂಚಶಕ್ತಿ ಸಂಘದಿಂದ ಶಂಕರ ಜಯಂತೋತ್ಸವ

KannadaprabhaNewsNetwork |  
Published : May 19, 2026, 02:45 AM IST
18ಶಂಕರ | Kannada Prabha

ಸಾರಾಂಶ

ದೈತ ಮತ ಸಂಸ್ಥಾಪಕ ಶಂಕರಾಚಾರ್ಯರ ಜೀವನ ಇಂದಿನ ಜನಾಂಗಕ್ಕೆ ಪ್ರೇರಕ ಶಕ್ತಿ, ಆ ಮಹಾನ್ ಚೇತನ ಸನಾತನ ಹಿಂದೂ ಧರ್ಮ ಪ್ರತಿಬಿಂಬ ಎಂದು ಉಪನ್ಯಾಸಕಿ ಸವಿತಾ ಎರ್ಮಾಳ್ ಹೇಳಿದರು.

ಕುಂದಾಪುರ: ದೈತ ಮತ ಸಂಸ್ಥಾಪಕ ಶಂಕರಾಚಾರ್ಯರ ಜೀವನ ಇಂದಿನ ಜನಾಂಗಕ್ಕೆ ಪ್ರೇರಕ ಶಕ್ತಿ, ಆ ಮಹಾನ್ ಚೇತನ ಸನಾತನ ಹಿಂದೂ ಧರ್ಮ ಪ್ರತಿಬಿಂಬ ಎಂದು ಉಪನ್ಯಾಸಕಿ ಸವಿತಾ ಎರ್ಮಾಳ್ ಹೇಳಿದರು.

ಅವರು ಇಲ್ಲಿನ ಹೊಸಬೇಂಗ್ರೆಯ ಪಂಚಶಕ್ತಿ ಸಂಘದ 24ನೇ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ಶಂಕರ ಜಯಂತಿ ಮಹೋತ್ಸವದಲ್ಲಿ ಉಪನ್ಯಾಸ ನೀಡಿದರು.ಭಾರತೀಯ ಸನಾತನ ಧರ್ಮಕ್ಕೆ ಶಂಕರಾಚಾರ್ಯರ ಕೊಡುಗೆ ಅಪಾರ, ಅಂತಹ ದೈವಿ ಸ್ವರೂಪಿಯ ಜೀವನದ ಮೌಲ್ಯಗಳನ್ನು ನಾವುಗಳು ಅಳವಡಿಸಿಕೊಳ್ಳಬೇಕು, ಆಗ ಮಾತ್ರ ಜಯಂತೋತ್ಸವ ಕಾರ್ಯಕ್ರಮಕ್ಕೆ ಅರ್ಥಬರಲು ಸಾಧ್ಯ ಎಂದರು.

ಸಭೆಯಲ್ಲಿ ಶೈಕ್ಷಣಿಕ ಸಾಧಕಿ ಸಾನ್ವಿ ನಾಗರಾಜ್ ಖಾರ್ವಿ ಪರವಾಗಿ ಪೋಷಕರಾದ ರೇವತಿ ಖಾರ್ವಿ ಸನ್ಮಾನ ಸ್ವೀಕರಿಸಿದರು. ವಾರ್ಷಿಕೋತ್ಸವದಂಗವಾಗಿ ನಡೆದ ಆಟೋಟಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಪತ್ರಕರ್ತ ರವೀಂದ್ರ ಕೋಟ ವಹಿಸಿದ್ದು, ಪಂಚಶಕ್ತಿಯ ಸಾಮಾಜಿಕ ಕೈಂಕರ್ಯಗಳನ್ನು ಹಾಗೂ ಶಂಕರ ಜಯಂತಿ ಆಚರಿಸುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಸ್ಥಳೀಯರಾದ ಶಂಕರ ಖಾರ್ವಿ ಅವರು ಶಂಕರ ಜಯಂತಿ ಪೂಜಾ ಕಾರ್ಯ ನೆರವೇರಿಸಿದರು. ಶೃಂಗೇರಿ ಶಾರದ ಪೀಠದ ದಕ ಮತ್ತು ಉಡುಪಿ ಜಿಲ್ಲೆಯ ಪಾದಪೂಜಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾಧವ ಖಾರ್ವಿ, ಕಸಾಪ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ, ಕೋಡಿತಲೆ ಶಾಲೆಯ ಮುಖ್ಯ ಶಿಕ್ಷಕಿ ನಾಗರತ್ನ, ಪಂಚಶಕ್ತಿ ಸಂಘದ ಅಧ್ಯಕ್ಷ ಪವೀಣ್ ಡಿ ಖಾರ್ವಿ ಉಪಸ್ಥಿತರಿದ್ದರು.

ಸಂಘದ ಗೌರವಾಧ್ಯಕ್ಷ ಮಡಿ ವಿಶ್ವನಾಥ ಖಾರ್ವಿ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕಿ ಸುಪ್ರಿತಾ ಖಾರ್ವಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯ ರಸ್ತೆಗಳ‌ ಮಳಿಗೆ ನಾಮಫಲಕಗಳಲ್ಲಿ ಕನ್ನಡ ಬಳಕೆಗೆ ಅಭಿಯಾನ
ಸುವರ್ಣ ವರ್ಷದ ಕಲಾರಂಗಕ್ಕೆ ಶತಮಾನೋತ್ಸವ ಗೌರವ