ಡಿ.28ರಿಂದ ಶಂಕರ ವಿಜಯೋತ್ಸವ: ಶಂಕರ ಪ್ರತಿಷ್ಠಾನ ವಿಶೇಷ ಸಭೆ

KannadaprabhaNewsNetwork |  
Published : Nov 12, 2026, 02:45 AM IST
ಶಂಕರ ಪ್ರತಿಷ್ಠಾನದ ವಿಶೇಷ ಸಭೆ ನಡೆಯಿತು | Kannada Prabha

ಸಾರಾಂಶ

ಶೃಂಗೇರಿ ಜಗದ್ಗುರುಗಳ ಆದೇಶದಂತೆ ಮುಂಬರುವ ಡಿ.೨೮, ೨೯ ಮತ್ತು ೩೦ರಂದು ಉಡುಪಿಯಲ್ಲಿ ನಡೆಯುವ ಶ್ರೀ ಶಂಕರ ವಿಜಯೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೋಟೆಕಾರ್‌ನ ಶ್ರೀ ಶಂಕರ ಪ್ರತಿಷ್ಠಾನದ ವಿಶೇಷ ಸಭೆ ಶನಿವಾರ ನಗರದ ಬಾಳಂಭಟ್ ಹಾಲ್‌ನಲ್ಲಿ ಶೃಂಗೇರಿ ಧರ್ಮಾಕಾರಿ ಶ್ರೀಸತ್ಯಶಂಕರ ಬೊಳ್ಳಾವ ನೇತೃತ್ವದಲ್ಲಿ ನಡೆಯಿತು.

ಮಂಗಳೂರು : ಶೃಂಗೇರಿ ಜಗದ್ಗುರುಗಳ ಆದೇಶದಂತೆ ಮುಂಬರುವ ಡಿ.೨೮, ೨೯ ಮತ್ತು ೩೦ರಂದು ಉಡುಪಿಯಲ್ಲಿ ನಡೆಯುವ ಶ್ರೀ ಶಂಕರ ವಿಜಯೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೋಟೆಕಾರ್‌ನ ಶ್ರೀ ಶಂಕರ ಪ್ರತಿಷ್ಠಾನದ ವಿಶೇಷ ಸಭೆ ಶನಿವಾರ ನಗರದ ಬಾಳಂಭಟ್ ಹಾಲ್‌ನಲ್ಲಿ ಶೃಂಗೇರಿ ಧರ್ಮಾಕಾರಿ ಶ್ರೀಸತ್ಯಶಂಕರ ಬೊಳ್ಳಾವ ನೇತೃತ್ವದಲ್ಲಿ ನಡೆಯಿತು.ಶ್ರೀ ಶಂಕರ ವಿಜಯೋತ್ಸವ ಸಮಿತಿ ಅಧ್ಯಕ್ಷ ಮಹೇಶ್ ಠಾಕೂರ್ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಶಂಕರ ವಿಜಯೋತ್ಸವ ಹಿನ್ನೆಲೆಯಲಲ್ಲಿ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ, ಭಾಷಣ ಸೇರಿದಂತೆ ವಿವಿಧ ಸರ್ಧೆಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮ ಕೇವಲ ಆಧ್ಯಾತ್ಮಿಕವಾಗಿರದೆ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಯಲ್ಲೂ ಅರ್ಥಪೂರ್ಣವಾಗಿ ನಡೆಯುವಂತಾಗಬೇಕು. ಇದಕ್ಕಾಗಿ ಬಡ ಅರ್ಹರಿಗೆ ಆಟೋರಿಕ್ಷಾ, ಬಡಮಹಿಳೆಯರಿಗೆ ಹೊಲಿಗೆ ಯಂತ್ರ, ನೇತ್ರ ಶಿಬಿರ, ಕನ್ನಡಕ ವಿತರಣೆಯಂತಹ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದರು. ಸತ್ಯಶಂಕರ ಬೊಳ್ಳಾವ ಮಾತನಾಡಿ, ಶ್ರೀಶಂಕರ ವಿಜಯೋತ್ಸವ ಕುರಿತಂತೆ ವಿವಗಳನ್ನು ನೀಡಿ, ಮುಂದಿನ ಸಭೆಯನ್ನು 14ರಂದು ಅಪರಾಹ್ನ ೨.೩೦ಕ್ಕೆ ಬಾಳಂಭಟ್ ಹಾಲ್‌ನಲ್ಲಿ ನಡೆಸಲಾಗುವುದು. ೨೨ರಂದು ಶ್ರೀಶಂಕರ ವಿಜಯೋತ್ಸವದ ಆರಂಭೋತ್ಸವ ಇದೇ ಹಾಲ್‌ನಲ್ಲಿ ಸಂಜೆ ೪ಗಂಟೆಗೆ ನಡೆಯಲಿದೆ ಎಂದರು.ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಕಾರ್ಯದರ್ಶಿ ನರೇಶ್ ಮಲ್ಲಿಗೆ ಮಾಡು, ಡಾ.ಸತ್ಯಕೃಷ್ಣ ಭಟ್, ಚಂದ್ರಶೇಖರ ಉಚ್ಚಿಲ, ಕಾರ್ಯದರ್ಶಿ ಕೈಯ್ಯೂರು ನಾರಾಯಣ ಭಟ್, ಮಾಜಿ ಶಾಸಕ ಬಾಲಕೃಷ್ಣ ಭಟ್ ಉಪಸ್ಥಿತರಿದ್ದರು.

ಸಮಿತಿ ಕಾರ್ಯದರ್ಶಿ ಡಾ.ಸತ್ಯಕೃಷ್ಣ ಭಟ್ ಅವರು ಕಾರ್ಯಕ್ರಮದ ಯಶಸ್ಸಿಗೆ ನಮ್ಮ ಸಿದ್ಧತೆ ಮತ್ತು ಪಾಲ್ಗೊಳ್ಳುವಿಕೆ ಹೇಗಿರಬೇಕೆಂಬ ಬಗ್ಗೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌