ಬೀಳಗಿ : ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದ ಆವರಿಸಲ್ಪಟ್ಟಿದೆ. ಇಡೀ ಭಾರತದ ಸನಾತನ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಸ್ಥಳೀಯ ಆಡಳಿತ ಏರ್ಪಡಿಸಿದ್ದ ಶಂಕರಾಚಾರ್ಯ ಜಯಂತ್ಯೋತ್ಸವ ಸಮಾರಂಭ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವ್ಯಕ್ತಿಯ ಸಾಧನೆಗೆ ವಯಸ್ಸು ಮುಖ್ಯವಲ್ಲ ಜೀವನೋತ್ಸಾಹ ಮುಖ್ಯ ಎನ್ನುವುದನ್ನು ಕೇವಲ 32 ವರ್ಷ ಬದುಕಿ, ಅದ್ಭುತ ಸಾಧನೆ ಮಾಡಿ ಅದ್ವೈತ ಸಿದ್ಧಾಂತದ ದರ್ಶನ ಮಾಡಿಸಿದವರು ಶಂಕರಾಚಾರ್ಯರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ವಿನೋದ ಹತ್ತಳ್ಳಿ ಮಾತನಾಡಿ, ಆತ್ಮ, ಪರಮಾತ್ಮ ಬೇರೆ ಬೇರೆ ಅಲ್ಲ ಅವೆರಡು ಒಂದೇ.ಅದ್ವೈತ ಸಿದ್ಧಾಂತದ ಮೂಲಕ ಇಡೀ ಜಗತ್ತಿಗೆ ಕಾಲ್ನಡಿಗೆಯ ಮೂಲಕ ನಡೆದು ತಿಳಿಸಿದವರು ಆದಿಗುರು ಶಂಕರಾಚಾರ್ಯರು ಎಂದರು.
ಬ್ರಾಹ್ಮಣ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಅನಿಲ ಹಲ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕ ಚಿದಂಬರ ಜೋಶಿ ಉಪನ್ಯಾಸ ನೀಡಿದರು.
ಪಪಂ ಅಧ್ಯಕ್ಷ ರಾಮಚಂದ್ರ ಬೊರ್ಜಿ, ಎಸ್.ಬಿ.ಮುಂಡರಗಿ, ಉಮೇಶ ಕೊಲ್ಹಾರ, ಶಂಕರ ದೀಕ್ಷಿತ, ಗಣೇಶ ದೀಕ್ಷಿತ, ಸುರೇಶ ದೇಶಪಾಂಡೆ, ಸದಾಶಿವ ಜೋಶಿ, ರಷ್ಮೀ ಹಲ್ಯಾಳ, ಗಿರಿಜಾ ದೀಕ್ಷಿತ, ಸುನಿತಾ ಸೊನ್ನ, ವೀಣಾ ದೀಕ್ಷಿತ ಇದ್ದರು.