ಶರಣರು ಆಧುನಿಕ ಪ್ರಜಾಪ್ರಭುತ್ವದ ರೂವಾರಿಗಳು: ವೀರಭದ್ರ ಶರಣರು

KannadaprabhaNewsNetwork |  
Published : Dec 06, 2024, 09:00 AM IST
ಕಾರಟಗಿ ತಾಲೂಕಿನ ಹುಳ್ಕಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಕನ್ನಡ ಕಾತಿರ್ಕೋತ್ಸವ ಕಾಯರ್ಕ್ರಮದಲ್ಲಿ ವೀರಶೈವ ಮಹಾಸಭಾದ ನಿದೇರ್ಶಕ ಅಮರೇಶಪ್ಪ ಕೋಮಲಾಪುರ, ವೀರಭದ್ರ ಶರಣರು ಸೇರಿದಂತೆ ಕಸಾಪ ಪದಾಧಿಕಾರಿಗಳು ಇದ್ದರು.==೦== | Kannada Prabha

ಸಾರಾಂಶ

ಕನ್ನಡ ಸಾಹಿತ್ಯದಲ್ಲಿ ೧೨ನೇ ಶತಮಾನದ ಶರಣರು ಬರೆದಿರುವ ವಚನಗಳು ಬಹುಮುಖ ಪಾತ್ರ ವಹಿಸಿದ್ದರಿಂದ ಇಂದು ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ.

ಕನ್ನಡ ಕಾರ್ತಿಕೋತ್ಸವದ ಉಪನ್ಯಾಸ ಮಾಲೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕಾರಟಗಿಕನ್ನಡ ಸಾಹಿತ್ಯದಲ್ಲಿ ೧೨ನೇ ಶತಮಾನದ ಶರಣರು ಬರೆದಿರುವ ವಚನಗಳು ಬಹುಮುಖ ಪಾತ್ರ ವಹಿಸಿದ್ದರಿಂದ ಇಂದು ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ. ಅಷ್ಟೆ ಅಲ್ಲ ಜಗತ್ತಿಗೆ ಅನುಭವ ಮಂಟಪ ಎನ್ನುವ ಸಂಸತ್ತಿನ ಪರಿಕಲ್ಪನೆ ಕೊಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿ ಹಾಡಲಾಗಿದೆ ಎಂದು ತಲೇಖಾನ ಹಿರೇಮಠದ ವೀರಭದ್ರ ಶರಣರು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಹುಳ್ಕಿಹಾಳದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ಕಾರ್ತಿಕೋತ್ಸವದ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯದ ಪ್ರಭಾವ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.ಶರಣರು ವಚನಗಳನ್ನು ಬರೆಯಲು ಶುರು ಮಾಡಿದ್ದಾಗ ನಮ್ಮಲ್ಲಿ ಪ್ರಜಾಪ್ರಭುತ್ವದ ಕಲ್ಪನೆಯೇ ಇರಲಿಲ್ಲ. ಇಂತಹ ವೇಳೆಯಲ್ಲಿ ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಅನುಭವ ಮಂಟಪ ಎನ್ನುವ ವೇದಿಕೆ ನಿರ್ಮಾಣ ಮಾಡಿ ಈಗಿನ ಹಾಗೆ ಅಂದೆಯೇ ಸಮಾಜದ ವಿವಿಧ ಸ್ತರಗಳಿಂದ, ಕಾಯಕಗಳಿಂದ ಬಂದ ಶರಣರಿಗೆ ಸ್ಥಳ ನೀಡಿದರು. ಇದೇ ಇಂದಿನ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಪರಿಕಲ್ಪನೆ ಮೂಲವಾಗಿದೆ. ಹಾಗಾಗಿ ಶರಣರು ತಮ್ಮ ವಚನ ಪರಂಪರೆ ಮೂಲಕ ಸಮಾನತೆ, ಸಹೋದರತೆಯ ತತ್ವಗಳನ್ನು ಕಟ್ಟಿಕೊಟ್ಟು ಆಧುನಿಕ ಪ್ರಜಾಪ್ರಭುತ್ವದ ರೂವಾರಿಗಳಾಗಿದ್ದಾರೆ ಎಂದರು.ಬಳಿಕ ಬೇವಿನಾಳ ಹಿರೇಮಠದ ಶರಣಯ್ಯಸ್ವಾಮಿ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಶರಣಪ್ಪ ಕೋಟ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಗುರು ವೈ.ಐ. ಹನುಮೇಶ್ ಅಧ್ಯಕ್ಷತೆ ವಹಿಸಿದ್ದರು.ಕಾಯರ್ಕ್ರಮದಲ್ಲಿ ವೀರಶೈವ ಮಹಾಸಭಾದ ನಿರ್ದೇಶಕ ಅಮರೇಶಪ್ಪ ಕೋಮಲಾಪುರ, ಕಸಾಪ ಸದಸ್ಯ ಮಲ್ಲಿಕಾರ್ಜನ ಯತ್ನಟ್ಟಿ, ಕಲ್ಯಾಣಕುಮಾರ್, ಶಿಕ್ಷಕ್ಷರಾದ ಲಿಂಗರಾಜ್, ಮಂಜುನಾಥ್, ಅಕ್ಷತಾ ಎಂ.ಕೆ. ಇನ್ನಿತರರು ಇದ್ದರು.ನೌಕರರ ಸಂಘಕ್ಕೆ ಅಯ್ಕೆಯಾದ ಮುಖ್ಯಗುರು ವೈ.ಐ. ಹನುಮೇಶ್ ಮತ್ತು ಸಹ ಶಿಕ್ಷಕ ಹಂಪನಗೌಡ ಅವರನ್ನು ಪರಿಷತ್ತಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕರಾದ ಪರಶುರಾಮ, ಅಮರೇಗೌಡ ಮತ್ತು ಸುಲೇಮಾನ್ ಕಾಯರ್ಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!