ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮದಿಂದ ನಡೆಯದೇ ಧರ್ಮ ಧರ್ಮಗಳಲ್ಲಿ ಕದನ, ಮೇಲು, ಕೀಳು ಅಸ್ಪೃಶ್ಯತೆ ಹೋಗದಿದ್ದರೆ ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆ ಬೇರೆ ಬೇರ ಧರ್ಮ ಒಪ್ಪಿಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ. ಇದಕ್ಕೂ ಪೂರ್ವದಲ್ಲಿ ಮಠಾಧೀಶರು, ಬುದ್ಧಿಜೀವಿಗಳು, ಸಾಮಾಜ ಚಿಂತಕರು ಹಾಗೂ ರಾಜಕಾರಣಿಗಳು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೇಳಿದರು.
ಶರಣರ ತತ್ವ ಆಚರಣೆಗೆ ಬದ್ಧರಾಗಬೇಕಿದ್ದು, ಅಸ್ಪೃಶ್ಯತೆ ಹೋಗಲಾಡಬೇಕಿದೆ. ಈ ನಿಟ್ಟಿನಲ್ಲಿ ಯುವಕರು ಸಿದ್ಧರಾಗಬೇಕು. ನಮ್ಮ ಹಕ್ಕನ್ನು ಪಡೆದುಕೊಳ್ಳಲು ಒಗ್ಗಟ್ಟಿನ ಅಗತ್ಯವಿದೆ. ಉದ್ಯೋಗದಿಂದ ವಂಚಿತರಾಗಿ ಎಲ್ಲ ಸಮಾಜಗಳು ಬೀದಿ ಪಾಲಾಗುತ್ತಿವೆ. ತಮ್ಮ ಮೂಲ ಕಸಬನ್ನು ಗೌರವಿಸಿ ಕಾಲಕ್ಕೆ ತಕ್ಕಂತೆ ಆಧುನಿಕ ಸ್ಪರ್ಶ ಕೊಡಬೇಕು. ಸಮಾಜ ಮುಂದೆ ಬರಲು ಸಮಾಜದ ಎಲ್ಲ ಮಕ್ಕಳಿಗೆ ಶಿಕ್ಷಣ ಕೊಡಬೇಕು. ಇಲ್ಲವೇ ರಾಜಕೀಯ ಶಕ್ತಿ ಪಡೆದುಕೊಂಡಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಸಮ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ 12ನೇ ಶತನಾಮದ ಶರಣರು ಶ್ರಮಿಸಿದ್ದಾರೆ. ಆದರೆ ನಾವು ಸಿದ್ಧಾಂತಗಳಿಗೆ ತಿಲಾಂಜಲಿಯನ್ನಿಟ್ಟಿದ್ದೇವೆ. ಇದರಿಂದ ಅವರ ತತ್ವಗಳಿಗೆ ಅವಮಾನ ಮಾಡಿದಂತಾಗುತ್ತಿದೆ. ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಪರಿವರ್ತನೆ ಕಾಲ ಬರಬೇಕಿದೆ. ಹಡಪದ ಅಪ್ಪಣ್ಣನವರು ಬಸವಣ್ಣನವರ ಮಾರ್ಗದಲ್ಲಿ ನಡೆದಿದ್ದು, ನೀಲಾಂಬಿಕೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಡಾ.ಬಸವಲಿಂಗ ಸ್ವಾಮೀಜಿ ಉಪನ್ಯಾಸ ನೀಡಿ ಮಾತನಾಡಿ, ಲಿಂಗ ಪೂಜೆಯಿಂದ ಏಕಾಗ್ರತೆ ಹಾಗೂ ಉಸಿರಾಟ ಹತೋಟಿಯಲ್ಲಿರಲಿದೆ. ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಮಾತನಾಡಿ, ನಿತ್ಯ, ಸತ್ಯ ಕಾಯಕ ಅನುಸರಿಸಬೇಕು ಎಂದರು.
ಭಾವಚಿತ್ರ ಮೆರವಣಿಗೆ: