ಕನ್ನಡಪ್ರಭ ವಾರ್ತೆ ವಿಜಯಪುರ: ಸಂಸ್ಕೃತಿ ಅಳಿಯುತ್ತಿರುವ, ಮೌಲ್ಯಗಳು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಶರಣ-ಶರಣೆಯರ ಜಯಂತಿಗಳು ನಮಗೆಲ್ಲ ದಾರಿ ದೀಪಗಳಾಗುತ್ತಿವೆ ಎಂದು ಪದ್ಮಜಾ ಪಾಟೀಲ ನುಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ: ಸಂಸ್ಕೃತಿ ಅಳಿಯುತ್ತಿರುವ, ಮೌಲ್ಯಗಳು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಶರಣ-ಶರಣೆಯರ ಜಯಂತಿಗಳು ನಮಗೆಲ್ಲ ದಾರಿ ದೀಪಗಳಾಗುತ್ತಿವೆ ಎಂದು ಪದ್ಮಜಾ ಪಾಟೀಲ ನುಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಿಲ್ಲಾ ಮಹಿಳಾ ಘಟಕ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮತ್ತು ಕದಳಿ ಮಹಿಳಾ ವೇದಿಕೆ ಸಂಯುಕ್ತಾಶ್ರಯದಲ್ಲಿ ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಆಚರಿಸಿದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ಅವರು ಮಾತನಾಡಿದರು. ಬಳಿಕ ಮಾತನಾಡಿದ ಅವರು, ಶರಣೆ ಅಕ್ಕಮಹಾದೇವಿ ಲೌಕಿಕವನ್ನು ಮೀರಿದ ಅಲೌಕಿಕ, ಅಧ್ಯಾತ್ಮದ ಔನ್ನತ್ಯ. ಆತ್ಮ ಸಂಗಾತಕ್ಕೆ ಚೆನ್ನಮಲ್ಲಿಕಾರ್ಜುನ ಉಂಟು ಎಂಬ ದಿಟ್ಟ ಮಾತನ್ನು ಹೇಳಿದ ಧೀರ ಶರಣೆ. ಹೆಣ್ಣಿನ ಸ್ವಾಭಿಮಾನದ, ಅಭಿವ್ಯಕ್ತಿ ಸ್ವಾತಂತ್ರದ ಪ್ರತಿಪಾದಕಿ. ಪ್ರಥಮ ಕವಯಿತ್ರಿ, ಅಕ್ಕ ಮಹಾದೇವಿ ಬಸವಾದಿ ಪ್ರಮಥರಿಂದ ಗೌರವಿಸಿಕೊಂಡವಳು ಎಂದರು.ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಡಾ.ಉಷಾದೇವಿ ಹಿರೇಮಠ ಮಾತನಾಡಿ, ಅಕ್ಕನ ಅನುಭಾವದ ಎತ್ತರ, ವಿಸ್ತಾರ ಅನುಪಮ ಮತ್ತು ಮೌಲಿಕವಾದುದು ಎಂದರು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಡಾ.ಬನುದೇವಿ ಸಂಕಣ್ಣವರ, ಪರಮಾತ್ಮನೇ ತನ್ನ ಆತ್ಮ ಸಂಗಾತಿ ಎಂದು ಹೇಳಿದ ಅಕ್ಕನ ದಿಟ್ಟ ನಿಲುವು, ಸ್ಪಷ್ಟ ಮಾತು ಮತ್ತು ನಡೆ-ನುಡಿ ಒಂದಾಗಿಸಿದ ಅವಳು ಸ್ತ್ರೀ ಲೋಕಕ್ಕೆ ಮಾದರಿಯಾದವಳು ಎಂದು ಅನಿಸಿಕೆ ವ್ಯಕ್ತಪಡಿಸಿದರು.ಶೈಲಜಾ ಮೋದಿ, ನೂತನ ಬ್ಯಾಕೋಡ, ದಾನಮ್ಮ ಮಹಾಜನ, ನೀಲಮ್ಮ ಸಂಕನ್ನವರ, ನಿಂಗಮ್ಮ ಡೋಮನಾಳ, ಸ್ವಪ್ನಾ ಅರಕೇರಿ, ಶಕುಂತಲಾ ಮೋಸಲಗಿ, ಡಾ.ವಿ.ಡಿ.ಐಹೊಳ್ಳಿ, ಎಂ.ಎಂ.ಅವರಾದಿ ಉಪಸ್ಥಿತರಿದ್ದರು. ಜ್ಯೋತಿ ಬಿರಾದಾರ, ಪಾರ್ವತಿ ಕೊರಬು ಮತ್ತು ಮಲ್ಲಮ್ಮ ಹೊಸಮನಿ ಸಂಗಡಿಗರು ಅಕ್ಕನ ಜೋಗುಳ ಹಾಡುಗಳನ್ನು ಹಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.