ನರಗುಂದ: ತಾಲೂಕಿನ ಭೈರನಹಟ್ಟಿ-ಮುದ್ಗಣಿಕಿ ಗ್ರಾಪಂ ಅಧ್ಯಕ್ಷರಾಗಿ ಶರಣಬಸಪ್ಪ ನರಸಾಪುರ ಅವರು ಆಯ್ಕೆಯಾದರು.
ಆನಂತರ ನೂತನ ಅಧ್ಯಕ್ಷ ಶರಣಬಸಪ್ಪ ಮಾತನಾಡಿ, ಭೈರನಹಟ್ಟಿ ಹಾಗೂ ಮುದ್ಗಣಿಕಿ ಗ್ರಾಮದ ಸದಸ್ಯರು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ಮುಂಬರುವ ದಿನಗಳಲ್ಲಿ ಸರ್ಕಾರದಿಂದ ಬರುವ ಅನುದಾನವನ್ನು ಬಳಕೆ ಮಾಡಿಕೊಳ್ಳಲು ಎರಡು ಗ್ರಾಮದ ಸದಸ್ಯರು ಮತ್ತು ಗುರು ಹಿರಿಯರ ಜೊತೆ ಚರ್ಚೆಸಿ ಅನುದಾನ ಬಳಕೆ ಮಾಡಿಕೊಂಡು ಈ ಗ್ರಾಮಗಳನ್ನು ಅಭಿವೃದ್ಧಿ ಮಾಡಲು ಪ್ರಯತ್ನ ಮಾಡುತ್ತೇನೆಂದು ಹೇಳಿದರು.
ಈ ಸಂದರ್ಭದಲ್ಲಿ ಯಲ್ಲಪ್ಪ ದೊಡ್ಡಮನಿ, ವಿರೂಪಾಕ್ಷಪ್ಪ ನರಸಾಪೂರ, ಚಂದ್ರಶೇಖರ ದಂಡಿನ, ಹನಮಂತ ಸಂಗಟಿ, ನಾಗಪ್ಪ ಬೆನ್ನೂರ, ಬಸವರಾಜ ಐನಾಪೂರ, ನಿಂಗಪ್ಪ ತೆಗ್ಗಿನಮನಿ, ಎಲ್.ಎಂ. ಪಾಟೀಲ, ಚಂದ್ರು ಮೊರಬದ, ನಿಂಗಪ್ಪ ಅಪೋಜ, ಉಮೇಶ ಮೋರಬದ, ಈರಪ್ಪ ಐನಾಪೂರ, ನಾಗಪ್ಪ ಕಟ್ಟಿಮನಿ, ಜ್ಞಾನದೇವ ಮುನೇನಕೊಪ್ಪ, ಪುಷ್ಪಾ ಪಾಟೇಲ, ಸುಮಿತ್ರಾ ಐನಾಪೂರ, ಚನ್ನಪ್ಪ ಬೆಳವಣಿಕಿ, ಸೈನಾಜಬಿ ಬಾಗಲದ, ಗ್ರಾಪಂ ಎಸ್.ಎಂ.ಹರನಹಟ್ಟಿ, ಹಾಗೂ ಸಿಬ್ಬಂದಿ ವರ್ಗದವರು ಇದ್ದರು.