ಸಮಾಜದ ಅಂಕುಡೊಂಕು ತಿದ್ದಿದ ಶರಣರು: ಶೋಭಾತಾಯಿ ಮಾಗಾವಿ

KannadaprabhaNewsNetwork |  
Published : Aug 04, 2025, 12:30 AM IST
ಕಾರ್ಯಕ್ರಮದಲ್ಲಿ ಶೋಭಾತಾಯಿ ಮಾಗಾವಿ ಮಾತನಾಡಿದರು. | Kannada Prabha

ಸಾರಾಂಶ

ದಾನಮ್ಮದೇವಿ ದೇವಸ್ಥಾನ ಭಕ್ತರ ಸಹಕಾರದೊಂದಿಗೆ ಕಾಲಕಾಲಕ್ಕೆ ಹಮ್ಮಿಕೊಳ್ಳುವ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಿ, ಸಮಾಜ ಸೇವೆಯು ಜೀವನಕ್ಕೆ ಆನಂದ ನೀಡುತ್ತದೆ.

ಹಾವೇರಿ: 12ನೇ ಶತಮಾನದ ಶರಣರು ವೈಯಕ್ತಿಕ ಆತ್ಮ ಉನ್ನತಿಯ ಜತೆಗೆ ಸಮಾಜದ ಸರ್ವತೋಮುಖ ಉನ್ನತಿಗಾಗಿ ಶ್ರಮಿಸಿ ಸಮಾಜದ ಅಂಕುಕೊಂಡು ತಿದ್ದಿದರು ಎಂದು ದಾನಮ್ಮದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷೆ ಶೋಭಾತಾಯಿ ಮಾಗಾವಿ ತಿಳಿಸಿದರು.

ನಗರದ ದಾನಮ್ಮದೇವಿ ದೇವಸ್ಥಾನದಲ್ಲಿ ಬಸವ ಬಳಗ ಹಾಗೂ ಶರಣ ಸಾಹಿತ್ಯ ಪರಿಷತ್ತಿನಿಂದ ಶ್ರಾವಣ ಮಾಸದ ಅಂಗವಾಗಿ ಏರ್ಪಡಿಸಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡಿ, ದಾನಮ್ಮದೇವಿ ದೇವಸ್ಥಾನ ಭಕ್ತರ ಸಹಕಾರದೊಂದಿಗೆ ಕಾಲಕಾಲಕ್ಕೆ ಹಮ್ಮಿಕೊಳ್ಳುವ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಿ, ಸಮಾಜ ಸೇವೆಯು ಜೀವನಕ್ಕೆ ಆನಂದ ನೀಡುತ್ತದೆ ಎಂದರು.

ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ ಮಾತನಾಡಿ, ವಚನ ಸಾಹಿತ್ಯ ಬಸವಾದಿ ಶಿವಶರಣರ ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಅಂದಿನ ಕಾಲದಲ್ಲಿ ದಾನಮ್ಮದೇವಿ ಕೈಗೊಂಡ ಸಾಮಾಜಿಕ ಕಾರ್ಯಗಳು ಸಮಾಜಕ್ಕೆ ಎಂದೆಂದಿಗೂ ಮಾದರಿಯಾಗಿವೆ ಎಂದರು.

ಜಗದೀಶ ಹತ್ತಿಕೋಟಿ ಮಾತನಾಡಿ, ಬಸವಾದಿ ಶಿವಶರಣರು ಸ್ತ್ರೀಸಮಾನತೆಯ ಹರಿಕಾರರು. ಅಕ್ಕಮಹಾದೇವಿ ಶರಣೆಯರಲ್ಲಿ ಅಗ್ರಶ್ರೇಣಿಯ ದಿಟ್ಟ ಶರಣೆಯಾಗಿದ್ದಾರೆ ಎಂದರು.

ಮುರಿಗೆಪ್ಪ ಕಡೇಕೊಪ್ಪ, ಕಿರಣ ಕೊಳ್ಳಿ, ಪ್ರಭುಗೌಡ ಬಸನಗೌಡ, ಶಿವಯೋಗಿ ಬೆನ್ನೂರ, ಬಸವರಾಜ ಕೋರಿ, ನಾಗೇಂದ್ರಪ್ಪ ಮಂಡಕ್ಕಿ, ಗುದಗಿ ಸದಾಶಿವ ಸಾಬಳದ, ಶಿವಾನಂದ ಹೊಸಮನಿ, ಚಂದ್ರಶೇಖರ ಮಾಳಗಿ, ಶಿವಯೋಗಿ ಮಾಮಲೆಪಟ್ಟಣಶೆಟ್ಟಿ, ಅರ್ಚಕರಾದ ಕುಮಾರಸ್ವಾಮಿ, ಚಂದ್ರಶೇಖರಯ್ಯ, ಬಸಯ್ಯಸ್ವಾಮಿ, ಶಾಂತಗಿರಿ, ಚಂಬಕ್ಕ ಯರೆಸೀಮೆ, ಗಂಗಕ್ಕ ನಂದಿವಾಡ, ರೇಷ್ಮಕ್ಕ ಮಾಗಾವಿ, ಅನಿತಾ ಹಿಂಚಿಗೇರಿ, ವಿದ್ಯಾ ಅಂಗಡಿ, ಶಾಂತಕ್ಕ ಮಡಿವಾಳರ, ಕಾವ್ಯ ಅಂಗಡಿ, ಅಕ್ಕಮಹಾದೇವಿ ಹಾನಗಲ್ಲ ಇದ್ದರು.

ಶಿವಬಸಮ್ಮ ಲಕ್ಕಣ್ಣನವರ ಪ್ರಾರ್ಥಿಸಿದರು. ಶಿವಯೋಗಿ ಅಂಗಡಿ ಸ್ವಾಗತಿಸಿದರು. ಶಿವಬಸಪ್ಪ ಮುದ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಗದ ಉಪಾಧ್ಯಕ್ಷ ಮಲ್ಲಿಕಾರ್ಜುನ ಹಿಂಚಿಗೇರಿ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ