ಸನಾತನ ಸಂಸ್ಕೃತಿ ರಕ್ಷಣೆ ಧ್ಯೇಯದೊಂದಿಗೆ ಆರಂಭ ಶರನ್ನವರಾತ್ರಿ

KannadaprabhaNewsNetwork |  
Published : Oct 11, 2026, 03:00 AM IST
೦೯ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುವ ದುರ್ಗಾದೇವಿ ನವರಾತ್ರಿ ಮಹೋತ್ಸವಕ್ಕೆ ಸಿದ್ದಗೊಂಡಿರುವ ಬೃಹತ್ ದುರ್ಗಾಮಂಟಪ. | Kannada Prabha

ಸಾರಾಂಶ

ಬಾಳೆಹೊನ್ನೂರುಭದ್ರಾನದಿ ತಟದ ಮೇಲಿನ ಬಾಳೆಹೊನ್ನೂರಿನಲ್ಲಿ ಕಳೆದ 16 ವರ್ಷಗಳ ಹಿಂದೆ ಆರಂಭಿಸಿದ ಶರನ್ನವರಾತ್ರಿ ಮಹೋತ್ಸವ ಅತ್ಯಲ್ಪ ಕಾಲದಲ್ಲಿ ಜಿಲ್ಲೆಯಲ್ಲೇ ಗಮನಸೆಳೆದಿದೆ. ಕಾರ್ಯಕ್ರಮದ ಸಂಭ್ರಮದಲ್ಲಿರುವ ಹಿನ್ನೆಲೆ ಈ ಬಾರಿ ಸಮಿತಿ ಸಕಲ ಸಿದ್ಧತೆ ಮಾಡಿದೆ.

ಧರ್ಮಾವಲಂಭಿತ ಕಾರ್ಯಕ್ರಮಗಳಿಗೆ ಸೀಮಿತ ದುರ್ಗಾ ಉತ್ಸವ । ಇಂದು ವಿದ್ಯುಕ್ತ ಚಾಲನೆ

ಸಚಿನ್ ಕುಮಾರ್ ಬಿ.ಎಸ್, ಬಾಳೆಹೊನ್ನೂರು

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಭದ್ರಾನದಿ ತಟದ ಮೇಲಿನ ಬಾಳೆಹೊನ್ನೂರಿನಲ್ಲಿ ಕಳೆದ 16 ವರ್ಷಗಳ ಹಿಂದೆ ಆರಂಭಿಸಿದ ಶರನ್ನವರಾತ್ರಿ ಮಹೋತ್ಸವ ಅತ್ಯಲ್ಪ ಕಾಲದಲ್ಲಿ ಜಿಲ್ಲೆಯಲ್ಲೇ ಗಮನಸೆಳೆದಿದೆ. ಕಾರ್ಯಕ್ರಮದ ಸಂಭ್ರಮದಲ್ಲಿರುವ ಹಿನ್ನೆಲೆ ಈ ಬಾರಿ ಸಮಿತಿ ಸಕಲ ಸಿದ್ಧತೆ ಮಾಡಿದೆ.

ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಅದಿದೇವತೆ ಮೃತ್ಯಂಬಿಕೆ ಸನ್ನಿಧಿಯಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ 2010ರಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ಆರಂಭಿಸಿದ ಶರನ್ನವರಾತ್ರಿ ಮಹೋತ್ಸವ ಇಂದಿಗೂ ಧರ್ಮಾವ ಲಂಭಿತ ಕಾರ್ಯಕ್ರಮಕ್ಕೆ ಸೀಮಿತವಾಗಿ ಭಕ್ತರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಆಧುನಿಕ ದಿನಗಳಲ್ಲಿ ಯುವಜನತೆಯಿಂದ ದೂರಾಗುತ್ತಿರುವ ದೇಶದ ಭವ್ಯ ಸಂಸ್ಕೃತಿ, ಸಂಪ್ರದಾಯ ರಕ್ಷಿಸಿ ಮುಂದಿನ ಪೀಳಿಗೆಗೂ ನೀಡಬೇಕೆಂಬ ಏಕೈಕ ಸದುದ್ದೇಶದಿಂದ ಆರಂಭಿಸಿದ ಉತ್ಸವ ಇಂದು ಅದೇ ಹಾದಿಯಲ್ಲಿ ಸಂಸ್ಕೃತಿ, ಸಂಪ್ರ ದಾಯ ರಕ್ಷಿಸುವಲ್ಲಿ ಯಶಸ್ವಿಯಾಗಿ ಹಲವರ ಮನ ಪರಿವರ್ತನೆಗೂ ಸಾಕ್ಷಿಯಾಗಿದೆ. ಸಮಾನ ಮನಸ್ಕ ಹಾಗೂ ಯುವ ಪಡೆ ನವರಾತ್ರಿ ಪೂಜಾ ಸಮಿತಿ ಅತ್ಯಂತ ಶ್ರದ್ಧೆಯಿಂದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಸಮಿತಿ ಪದಾಧಿಕಾರಿಗಳು ನವರಾತ್ರಿ ಸಂದರ್ಭದಲ್ಲಿ ಬ್ರಹ್ಮಚರ್ಯ, ಸಾತ್ವಿಕ ಆಹಾರ, ಸಾಂಪ್ರದಾಯಿಕ ಉಡುಗೆ ತೊಡುಗೆ ತೊಡುವುದು ವಿಶೇಷ. ಪ್ರತಿನಿತ್ಯ ಸಪ್ತಶತೀ ಪಾರಾ ಯಣಾದಿ, ದುರ್ಗಾಹೋಮ, ಹೂವಿನಪೂಜೆ ನಡೆಸುತ್ತಿದ್ದು, 3ನೇ ವರ್ಷದ ಉತ್ಸವದಿಂದ ನಿತ್ಯ ಮಧ್ಯಾಹ್ನ ಆಗಮಿಸುವ 2500-3000 ಭಕ್ತರಿಗೆ ಅನ್ನಸಂತರ್ಪಣೆ, ವಿಜಯದಶಮಿ ದಿನ 15000ಕ್ಕೂ ಅಧಿಕ ಭಕ್ತರಿಗೆ ಗ್ರಾಮೀಣ ಪ್ರದೇಶದಲ್ಲಿ ಅನ್ನ ಸಂತರ್ಪಣೆ ಮಾಡುತ್ತಿರುವುದು ಶ್ಲಾಘನೀಯ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆರ್ಕೆಸ್ಟ್ರಾ, ಅಬ್ಬರದ ಸಂಗೀತಕ್ಕೆ ಕಡಿವಾಣ ಹಾಕಿ ಭಾರತೀಯ ಪುರಾತನ ಕಲೆ, ಸಂಸ್ಕೃತಿ, ಸಾಹಿತ್ಯ, ಧರ್ಮ, ದೇಶಾಭಿಮಾನದ ಕಾರ್ಯಕ್ರಮನ್ನಷ್ಟೇ ಅಚ್ಚುಕಟ್ಟಾಗಿ ನಡೆಸುತ್ತಿದೆ.

ಆಯುಧ ಪೂಜೆಗೆ ನಾಡಿನ ವಿವಿಧ ಭಾಗಗಳ ಮಠಾಧೀಶರಿಂದ ಆಶೀರ್ವಚನದಲ್ಲಿ ಹಲವಾರು ಧರ್ಮಪೀಠಗಳ ಜಗದ್ಗುರು ಭಾಗವಹಿಸುವರು. ಉಪನ್ಯಾಸ. ಸಾಧಕರಿಗೆ ದುರ್ಗಾ ರಕ್ಷೆ, ಪ್ರತಿಭಾ ಪುರಸ್ಕಾರ, ಅಂತಿಮ ದಿನ ದುರ್ಗಾದೇವಿ ಜಲ ಸ್ತಂಭನಾ ಶೋಭಾಯಾತ್ರೆ. ಕಳೆದ 2 ವರ್ಷದಿಂದ ಸಮಿತಿ ಊರಿನ ಜೀವನದಿ ಭದ್ರೆಗೆ ಗಂಗಾರತಿ ಮಾದರಿಯಲ್ಲಿ ಭದ್ರಾ ಆರತಿ ವಿಶೇಷ ಕಾರ್ಯಕ್ರಮ ಆರಂಭಿಸಿ ದುರ್ಗಾ ವಿಗ್ರಹದ ಜಲ ಸ್ತಂಭನಕ್ಕೂ ಮುನ್ನ ಆರತಿ ನಡೆಯಲಿದೆ.

ಅ.11ರಂದು ಪಟ್ಟಣದಲ್ಲಿ ನವರಾತ್ರಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಇದಕ್ಕಾಗಿ ಬೃಹತ್ ದುರ್ಗಾಮಂಟಪ, ಪಟ್ಟಣದ ಮುಖ್ಯರಸ್ತೆ ಹಾಗೂ ಮಾರ್ಕಾಂಡೇಶ್ವರ ದೇಗುಲದ ಆವರಣವನ್ನು ವಿವಿಧ ವಿದ್ಯುತ್ ದೀಪಗಳಿಂದ ಅಲಂಕರಿಸ ಲಾಗಿದೆ.

ಸ್ಥಳ ವಿಶೇಷ: ಬಾಳೆಹೊನ್ನೂರಿನ ಮಾರ್ಕಾಂಡೇಶ್ವರ ದೇವಸ್ಥಾನದಲ್ಲಿ ಆವರಣದ ಮೃತ್ಯಂಬಿಕಾ ದೇವಿ ದೇಗುಲದಲ್ಲಿ ಪ್ರತೀ ಮಂಗಳವಾರ, ಶುಕ್ರವಾರ ವಿಶೇಷ ಪೂಜೆ ಯೊಂದಿಗೆ ದರ್ಶನ ಪಾತ್ರಿಯಿಂದ ಹೇಳಿಕೆ, ಕೇಳಿಕೆ ನಡೆಯಲಿದೆ. ಪ್ರತೀ ವಾರ ನೂರಾರು ಭಕ್ತರು ಪಾತ್ರಿಯಿಂದ ಹೇಳಿಕೆ ಪಡೆಯುವರು. ಪಕ್ಕದಲ್ಲೇ ಮಾರಿಯಮ್ಮನ ಗುಡಿ ಆರೋಗ್ಯ ಮತ್ತಿತರ ಸಮಸ್ಯೆಗೆ ಹರಕೆ ಸೇವೆ ನಡೆಯುತ್ತದೆ. ಮಾರ್ಕಾಂಡೇಶ್ವರ ದೇವಾಲಯದ ಸನಿಹದಲ್ಲಿ ನವಗ್ರಹ ಗುಡಿ, ನಾಗಬನಗಳಿದ್ದು ಪ್ರತೀ ಶನಿವಾರ ವಿಶೇಷ ಪೂಜೆ ನಡೆಯುತ್ತದೆ. ಒಟ್ಟಾರೆ ಪವಿತ್ರ ಧಾರ್ಮಿಕ ಸ್ಥಳ ಮಾರ್ಕಾಂಡೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಆಚರಣೆಗೆ ಇನ್ನಷ್ಟು ಕಳೆಗಟ್ಟಿದೆ.-- ಕೋಟ್ --

ಕಳೆದ 16 ವರ್ಷಗಳಿಗಿಂತ ಈ ವರ್ಷದ ಉತ್ಸವವನ್ನು ಯಶಸ್ವಿಯಾಗಿಸಬೇಕೆಂಬ ಉದ್ದೇಶದಿಂದ ಸಮಿತಿ ಹಲವು ವಿಶೇಷತೆ ಯೊಂದಿಗೆ ಕಾರ್ಯಕ್ರಮ ರೂಪುಗೊಳಿಸಿದೆ. ಕಾರ್ಯಕ್ರಮಕ್ಕೆ ಸರ್ವ ಸಿದ್ಧತೆಮಾಡಿ ಅ.11ರಂದು ಹೊರನಾಡು ದೇಗುಲ ದಿಂದ ಬಾಗಿನ ಸಮರ್ಪಿಸಿ ಪೂಜಿಸುವ ಮೂಲಕ ವಿದ್ಯುಕ್ತ ವಾಗಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಭಕ್ತರು ಪ್ರತಿದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಧರ್ಮ, ಪರಂಪರೆ, ಸಂಸ್ಕೃತಿ ಉಳಿವಿಗೆ ಕೈಜೋಡಿಸಬೇಕಿದೆ.

-- ಆರ್.ಡಿ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ, ನವರಾತ್ರಿ ಸಮಿತಿ.

--

ಬಾಳೆಹೊನ್ನೂರಿನ ದುರ್ಗಾ ಉತ್ಸವ ಈ ಭಾಗದಲ್ಲಿ "ಬಾಳೆಹೊನ್ನೂರು ದಸರಾ " ಎಂದೇ ಪ್ರಸಿದ್ಧ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಜನರ ಮನ ಗೆದ್ದು ಪ್ರತಿದಿನದ ಅನ್ನ ಸಂತರ್ಪಣೆಯೂ ವಿಶೇಷತೆ ಹೊಂದಿದೆ. ಇದಕ್ಕೆ ಭಕ್ತರ ಸಹಕಾರ ಅಗತ್ಯ. ಭಕ್ತರು ಅಕ್ಕಿ, ದವಸ, ಧಾನ್ಯಗಳ ಮೂಲಕ ಸೇವೆ ಸಲ್ಲಿಸಿ ಅನ್ನಪೂರ್ಣೆ ಕೃಪೆಗೆ ಪಾತ್ರರಾಗಬೇಕಿದೆ.

- ಬಿ. ಚನ್ನಕೇಶವಗೌಡ, ಕಾರ್ಯಾಧ್ಯಕ್ಷ, ನವರಾತ್ರಿ ಸಮಿತಿ

೦೯ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುವ ದುರ್ಗಾದೇವಿ ನವರಾತ್ರಿ ಮಹೋತ್ಸವಕ್ಕೆ ಸಿದ್ದಗೊಂಡಿರುವ ಬೃಹತ್ ದುರ್ಗಾಮಂಟಪ.೦೯ಬಿಹೆಚ್‌ಆರ್ ೨: ಬಾಳೆಹೊನ್ನೂರಿನ ಮೃತ್ಯಂಬಿಕಾ ಅಮ್ಮನವರು.೦೯ಬಿಹೆಚ್‌ಆರ್ ೩: ಬಾಳೆಹೊನ್ನೂರಿನ ಮಾರ್ಕಾಂಡೇಶ್ವರ ಸ್ವಾಮಿ. ೦೯ಬಿಹೆಚ್‌ಆರ್ ೪: ಆರ್.ಡಿ.ಮಹೇಂದ್ರ (ಪ್ರಧಾನ ಕಾರ್ಯದರ್ಶಿ)೦೯ಬಿಹೆಚ್‌ಆರ್ ೫: ಬಿ.ಚನ್ನಕೇಶವಗೌಡ (ಕಾರ್ಯಾಧ್ಯಕ್ಷ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಕ್ಕೆಜೋಳದ ಬೆಲೆ ಏರಿಕೆ; ರೈತರ ಕೈ ಖಾಲಿ
ದಕ್ಷಿಣ ಭಾರತದಲ್ಲಿ ಹಿಂದಿ ಭಾಷೆ ಪ್ರಚಾರಕ್ಕೆ ಗಾಂಧಿ ಕೊಡುಗೆ ಅಪಾರ