ಶರಣಬಸವೇಶ್ವರ ಕಾಲೇಜಿಗೆ ಶೇ. 99.13 ಫಲಿತಾಂಶ

KannadaprabhaNewsNetwork | Published : Apr 13, 2024 1:06 AM

ಸಾರಾಂಶ

ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿನ ಗೋರನಳ್ಳಿ ಸಮೀಪದ ಶರಣಬಸವೇಶ್ವರ ಪದವಿಪೂರ್ವ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಕಾಲೇಜಿಗೆ ಶೇ. 99.13ರಷ್ಟು ಫಲಿತಾಂಶ

ಕನ್ನಡಪ್ರಭ ವಾರ್ತೆ ಬೀದರ್‌

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿನ ಗೋರನಳ್ಳಿ ಸಮೀಪದ ಶರಣಬಸವೇಶ್ವರ ಪದವಿಪೂರ್ವ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಕಾಲೇಜಿಗೆ ಶೇ. 99.13ರಷ್ಟು ಫಲಿತಾಂಶ ಲಭಿಸಿದೆ.

ಪರೀಕ್ಷೆ ಬರೆದ ಒಟ್ಟು 115 ವಿದ್ಯಾರ್ಥಿಗಳಲ್ಲಿ 114 ಮಂದಿ ತೇರ್ಗಡೆಯಾಗಿದ್ದಾರೆ. 53 ಅಗ್ರಶ್ರೇಣಿ, 56 ಪ್ರಥಮ ದರ್ಜೆ ಹಾಗೂ 5 ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. PCMB ಯಲ್ಲಿ 53 ಅಗ್ರಶ್ರೇಣಿ, 56 ಪ್ರಥಮ ದರ್ಜೆ ಹಾಗೂ 5 ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸೃಷ್ಟಿ ನಾಗರಾಜ ಶೆಡೋಳೆ ಶೇ. 98.50, ಪಾಯಲ್‌ ಲಕ್ಷ್ಮಣ ಶೇ. 97.25, ವಗ್ದಾಳ್‌ ನಾಗಮ್ಮ ಶೇ. 97.25, ಹರ್ಷಿತ್‌ ತಿರಮುಲ ಶೇ. 97.25, ಕೃಷ್ಣ ರಾಜು ಶೇ. 96.75, ವಿರಾಜ್‌ ಶಿವಕುಮಾರ ಶೇ. 96.75, ನರೇಶ ಶಿವಪ್ಪ ಶೇ. 96.50, ಮಲ್ಲಿಕಾರ್ಜುನ ಗುರುನಾಥ ಶೇ. 96.25, ಗಾಯತ್ರಿ ರಮೇಶ ಶೇ. 96.25, ಪ್ರಶಾಂತ ಜಗನ್ನಾಥ ಶೇ. 95.50, ಪ್ರಜ್ವಲ್‌ ಸಲಗರ ಶೇ. 95, ದಯಾನಂದ ಶೇಖರ್‌ ಶೇ. 94.50, ಪಾರ್ವತಿ ರಾಜಕುಮಾರ ಶೇ. 94.50, ಸೋನಾಕ್ಷಿ ರವಿಕುಮಾರ ಶೇ. 94.25, ವಿನೀತ್‌ ರೆಡ್ಡಿ ಶೇ 93.50, ಶ್ರೀನಿವಾಸ್‌ ಬಸವರಾಜ ಶೇ. 93.25, ಕರಣ ವೆಂಕಟೇಶ್ ಶೇ. 93.25, ಕಾದಂಬರಿ ಸಿದ್ದಪ್ಪ ಶೇ. 92.50, ಮಹಮ್ಮದ್‌ ಕೈಫ್‌ ಶೇ. 92.25, ಸುದೀಪ ಶುಭಂ ಶೇ. 92, ಪ್ರಜ್ವಲ್‌ ಹಣಮಂತ ಶೇ. 91.75, ವಿಕೇಸ್‌ ಧರೆಪ್ಪ ಶೇ. 91.50, ನಿಖಿಲ್‌ ಪ್ರಭು ಶೇ. 91.25, ಮಲ್ಲಿಕಾರ್ಜುನ ರಾಜಕುಮಾರ ಶೇ. 91.25, ಬಲವಂತ ಪಂಡಿತ ಶೇ. 91.25, ಕೃಷ್ಣ ನಾಗುರಾವ್‌ ಶೇ. 91, ಪ್ರಣವ್‌ ವಿನೋದಕುಮಾರ ಶೇ. 90.50, ಯಶಸ್ವಿನಿ ಲಕ್ಷ್ಮಿಕಾಂತ ಶೇ. 90.50, ರೋಹಿತ್‌ ಹವಳಪ್ಪ ಶೇ. 90.50, ಸ್ವಾತಿ ಶರಣಪ್ಪ 90.25, ಮಲ್ಲಿಕಾರ್ಜುನ ವಿಜಯಕುಮಾರ ಶೇ. 90.25, ವಿಕೇಶ್‌ ಮಾಣಿಕ್‌ ಶೇ. 90, ಆಕಾಶ ಶ್ರೀನಿವಾಸ್‌ ಶೇ. 90, ಅನೂಷಾ ಪ್ರತಾಪಕುಮಾರ ಶೇ. 90, ವೈಭವಿ ರಾಜಕುಮಾರ ಶೇ. 90 ಅಂಕ ಪಡೆದಿದ್ದಾರೆ.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶರಣಬಸವಪ್ಪ ಅಪ್ಪ, ಮಾತೆ ಡಾ. ದಾಕ್ಷಾಯಿಣಿ, ಚಿ. ದೊಡ್ಡಪ್ಪ ಅಪ್ಪ ಹಾಗೂ ಕಾರ್ಯದರ್ಶಿ ಬಸವರಾಜ ದೇಶಮುಖ ಅವರ ಮಾರ್ಗದರ್ಶನದಲ್ಲಿ ನೀಡಿದ ಗುಣಮಟ್ಟದ ಶಿಕ್ಷಣದಿಂದಾಗಿ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ದೊರೆತಿದೆ ಎಂದು ಕಾಲೇಜು ಪ್ರಾಚಾರ್ಯ ಡಾ. ಸತೀಶ ಪ್ರತಾಪುರ ತಿಳಿಸಿದ್ದಾರೆ.ಕೋಟ್‌....ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರ ಮಾರ್ಗದರ್ಶನ, ಪಾಲಕರ ಸಹಕಾರ ಹಾಗೂ ವಿದ್ಯಾರ್ಥಿಗಳ ಶ್ರಮದಿಂದಾಗಿ ಶರಣಬಸವೇಶ್ವರ ಪದವಿಪೂರ್ವ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಕಾಲೇಜಿಗೆ ಈ ವರ್ಷ ಅತ್ಯುತ್ತಮ ಫಲಿತಾಂಶ ದೊರೆತಿದೆ. ಕಾಲೇಜು ಬಡ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದು, ಅತ್ಯುತ್ತಮ ಫಲಿತಾಂಶ ಬರುತ್ತಿದೆ. ಕೆಸಿಇಟಿ ಹಾಗೂ ನೀಟ್‌ನಲ್ಲೂ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆಗೈಯ್ಯುವ ವಿಶ್ವಾಸ ಇದೆ.

ಡಾ. ಶರಣಬಸವಪ್ಪ ಅಪ್ಪ, ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲಬುರಗಿ

ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಅಕ್ಷರ ದಾಸೋಹದಲ್ಲಿ ನಿರತವಾಗಿದೆ. ಗುಣಮಟ್ಟದ ಶಿಕ್ಷಣವೇ ಸಂಘದ ಧ್ಯೇಯವಾಗಿದೆ. ಈ ಬಾರಿಯ ಕಾಲೇಜು ವಿದ್ಯಾರ್ಥಿಗಳ ಸಾಧನೆ ಸಂಘದ ಗುಣಮಟ್ಟದ ಶಿಕ್ಷಣಕ್ಕೆ ನಿದರ್ಶನವಾಗಿದೆ.

ಮಾತೆ ಡಾ. ದಾಕ್ಷಾಯಿಣಿ ಎಸ್‌. ಅಪ್ಪ, ಚೇರ್‌ಪರ್ಸನ್‌, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲಬುರಗಿ

Share this article