ಕನ್ನಡಪ್ರಭ ವಾರ್ತೆ ನಾಗಮಂಗಲ
ಅ.2ರಂದು ಅಮಾವಾಸ್ಯೆ ಪೂಜೆಯೊಡನೆ ಪ್ರಾರಂಭವಾಗುವ ಶರನ್ನವರಾತ್ರಿ ಉತ್ಸವಗಳು ಅ.12ರ ಶನಿವಾರದವರೆಗೆ ಜರಗಲಿವೆ. ಉತ್ಸವದ ಅಂಗವಾಗಿ ಶ್ರೀಮಠದಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ಸೇರಿದಂತೆ ಹಲವು ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ.
ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯುವ ಶರನ್ನವರಾತ್ರಿ ಉತ್ಸವಗಳು ಪ್ರಾರಂಭಕ್ಕೂ ಮೊದಲು ಪ್ರತಿದಿನ ಸಂಜೆ 5.30ಕ್ಕೆ ಶ್ರೀಗಳು ಸರ್ವಾಲಂಕಾರ ಭೂಷಿತರಾಗಿ, ಚಿನ್ನದ ಕಿರೀಟ, ಚಿನ್ನಲೇಪಿತ ವಸ್ತ್ರಾಭರಣಗಳನ್ನು ಧರಿಸಿ ಶ್ರೀಮಠದ ವಟುಗಳ ವೇದಘೋಷಗಳೊಂದಿಗೆ, ಭಕ್ತರ ನಡುವೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಆಗಮಿಸಿ ಶ್ರೀತ್ರದ ಅಧಿದೇವತೆಗಳಿಗೆ ಪೂಜೆ ಸಲ್ಲಿಸುವರು.ನಂತರ ಶ್ರೀಗಳು ಶ್ರೀಮಠದ ಸಂಪ್ರದಾಯದಂತೆ ಸಿದ್ಧಸಿಂಹಾಸನರೂಢರಾಗಿ ಭಕ್ತರಿಗೆ ದರ್ಶನ ನೀಡುವರು. ಸಿಂಹಾಸನ ಪೂಜೆ, ಶ್ರೀಗಳಿಗೆ ಷೋಡೋಶೋಪಾಚಾರ ಪೂಜೆ ಸಲ್ಲಿಸಲಾಗುವುದು. ನಂತರ ಭಕ್ತರಿಗೆ ವಿಭೂತಿ ತಿಲಕವನ್ನಿಡುವ ಮೂಲಕ ಆಶೀರ್ವದಿಸುವರು.
ಪ್ರತಿ ದಿನ ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮಗಳು:
ಅ.4ರಂದು ಮೈಸೂರು ಶಾಖಾ ಮಠದ ವತಿಯಿಂದ ಕಾರ್ಯಕ್ರಮ ಪ್ರಾರಂಭವಾಗಲಿವೆ. ಚನ್ನಯ್ಯನಕೊಪ್ಪಲು, ಲಕ್ಷ್ಮೀಪುರ, ವಡ್ಡರಹಳ್ಳಿ, ತಾವರೆಕೆರೆ, ಕೋಟೆರಾಮನಕೊಪ್ಪಲು, ಕರಿಜೀರಹಳ್ಳಿ,ನೆಲ್ಲಿಗೆರೆ, ತೊರೆಮಾವಿನಕೆ, ಸೀಗೇಹಳ್ಳಿ ಹೊಸಮನೆ ಗ್ರಾಮಗಳ ಗ್ರಾಮಸ್ಥರು ಉತ್ಸವ ನೆರವೇರಿಸಿಕೊಡುವರು.
ಅ.6 ರಂದು ಹಾಸನ ಶಾಖಾಮಠದ ವತಿಯಿಂದ ಪೂಜಾ ಕೈಂಕರ್ಯಗಳು ನೆರವೇರಲಿವೆ. ಆರಣಿ, ಚಂದನಹಳ್ಳಿ, ಬಣ್ಣದಹಳ್ಳಿ, ಚಬ್ಬನಹಳ್ಳಿ, ಮಂಜೇನಹಳ್ಳಿ, ಎಂ.ಕೋಡಿಹಳ್ಳಿ, ಹೊನ್ನೇನಹಳ್ಳಿ, ಗುರುವಿನಮಠ,ಮಲ್ಲೇನಹಳ್ಳಿ, ಕೆ.ಹೊಸಹಳ್ಳಿ ಗ್ರಾಮಸ್ಥರು ಭಾಗವಹಿಸಲಿದ್ದಾರೆ.
ಅ.8 ರಂದು ಹೇಮಗಿರಿ ಶಾಖಾಮಠದ ವತಿಯಿಂದ ಉತ್ಸವದಲ್ಲಿ ಕಾರಬೈಲು, ಕಂಚಿನಕೋಟೆ, ಹಾಲಾಳು, ತಿರುಮಲಾಪುರ, ಬೀಚನಹಳ್ಳಿ, ಟ್ನ, ವಡೇರಹಳ್ಳಿ, ಗೊಂದಿಹಳ್ಳಿ, ಅಜ್ಜನಪಾಳ್ಯ ಮತ್ತು ಗರುಡನಹಳ್ಳಿ ಗ್ರಾಮಸ್ಥರು ಭಾಗಹಿಸಲಿದ್ದಾರೆ.
ಅ.9 ರಂದು ಬೆಳಗ್ಗೆ 9.30 ಗಂಟೆಗೆ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ನೆರವೇರಲಿದೆ. ಶ್ರೀಗಳ ಸಾನಿಧ್ಯದಲ್ಲಿ ಸರಸ್ವತಿ ಪೂಜೆ ಮತ್ತು ಅಕ್ಷರಭ್ಯಾಸದಲ್ಲಿ ನಾಡಿನಾದ್ಯಂತ ನೂರಾರು ಮಕ್ಕಳು ಭಾಗವಹಿಸುವರು. ಸಂಜೆ ಶಿವಮೊಗ್ಗ ಶಾಖಾಮಠದ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಅಂಚೇಚಿಟ್ಟನಹಳ್ಳಿ, ಭೈರನಹಳ್ಳಿ, ಬೇಗಮಂಗಲ, ಅಂಚೆಭೂವನಹಳ್ಳಿ, ವಡೇರಹಳ್ಳಿ, ಕಬ್ಬಿನಕೆರೆ, ಯಲಾದಹಳ್ಳಿ, ಚಿಕ್ಕಜಟಕ, ವಳಗೆರೆಪುರ, ಚೋಳಸಂದ್ರ ಗ್ರಾಮಸ್ಥರು ಭಾಗವಹಿಸುವರು.
ಜ್ವಾಲಾಪೀಠಾರೋಹಣ, ದುರ್ಗಾಷ್ಟಮಿ ಪೂಜೆ ಮತ್ತು ಮಹಾನವಮಿ:
ಅ.11ರಂದು ಬೆಳಗ್ಗೆ ದುರ್ಗಾಷ್ಟಮಿ ಪೂಜೆ, ಮಹಾನವಮಿ ನೆರವೇರಲಿದೆ. ಬೆಳಗ್ಗೆ 8.30ಕ್ಕೆ ಆಯುಧಪೂಜೆ, ಸಂಜೆ 6.30ಕ್ಕೆ ಶ್ರೀಗಳಿಂದ ಜ್ವಾಲಾಪೀಠಾರೋಹಣ, ಚಿಕ್ಕಬಳ್ಳಾಪುರ ಶಾಖಾಮಠದ ವತಿಯಿಂದ ಕಾರ್ಯಕ್ರಗಳು ನಡೆಯಲಿವೆ. ಚುಂಚನಹಳ್ಳಿ, ಚುಂಚನಹಳ್ಳಿ ಪಾಳ್ಯ, ಗಂಗಾಧರನಗರ, ಅಂಬಲಜೀರಹಳ್ಳಿ, ಭಕ್ತನಾಥಪುರ, ಇಂದಿರಾನಗರ, ಯಲಚಿಕೆರೆ, ಮುದಿಗೆರೆ ಗ್ರಾಮಸ್ಥರು ಭಾಗವಹಿಸಲಿದ್ದಾರೆ.ಅ.12ರಂದು ವಿಜಯದಶಮಿ ಮತ್ತು ಶಮಿ ಪೂಜೆ ನೆರವೇರಲಿದೆ. ಚಿಕ್ಕಮಗಳೂರು ಶಾಖಾಮಠದ ವತಿಯಿಂದ ಜರುಗಲಿರುವ ಕಾರ್ಯಕ್ರಮದಲ್ಲಿ ಜವರನಹಳ್ಳಿ, ಅಗಚಹಳ್ಳಿ, ಕನ್ನಾಘಟ್ಟ, ಮಾರುತಿಪುರ, ಕಂಚನಹಳ್ಳಿ, ಎಲೆಕೊಪ್ಪ, ಬಾಡನಹಳ್ಳಿ, ಗಾಣಸಂದ್ರ ಜಿ.ನಾಗತೀಹಳ್ಳಿ, ಬ್ಯಾಲದಕೆರೆ, ಕುಂಬಾರಪಾಳ್ಯ, ರಮಾನಂದನಗರ ಗ್ರಾಮಸ್ಥರು ಭಾಗವಹಿಸುವರು.