ಕನ್ನಡಪ್ರಭ ವಾರ್ತೆ ಮಂಗಳೂರು
ಮಾ.30ರಂದು ಜಾತ್ರೋತ್ಸವ ಆರಂಭಗೊಂಡಿದ್ದು, ಪ್ರತಿನಿತ್ಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಭಾನುವಾರ ಬೆಳಗ್ಗೆ 10ಕ್ಕೆ ರಥ ಕಲಶ ನಡೆದ ಬಳಿಕ ಮಧ್ಯಾಹ್ನ 12.15ಕ್ಕೆ ದೇವರ ರಥಾರೋಹಣದ ಬಲಿ ನೆರವೇರಿತು. 12.30ರ ಸುಮಾರಿಗೆ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ನಡೆಯಿತು. ಬಳಿಕ ಮಹಾ ಅನ್ನಂಸತರ್ಪಣೆ ನೆರವೇರಿತು.
ರಾತ್ರಿ 9ಕ್ಕೆ ದೊಡ್ಡ ರಥೋತ್ಸವ, 10.00ಕ್ಕೆ ಮಹಾಪೂಜೆ, ಭೂತಬಲಿ, ಕವಾಟ ಬಂಧನ ನೆರವೇರಿತು. ಈ ಸಂದರ್ಭ ಶರವು ದೇವಸ್ಥಾನದ ಶಿಲೆಶಿಲೆ ಆಡಳಿತ ಮೊಕ್ತೇಸರರಾದ ಶರವು ಶ್ರೀ ರಾಘವೇಂದ್ರ ಶಾಸ್ತ್ರಿ, ಸುದೇಶ್ ಶಾಸ್ತ್ರಿ, ರಾಹುಲ್ ಶಾಸ್ತ್ರಿ ಮತ್ತಿತರರು ಇದ್ದರು.ಸಂಜೆ 5.30ರಿಂದ ಶರವು ದೇವಸ್ಥಾನದ ಕೆ. ರಾಜನ್ ಮತ್ತು ಬಳಗದವರಿಂದ ನಾಗಸ್ವರ ಮತ್ತು ಸ್ಯಾಕ್ಸೋಫೋನ್ ಕಛೇರಿ, 7ರಿಂದ ಶರಭೇಶ್ವರ ಕೃಪಾಪೋಷಿತ ಯಕ್ಷಗಾನ ಸಂಘದಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು.
ಇಂದು ಸಂಸ್ಮರಣಾ ಪ್ರಶಸ್ತಿ: ಏ.7ರಂದು ಸಂಜೆ 6ಕ್ಕೆ ಸಾಂಸ್ಕೃತಿಕೋತ್ಸವ ಸಭಾ ಕಾರ್ಯಕ್ರಮ ಸಮಾರೋಪ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಡೊಂಗರಕೇರಿ ಶ್ರೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರವೀಣ್ ಶೇಟ್ ನಾಗ್ವೇಕರ್ಭಾಗವಹಿಸಲಿದ್ದಾರೆ. ಶರವು ಶ್ರೀ ರಾಘವೇಂದ್ರ ಶಾಸ್ತ್ರಿ ಅಧ್ಯಕ್ಷತೆ ವಹಿಸಲಿದ್ದಾರೆ. ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಯವರಿಗೆ ದಿ. ಶರವು ರಾಮಕೃಷ್ಣ ಶಾಸ್ತ್ರಿ ಸಂಸ್ಮರಣಾ ಪ್ರಶಸ್ತಿ ಪ್ರದಾನ ನಡೆಯಲಿದೆ.