ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ಐಎಂಎ ಹಾಲ್‌ನಲ್ಲಿ ಮೊಬಿಲಿಟಿ ವತಿಯಿಂದ ಆಯೋಜಿಸಿದ್ದ ವಿಶ್ವ ಸೆರೆಬ್ರಲ್ ಪಾಲ್ಸಿ ದಿನ-2026 ವೈವಿಧ್ಯದಲ್ಲಿ ಅನನ್ಯರು, ಒಗ್ಗಟ್ಟಿನಲ್ಲಿ ಒಂದಾಗಿರುವ ಎಂಬ ಧ್ಯೇಯ ವಾಕ್ಯದೊಂದಿಗೆ, ಸಮನ್ವಯ, ಸ್ವಾವಲಂಬನೆ, ಸಮಾನ ಅವಕಾಶಗಳು ಎಂಬ ಆಶಯದೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೊಂದವರ ಜೊತೆ ಕೆಲಸ ಮಾಡುವ ಮೊಬಿಲಿಟಿ ಇಂಡಿಯಾದ ದಿಕ್ಸೂಚಿ ಒಳ್ಳೆಯದು. ಮನುಷತ್ವ, ಮಾನವೀಯತೆ ಕೇವಲ ಮಾತಿನಲ್ಲಿ ಇರದೆ ಕಾರ್ಯದಲ್ಲಿದೆ ಎಂದು ಹೇಳಿದರು.
ನಾನು ಕೂಡ ಸ್ನಾತಕೋತ್ತರ ವೈದ್ಯಕೀಯ ಪದವಿ ಓದುವಾಗ ಕ್ರೋಮೋಸೋಮ್ ಗಳ ಅಸ್ವಾಭಾವಿಕ ನಡೆಗಳು ಕುರಿತು ಸಂಶೋಧನೆ ನಡೆಸಿದ್ದೆ. ಆ ಸಂದರ್ಭದಲ್ಲಿ ಮಕ್ಕಳ ಮೆದುಳಿನ ಪಾರ್ಶ್ವವಾಯುವಿಗೆ ಕ್ರೋಮೋಸೋಮ್‌ಗಳ ಅಸ್ವಾಭಾವಿಕ ನಡೆ ಕಾರಣ ಇರಬಹುದೆ ಎಂಬುದರ ಬಗ್ಗೆ ವಿಶ್ಲೇಷಣೆ ನಡೆಸಿದ್ದಾಗಿ ತಿಳಿಸಿದರುಸೆರೆಬ್ರೆಲ್ ಪಾಲ್ಸಿ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಮಕ್ಕಳ ನರರೋಗತಜ್ಞ ಡಾ. ನಿತಿನ್ .ಆರ್. ಮಕ್ಕಳಲ್ಲಿ ಮೆದುಳಿನ ಪಾರ್ಶ್ವವಾಯು ಕಾಯಿಲೆ ಕಾಣಿಸಿಕೊಳ್ಳಲು ನವಜಾತ ಶಿಶುವಿಗೆ ಅಕ್ಸಿಜ್ಹನ್ ಮತ್ತು ಗುಲ್ಕೋಸ್ ಕೊರತೆಯೇ ಕಾರಣ. ಮಗು ಹುಟ್ಟಿದಾಕ್ಷಣ ಅತ್ತರೆ, ಮೆದುಳಿಗೆ ಅಕ್ಸಿಜ್ಹನ್ ಸಿಗುತ್ತದೆ. ಹುಟ್ಟಿದ ಅರ್ಧ ಗಂಟೆಯ ಒಳಗೆ ಎದೆಹಾಲು ಕುಡಿಸುವುದರಿಂದ ಮಗುವಿಗೆ ಗುಲ್ಕೋಸ್ ದೊರೆಯುತ್ತದೆ. ಹಾಗಾಗಿ ಈ ಎರಡರ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಮೊಬಿಲಿಟಿ ಇಂಡಿಯಾ ಎಜಿಎಂ ಸಂಜಯ್ ಸಿಂಗ್, ಸಂಪನ್ಮೂಲಗಳ ವ್ಯಕ್ತಿಗಳಾದ ಜೈ ಸುಧಾ, ಪ್ರೀತಿ, ಕಿರ್, ರುಮಾನ, ಸುಧಾಮಣಿ, ರೇಷ್ಮ ಉಪಸ್ಥಿತರಿದ್ದರು. ಸೆರಬ್ರಲ್ ಪಾಲ್ಸಿ ರೋಗಿಗಳ ಆರೈಕೆದಾರರು ಮತ್ತು ಮಕ್ಕಳ ಪೋಷಕರು ಪಾಲ್ಗೊಂಡಿದ್ದರು.