ಮಂಗಳೂರು ; ಕರಾವಳಿಯಲ್ಲಿ ಎಷ್ಟೇ ಅಭಿವೃದ್ಧಿ ಯೋಜನೆ, ಹೊಸ ಐಡಿಯಾಗಳನ್ನು ಘೋಷಿಸಿದರೂ ಇಲ್ಲಿನ ಜನರು ರಾಷ್ಟ್ರೀಯತೆಯ ಚಿಂತನೆಗೆ ಮತ ನೀಡುತ್ತಾರೆ. ಕರಾವಳಿಯಲ್ಲಿ ಬಿಜೆಪಿ ಭದ್ರಕೋಟೆಯನ್ನು ಒಡೆಯುವುದು ಯಾರಿಗಾದರೂ ಕನಸಾಗಿಯೇ ಉಳಿಯಲಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಂಗಳೂರಿಗೆ ತನ್ನದೇ ಆದ ಗೌರವವಿದೆ. ಇಲ್ಲಿ ದೇವಸ್ಥಾನ ಪ್ರವಾಸೋದ್ಯಮ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಡ್ರಗ್ಸ್, ಜೂಜು ಸೇರಿದಂತೆ ಸ್ಥಳೀಯರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆ ಉಂಟುಮಾಡುವ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದರು.
ಕ್ಯಾಸಿನೋ ಬಂದರೆ ಡ್ರಗ್ಸ್‌ಗೂ ಅವಕಾಶ ಸಿಗುವ ಸಾಧ್ಯತೆ ಇದ್ದು, ಸ್ಥಳೀಯರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು ಅವರು ಹೇಳಿದರು.ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯನ್ನು ಸ್ವಾಗತಿಸುತ್ತೇವೆ. ಕರಾವಳಿಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಘೋಷಣೆಗಳು ಹೊರಬರಬೇಕು. ಆದರೆ ಅವು ಕೇವಲ ಘೋಷಣೆಯಾಗಿ ಉಳಿಯದೆ, ಅನುಷ್ಠಾನಕ್ಕೆ ಬರಬೇಕು ಎಂದು ಡಾ. ಭರತ್ ಶೆಟ್ಟಿ ಹೇಳಿದರು.