ವಿಶೇಷ ಕರ್ತವ್ಯಕ್ಕೆ ನೇಮಕವಾದ ಶಿಗ್ಗಾಂವಿ ಪವರ್ ಮೆನ್‌ಗಳು

KannadaprabhaNewsNetwork |  
Published : Nov 12, 2026, 02:15 AM IST
ಶಿಗ್ಗಾವಿ ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ವಿಶೇಷ ಕರ್ತವ್ಯಕ್ಕೆ ನೇಮಕವಾದ ಪವರ್ ಮೆನ್‌ಗಳನ್ನ ಸಿಹಿ ತಿನ್ನಿಸುವ ಮೂಲಕ ಸನ್ಮಾನಿಸಿ ಬೀಳ್ಕೊಡಲಾಯಿತು. | Kannada Prabha

ಸಾರಾಂಶ

ವಿಶೇಷ ಕರ್ತವ್ಯಕ್ಕೆ ನೇಮಕವಾದ ಪವರ್ ಮೆನ್‌ಗಳಾದ ಕೃಷ್ಣ ಬಾರಕೇರ, ಸಚಿನ್ ಇನಾಮತಿ, ಹೈದರಾಲಿ ಬಲವಿಂದರ್, ಅಲ್ತಾಫ್ ಸವಣೂರು ಹಾಗೂ ಮಂಜುನಾಥ್ ಅವರನ್ನು ಬೀಳ್ಕೋಡಲಾಯಿತು.

ಶಿಗ್ಗಾಂವಿ: ನೆರೆಯ ಆಂಧ್ರಪ್ರದೇಶದಲ್ಲಿ ಪ್ರಕೃತಿ ವಿಕೋಪಕ್ಕೆ ಬಹಳ ಹಾನಿ ಸಂಭವಿಸಿದ್ದು ವಿದ್ಯುತ್ ಸಂಪರ್ಕ ವ್ಯವಸ್ಥೆ ಬಹಳ ಹಾನಿಯಾಗಿದ್ದು ಆದಷ್ಟು ಬೇಗನೆ ವಿದ್ಯುತ್ ಒದಗಿಸುವ ಕಾರ್ಯಕ್ಕೆ ಸರ್ಕಾರದ ಆದೇಶ ಹಾಗೂ ಹೆಸ್ಕಾಂ ಕಂಪನಿಯ ನಿರ್ದೇಶನದ ಮೇರೆಗೆ ಹಾವೇರಿ ವಿಭಾಗೀಯ ಕಚೇರಿಯಿಂದ 6 ಜನ ಪರಿಣಿತ ಪವರ್ ಮೆನಗಳನ್ನು ಹುಬ್ಬಳ್ಳಿ ಕೇಂದ್ರ ಕಚೇರಿಯಿಂದ ಕರ್ತವ್ಯಕ್ಕೆ ತೆರಳುವ ಮುನ್ನ ಶಿಗ್ಗಾವಿ ಉಪ ವಿಭಾಗದಿಂದ ಇಲಾಖೆ ನೌಕರರು ಹಾಗೂ ಗುತ್ತಿಗೆದಾರರು ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಸಿಹಿ ತಿನ್ನಿಸುವ ಮೂಲಕ ಸನ್ಮಾನಿಸಿ ಬೀಳ್ಕೊಟ್ಟರು.

ವಿಶೇಷ ಕರ್ತವ್ಯಕ್ಕೆ ನೇಮಕವಾದ ಪವರ್ ಮೆನ್‌ಗಳಾದ ಕೃಷ್ಣ ಬಾರಕೇರ, ಸಚಿನ್ ಇನಾಮತಿ, ಹೈದರಾಲಿ ಬಲವಿಂದರ್, ಅಲ್ತಾಫ್ ಸವಣೂರು ಹಾಗೂ ಮಂಜುನಾಥ್ ಅವರನ್ನು ಬೀಳ್ಕೋಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಪೂರ್ವ ನಿಯೋಜಿತ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಮಂಜಣ್ಣ ಮಣ್ಣನ್ನವರ್ ಮಾತನಾಡಿ, ವಿದ್ಯುತ್ ಕೆಲಸ ಅತ್ಯಂತ ಸೂಕ್ಷ್ಮ ಕೆಲಸವಾಗಿದ್ದು, ಅಷ್ಟೇ ಜವಾಬ್ದಾರಿಯುತವಾದ ಕಾರ್ಯವಾಗಿದೆ, ಇತಿಹಾಸ ನೋಡಿದಾಗಲೆಲ್ಲ ಕನ್ನಡಿಗರೆಂದರೆ ಕೆಚ್ಚೆದೆ ಹಾಗೂ ಸಹಾಯ ಸಹಕಾರ ಪ್ರತಿತಿ ಇದೆ, ವಿದ್ಯುತ್ ಕೆಲಸ ಎಚ್ಚರಿಕೆಯಿಂದ ರಕ್ಷಾ ಕವಚಗಳನ್ನು ಬಳಸಿ ಕೆಲಸ ನಿರ್ವಹಿಸಿ ಸುರಕ್ಷತೆಯಿಂದ ನಾಡಿಗೆ ಬನ್ನಿ ಎಂದು ಹಾರೈಸಿದರು.

ಹೆಸ್ಕಾಂ ಎಇಇ ವಿ ಎಸ್ ಮರಿಗೌಡ್ರ, ಇಲಾಖೆಯ ಅಧಿಕಾರಿಗಳಾದ ಸಿ ಎಸ್ ಅಜ್ಜಣ್ಣವರ, ಡಿ ಎಚ ಮಾಲತೇಶ್, ರಮೇಶ್ ಲಮಾಣಿ, ಶಂಕ್ರಯ್ಯ ಹಿರೇಮಠ, ಸರೋಜಾ ಶಿಗ್ಲಿ, ನಕುಲ ಬಾರ್ಕೆರ್, ಸಂಘದ ಪದಾಧಿಕಾರಿಗಳು ನೌಕರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌