ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ, ಗ್ರಾಮೀಣ ಭಾಗದ ಸಣ್ಣ ಮತ್ತು ಅತಿ ಸಣ್ಣ ರೈತರ ಆರ್ಥಿಕ ಸಬಲೀಕರಣಕ್ಕಾಗಿ ಹೈನುಗಾರಿಕೆ ಕ್ಷೇತ್ರಕ್ಕೆ ಅಭೂತಪೂರ್ವ ಬೆಂಬಲ ನೀಡುತ್ತಿದೆ. ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಯೋಜನೆ’ (National Programme for Dairy Development - NPDD) ಅಡಿಯಲ್ಲಿ, ರಾಜ್ಯದ ಹೈನುಗಾರರ ಅನುಕೂಲಕ್ಕಾಗಿ, ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್) ಸೇರಿದಂತೆ ರಾಜ್ಯದಾದ್ಯಂತ ಶೀತಲೀಕರಣ ಘಟಕ ಹಾಗೂ ಗುಣಮಟ್ಟ ಪರಿಶೀಲನಾ ವ್ಯವಸ್ಥೆಯನ್ನು ಭಾರಿ ಪ್ರಮಾಣದಲ್ಲಿ ಮೇಲ್ದರ್ಜೆಗೇರಿಸಲಾಗಿದೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಈ ಕುರಿತು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಕ್ಷೀರಪಾಲನಾ ಸಚಿವ ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್) ಅವರು ವಿವರವಾದ ಉತ್ತರ ನೀಡಿದ್ದಾರೆ.
ಶಿಮುಲ್‌ಗೆ ಸಿಕ್ಕ ಬೃಹತ್ ಕೊಡುಗೆ:
ವಿಶೇಷವಾಗಿ ರಾಜ್ಯದ ಹೈನುಗಾರರ ಹಿತಾಸಕ್ತಿಗಳ ಬಲವರ್ಧನೆ ನಿಟ್ಟಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ನಿರಂತರವಾಗಿ ಸಂಸತ್ತಿನಲ್ಲಿ ಧ್ವನಿಯೆತ್ತುತ್ತಿದ್ದು, ಶಿವಮೊಗ್ಗ ಹಾಲು ಒಕ್ಕೂಟದ (ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ) ಹೈನುಗಾರಿಕಾ ಜಾಲಕ್ಕೆ ಕೇಂದ್ರದಿಂದ ಭಾರಿ ಆರ್ಥಿಕ ನೆರವು ದೊರಕಿದೆ.
ಶಿಮುಲ್ ನ 37,750 ರೈತರಿಗೆ ಲಾಭ: ಶಿಮುಲ್ ಒಕ್ಕೂಟದ ವ್ಯಾಪ್ತಿಯಲ್ಲಿ, ಶಿವಮೊಗ್ಗ ಜಿಲ್ಲೆಯ 11,760 ರೈತ ಕುಟುಂಬಗಳು ಸೇರಿದಂತೆ, ಒಟ್ಟು 37,750 ರೈತರು ಈ ಯೋಜನೆಯಿಂದ ನೇರ ಪ್ರಯೋಜನ ಪಡೆದಿದ್ದಾರೆ.
ಸಂಘಗಳ ಸಬಲೀಕರಣ: ಶಿವಮೊಗ್ಗದ 174 ಸಂಘಗಳು ಸೇರಿ, ಶಿಮುಲ್ ಒಕ್ಕೂಟದ 479 ಡೈರಿ ಸಹಕಾರ ಸಂಘಗಳನ್ನು ಆಧುನಿಕ ಹಾಲು ಪರೀಕ್ಷಾ ಸಾಧನಗಳು (Automatic Milk Collection Unit-AMCU/Electronic Milk Adulteration Testing Machine-EMAT) ಹಾಗೂ ಸೌಲಭ್ಯಗಳೊಂದಿಗೆ ಬಲಪಡಿಸಲಾಗಿದೆ.
ಬಾಕ್ಸ್...
ಹಾಲು ಸಂಗ್ರಹಣೆ ಹೆಚ್ಚಳ
ಶಿಮುಲ್ ವ್ಯಾಪ್ತಿಯಲ್ಲಿ ಪ್ರತಿ ದಿನ 5.27 ಲಕ್ಷ ಲೀಟರ್ ಹೆಚ್ಚುವರಿ ಹಾಲು ಸಂಗ್ರಹಣೆ ಸಾಧಿಸಲಾಗಿದ್ದು, 177 ಬಲ್ಕ್ ಮಿಲ್ಕ್ ಕೂಲರ್‌ಗಳನ್ನು (BMC) ಅಳವಡಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ NPDD ಯೋಜನೆಯ ಘಟಕ-A ಅಡಿಯಲ್ಲಿ ಒಟ್ಟು 455.21 ಕೋಟಿ ರು. ವೆಚ್ಚದ 22 ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇದರಲ್ಲಿ 307.83 ಕೋಟಿ ರೂ. ಗಳನ್ನು ಕೇಂದ್ರ ನೀಡಲಿದೆ. ಇದರಲ್ಲಿ ಈಗಾಗಲೇ 255.80 ಕೋಟಿ ರು. ಅನುದಾನ ಕೇಂದ್ರದಿಂದ ಬಿಡುಗಡೆಯಾಗಿದ್ದು, ರಾಜ್ಯದಾದ್ಯಂತ 5.64 ಲಕ್ಷಕ್ಕೂ ಹೆಚ್ಚು ರೈತರು ಸಹಕಾರಿ ಜಾಲಕ್ಕೆ ಸೇರ್ಪಡೆಯಾಗಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳಾ ಹೈನುಗಾರರ ಹಿತ ಕಾಯುವ ಮತ್ತು ಹಾಲಿನ ಸುಧಾರಿತ ಗುಣಮಟ್ಟ ಖಾತರಿಪಡಿಸುವ ಪ್ರಧಾನಿ ಮೋದಿ ಸರ್ಕಾರದ ನಿರಂತರ ಬದ್ಧತೆ ತೋರಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.