ಶಿರ್ವ ಪತಂಜಲಿ ಕೇಂದ್ರ: 5200ಕ್ಕೂ ಅಧಿಕ ಮಂದಿಗೆ ಆಟಿ ಮದ್ದು ವಿತರಣೆ

KannadaprabhaNewsNetwork |  
Published : Jul 26, 2025, 02:00 AM IST
24ಮದ್ದು | Kannada Prabha

ಸಾರಾಂಶ

ಶಿರ್ವದ ಸಮಾಜ ಸೇವಕ ಅನಂತ್ರಾಯ ಶೆಣೈ ನೇತೃತ್ವದ ಶಿರ್ವ ಪತಂಜಲಿ ಸ್ವದೇಶಿ ಕೇಂದ್ರದಲ್ಲಿ ಗುರುವಾರ ಆಟಿ ಅಮವಾಸ್ಯೆಯ ಪ್ರಯುಕ್ತ ಬೆಳಗ್ಗೆ ೫ ಗಂಟೆಯಿಂದ ಮಧ್ಯಾಹ್ನದವರೆಗೂ ಸಾವಿರಾರು ಸಾರ್ವಜನಿಕರಿಗೆ ಉಚಿತವಾಗಿ ‘ಆಟಿ ಮದ್ದು (ಪಾಲೆ ಮರದ ತೊಗಟೆಯ ಕಷಾಯ)’ ವಿತರಿಸಲಾಯಿತು

ಅನಂತ್ರಾಯ ಶೆಣೈ ನೇತೃತ್ವದಲ್ಲಿ ಕಳೆದ 25 ವರ್ಷಗಳಿಂದ ನಡೆಯುತ್ತಿರುವ ಉಚಿತ ಸೇವೆ ಇದು !

ಕಾಪು: ಇಲ್ಲಿನ ಶಿರ್ವದ ಸಮಾಜ ಸೇವಕ ಅನಂತ್ರಾಯ ಶೆಣೈ ನೇತೃತ್ವದ ಶಿರ್ವ ಪತಂಜಲಿ ಸ್ವದೇಶಿ ಕೇಂದ್ರದಲ್ಲಿ ಗುರುವಾರ ಆಟಿ ಅಮವಾಸ್ಯೆಯ ಪ್ರಯುಕ್ತ ಬೆಳಗ್ಗೆ ೫ ಗಂಟೆಯಿಂದ ಮಧ್ಯಾಹ್ನದವರೆಗೂ ಸಾವಿರಾರು ಸಾರ್ವಜನಿಕರಿಗೆ ಉಚಿತವಾಗಿ ‘ಆಟಿ ಮದ್ದು (ಪಾಲೆ ಮರದ ತೊಗಟೆಯ ಕಷಾಯ)’ ವಿತರಿಸಲಾಯಿತು. ಅವರು ಕಳೆದ 25 ವರ್ಷಗಳಿಂದ ಈ ಸೇವೆ ಮಾಡುತಿದ್ದಾರೆ.ಸ್ಥಳೀಯ 50 - 100 ಮಂದಿಗೆ ಆರಂಭವಾದ ಈ ಸೇವೆ ಇತ್ತೀಚೆಗೆ ಶಿರ್ವದ ಗಡಿ ದಾಟಿ ಅಕ್ಕಪಕ್ಕದ ಗ್ರಾಮಗಳಿಂದ, ಉಡುಪಿ, ಕಾಪು, ಕಾರ್ಕಳ ತಾಲೂಕುಗಳಿಂದಲೂ ಆಸಕ್ತರು ವಾಹನಗಳಲ್ಲಿ ಬಂದು ಅನಂತ್ರಾಯ ಶೆಣೈ ನೇತೃತ್ವದ ತಂಡದಿಂದ ಆಟಿ ಕಷಾಯವನ್ನು ಪಡೆಯುತ್ತಿದ್ದಾರೆ.

ತುಳುನಾಡಿನ ಈ ಸಂಪ್ರದಾಯವನ್ನು ಅವರು ಅತ್ಯಂತ ಶ್ರದ್ಧೆಯಿಂದ ನಡೆಸಿಕೊಂಡು ಬಂದಿರುವುದಕ್ಕೆ ಗುರುವಾರ ಸ್ಥಳದಲ್ಲಿಯೇ ಮದ್ದು ಕುಡಿದವರ ಸಂಖ್ಯೆ ೯೬೧ ಆಗಿದ್ದರೆ, ಮನೆಗೆ ತೆಗೆದುಕೊಂಡು ಹೋದವರೂ ಸೇರಿ ೫೨೦೦ರ ಗಡಿ ದಾಟಿ ದಾಖಲೆ ನಿರ್ಮಿಸಿರುವುದೇ ಸಾಕ್ಷಿಯಾಗಿದೆ. ಈ ಬಾರಿ ಕಷಾಯದ ಪಾರ್ಲೆಲ್ ಜೊತೆಗೆ ಮೆಂತೆಗಂಜಿ ಪ್ಯಾಕೆಟ್, ಸ್ಥಳದಲ್ಲೇ ಕುಡಿಯುವವರಿಗೆ ಗೇರುಬೀಜ ನೀಡಿದ್ದು ವಿಶೇಷವಾಗಿತ್ತು.

ಶಿರ್ವ ಶ್ರೀಮಹಾಲಸಾ ನಾರಾಯಣೀ ದೇವಳದ ಆಡಳಿತ ಮಂಡಳಿಯ ಸಹಕಾರದಿಂದ ಶ್ರೀದೇವಳದ ಪಾಕಶಾಲೆಯಲ್ಲಿಯೇ ಕಷಾಯ, ಮೆಂತೆಗಂಜಿ ತಯಾರಿಸಿ, ಕಷಾಯ ಬಾಟಲ್ ಹಾಗೂ ಮೆಂತೆಗಂಜಿ ಪ್ಯಾಕೆಟ್‌ಗಳಲ್ಲಿ ಸಿದ್ಧಗೊಳಿಸಿ ವಿತರಿಸಲಾಯಿತು. ಇದರ ತಯಾರಿಕೆಯಲ್ಲಿ ಕೇಶವ ಮಾಮ್, ಫೆಡ್ರಿಕ್, ವಿನ್ಸೆಂಟ್, ಜಯರಾಮ ಆಚಾರ್ಯ, ಚೇತನ್ ಕಾಮತ್, ಜಯರಾಮ ನಾಯಕ್, ಸಚ್ಚಿದಾನಂದ ಕಿಣಿ, ಚಕ್ರ, ಸತ್ಯೇಂದ್ರ ಪೈ, ಮಹೇಶ್ ಪೂಜಾರಿ, ಸಂದೀಪ್ ಶೆಟ್ಟಿ, ಶೆಟ್ಟಿ ಸಾಥ್ ನೀಡಿದರು. ವಿತರಣಾ ಕಾರ್ಯದಲ್ಲಿ ಪತಂಜಲಿ ಯೋಗಸಮಿತಿಯ ಸದಸ್ಯರು, ಕಾರ್ಯಕರ್ತರು ಸಹಕರಿಸಿದರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’