ಕನ್ನಡಪ್ರಭ ವಾರ್ತೆ, ಹೊನ್ನಾಳಿ
ಪಟ್ಟಣದ ಎಸ್‍ಜೆವಿಪಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕದಳಿ ಮಹಿಳಾ ವೇದಿಕೆ ವತಿಯಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸದಲ್ಲಿ "ವಚನ ಸಾಹಿತ್ಯದ ಪ್ರಸ್ತುತತೆ " ಬಗ್ಗೆ ಅವರು ಮಾತನಾಡಿದರು.
ಜಾತಿವಿರೋಧಿ, ಪ್ರಭುತ್ವವಿರೋಧಿ, ಆರ್ಥಿಕ ಸಮಾನತೆ, ಲಿಂಗ ಸಮಾನತೆ, ಜನರಿಂದ ಜನರಿಗಾಗಿ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು. ಹಾಗಾಗಿ, 12ನೇ ಶತಮನಾದ ವಚನ ಸಾಹಿತ್ಯ 21ನೇ ಶತಮಾನಕ್ಕೂ ಪ್ರಸ್ತುತವಾಗಿದೆ ಎಂದರು.ಗಾಂಧೀಜಿ ಅಂತರ್ಜಾತಿ ವಿವಾಹ ಮಾಡಿಸಲು ಹೆಣಗಾಡಬೇಕಾಯಿತು. ಆದರೆ, 12ನೇ ಶತಮಾನದಲ್ಲೇ ಅಂತರ್ಜಾತಿ ವಿವಾಹ ಮಾಡಿಸಿ, ಜಾತಿವಾದಿಗಳಿಗೆ ಬಲವಾದ ಪೆಟ್ಟುಕೊಟ್ಟಿದ್ದು ಇದೇ ಶರಣರು. ಶರಣರದು ಮುಖವಾಡ ಇಲ್ಲದ ಪ್ರಾಮಾಣಿಕ ಬದುಕು. ಹಾಗಾಗಿ ಅವರು ಒಳಿತನ್ನು ಸ್ವೀಕರಿಸಿ, ಕೆಡಕನ್ನು ತಿರಸ್ಕರಿಸಿದ್ದರು ಎಂದು ಹೇಳಿದರು.
ಬಸವಾಪಟ್ಟಣದ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾಡಿನಾಧ್ಯಂತ ಶರಣರ ಚಿಂತನೆ, ತತ್ವ, ವೈಚಾರಿಕತೆಗಳನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವುದು ಈಗಿನ ಅವಶ್ಯಕತೆ. ಮಾನವಕುಲದ ಉಳಿವಿಗಾಗಿ ಶರಣ ಸಾಹಿತ್ಯದಲ್ಲಿ ಮದ್ದು ಇದೆ. ಶರಣ ಸಾಹಿತ್ಯ ಮನುಷ್ಯರನ್ನು ದೇವರಂತೆ ಕಾಣುತ್ತದೆ ಎಂದರು.
ತಾಲೂಕು ಅಧ್ಯಕ್ಷ ಕೆ.ಪಿ.ದೇವೆಂದ್ರಪ್ಪ ಮಾತನಾಡಿದರು. ಹಿರಿಯ ಸಾಹಿತಿ ಸಂಗನಾಳಮಠ, ಕಸಾಪ ಅಧ್ಯಕ್ಷ ಮುರಿಗೆಪ್ಪಗೌಡ, ಕದಳಿ ವೇದಿಕೆಯ ತಾಲೂಕು ಅಧ್ಯಕ್ಷೆ ಡಾ.ಪ್ರತಿಮ, ಉಪನ್ಯಾಸಕ ಗೊಲ್ಲರಹಳ್ಳಿ ಮಂಜುನಾಥ್, ಪ.ಪಂ. ಮಾಜಿ ಉಪಾಧ್ಯಕ್ಷೆ ವೀಣಾ ಸುರೇಶ್, ಷಹಜಾನ್, ಸಿದ್ದಯ್ಯ, ದತ್ತಿದಾನಿಗಳು ಉಪಸ್ಥಿತರಿದ್ದರು.- - - -23ಎಚ್.ಎಲ್.ಐ2:
ಉಪನ್ಯಾಸ ಕಾರ್ಯಕ್ರಮವನ್ನು ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೆ.ಪಿ.ದೇವೆಂದ್ರಪ್ಪ ಉದ್ಘಾಟಿಸಿದರು.