ದೇಶದಲ್ಲಿ ಎಲ್ಲರ ಒಗ್ಗೂಡಿಸುವುದೇ ಶಿವಾಜಿ, ವಿವೇಕಾನಂದರ ಹಿಂದುತ್ವ ಆಶಯವಾಗಿತ್ತು

KannadaprabhaNewsNetwork |  
Published : Feb 21, 2026, 02:15 AM IST
ಫೋಟೋ ಫೈಲ್-19ಕೆಡಿವಿಜಿ22 | Kannada Prabha

ಸಾರಾಂಶ

ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಸ್ವಾಮಿ ವಿವೇಕಾನಂದರ ಹಿಂದುತ್ವವೆಂದರೆ ಎಲ್ಲ ಜಾತಿ-ಧರ್ಮಗಳನ್ನೂ ಒಗ್ಗೂಡಿಸುವುದಾಗಿತ್ತು. ಆದರೆ, ಬಿಜೆಪಿಗರ ಹಿಂದುತ್ವ ಜಾತಿ-ಧರ್ಮಗಳ ಮಧ್ಯೆ ವೈರುಧ್ಯ ಉಂಟು ಮಾಡುವುದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ದೂರಿದ್ದಾರೆ.

- ಕಾಂಗ್ರೆಸ್‌ ಕಚೇರಿಯಲ್ಲಿ ಶಿವಾಜಿ ಜಯಂತಿಯಲ್ಲಿ ದಿನೇಶ ಶೆಟ್ಟಿ - - -

ದಾವಣಗೆರೆ: ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಸ್ವಾಮಿ ವಿವೇಕಾನಂದರ ಹಿಂದುತ್ವವೆಂದರೆ ಎಲ್ಲ ಜಾತಿ-ಧರ್ಮಗಳನ್ನೂ ಒಗ್ಗೂಡಿಸುವುದಾಗಿತ್ತು. ಆದರೆ, ಬಿಜೆಪಿಗರ ಹಿಂದುತ್ವ ಜಾತಿ-ಧರ್ಮಗಳ ಮಧ್ಯೆ ವೈರುಧ್ಯ ಉಂಟು ಮಾಡುವುದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ದೂರಿದರು.

ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಗುರುವಾರ ಶಿವಾಜಿ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಶಿವಾಜಿ ಮಹಾರಾಜರ ಪೂರ್ವಜರು ಕರ್ನಾಟಕದವರು, ಕನ್ನಡಿಗರು. ಶಿವಾಜಿ ಆಡಳಿತ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು. ಅಂತಹ ಆಡಳಿತವನ್ನು ಕೊಟ್ಟ ಶಿವಾಜಿ ಮಹಾರಾಜರು ಎಲ್ಲಿ, ಜಾತಿ-ಧರ್ಮಗಳ ಮಧ್ಯೆ ವಿಷಬೀಜವನ್ನು ಬಿತ್ತುವ ಬಿಜೆಪಿ ಆಡಳಿತವೆಲ್ಲಿ ಎಂದು ದೂರಿದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ, ಮಾಜಿ ಮೇಯರ್‌ ಅನಿತಾ ಬಾಯಿ ಮಾಲತೇಶ ಮಾತನಾಡಿ, ಶಿವಾಜಿ ಮಹಾರಾಜರು ಇಲ್ಲದಿದ್ದರೆ ಇಂದು ನಿರಂಕುಶ ಆಡಳಿತ ಕಾಣಬೇಕಾಗಿತ್ತು. ಇಂತಹ ಅಪ್ರತಿಮ ಮಹಾರಾಜರ ಆಡಳಿತದಿಂದಾಗಿ ಸರ್ವಾಧಿಕಾರ ಆಡಳಿತ ಕೊನೆಗೊಂಡಿತು ಎಂದರು.

ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಕೆ.ಜಿ.ಶಿವಕುಮಾರ ಮಾತನಾಡಿ, ರಾಷ್ಟ್ರಪ್ರೇಮ ಬಡಿದೆಬ್ಬಿಸಿದ ಶಿವಾಜಿ ಆಳ್ವಿಕೆಯಂತೆ ಕಾಂಗ್ರೆಸ್ ಪಕ್ಷ ಸಹ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಎಲ್ಲ ವರ್ಗದವರನ್ನೂ ಸಮಾನವಾಗಿ ಕಂಡಿದೆ ಎಂದರು.

ಗ್ಯಾರಂಟಿ ಯೋಜನೆ ಜಿಲ್ಲಾ ಉಪಾಧ್ಯಕ್ಷ ಅನೀಸ್ ಪಾಷಾ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ, ದಾಕ್ಷಾಯಣಮ್ಮ. ಮಂಗಳಮ್ಮ, ರಾಜೇಶ್ವರಿ, ವಾಣಿ ಬಕ್ಕೇಶ್, ಸಲ್ಮಾಬಾನು, ರಾಧಾ ಬಾಯಿ, ಕಾವ್ಯ, ಎಚ್.ಜೆ.ಮೈನುದ್ದೀನ್, ಮುಜಾಹಿದ್ ಪಾಷ ಇತರರು ಇದ್ದರು.

- - -

-19ಕೆಡಿವಿಜಿ22:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನದಾಫ್‌-ಪಿಂಜಾರ ಸಮುದಾಯ ಒಪ್ಪಿಕೊಳ್ಳದ ಮುಸ್ಲಿಂ ಸಮುದಾಯ
ಜೈಲಲ್ಲಿ ಜಿಹಾದಿ: ಶಂಕಿತನ ಸುಳಿವಿಗೆ ₹5 ಲಕ್ಷ