ಇಂದು ಶಿವಾಜಿ ಜಯಂತಿ ಮೆರವಣಿಗೆ, ಮಾರ್ಗದಲ್ಲಿ ಬದಲಾವಣೆ

KannadaprabhaNewsNetwork |  
Published : May 11, 2024, 01:32 AM IST
ಕಕಕಕಕ | Kannada Prabha

ಸಾರಾಂಶ

ನಗರದಲ್ಲಿ ರಸ್ತೆ ಸಂಚಾರ ಮಾರ್ಗ ಬದಲಾವಣೆ ಮಾಡಿದ ಪೊಲೀಸರು. ಸಾರ್ವಜನಿಕರು ಬೆಳಗಾವಿ ನಗರ ಪೊಲೀಸರೊಂದಿಗೆ ಸಹಕರಿಸಲು ಮನವಿ

ಕನ್ನಡಪ್ರಭ ವಾರ್ತೆ ಬೆಳಗಾವಿ

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಹಿನ್ನೆಲೆ ನಗರದ ನರಗುಂದಕರ ಭಾವೆ ಚೌಕ್‌ದಿಂದ ಪ್ರಾರಂಭವಾಗಿ ನಗರದ ವಿವಿಧ ಪ್ರದೇಶಗಳಿಗೆ ಸಂಚರಿಸಲಿದೆ. ಈ ಹಿನ್ನೆಲೆಯಲ್ಲಿ ಮೇ.11 ರಂದು ಮಧ್ಯಾಹ್ನ 2 ಗಂಟೆಯಿಂದ ಮೆರವಣಿಗೆ ಮುಕ್ತಾಯಗೊಳ್ಳುವವರೆಗೆ ಕೆಲವು ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ನಗರದ ನರಗುಂದಕರ ಭಾವೆ ಚೌಕದಿಂದ ಶಿವಾಜಿ ಜಯಂತಿ ಮೆರವಣಿಗೆ ಪ್ರಾರಂಭವಾಗಿ ಮಾರುತಿ ಗಲ್ಲಿ, ಹುತಾತ್ಮ ಚೌಕ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಕಾಲೇಜ ರಸ್ತೆ, ಶ್ರೀ. ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಖಿಂಡ ಗಲ್ಲಿ ರಸ್ತೆ, ಸಾಮ್ರಾಟ ಅಶೋಕ ಚೌಕ, ಟಿಳಕ ಚೌಕ, ಹೇಮುಕಲಾನಿ ಚೌಕ, ಶನಿ ಮಂದಿರ, ಕಪಿಲೇಶ್ವರ ಫ್ಲೈ ಓವರ ಮೂಲಕ ಕಪಿಲೇಶ್ವರ ಮಂದಿರದ ಬಳಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆ ಹಿನ್ನೆಲೆಯಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ನಗರದ ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ಕಾಲೇಜ್ ರಸ್ತೆ ಮೂಲಕ ಖಾನಾಪೂರ ಕಡಗೆ ಸಾಗುವ ವಾಹನಗಳ ಚಾಲಕ, ಸವಾರರು ಚನ್ನಮ್ಮ ವೃತ್ತ ಗಣೇಶ ಮಂದಿರ ಹಿಂದೆ ಬಲತಿರುವ ಪಡೆದುಕೊಂಡು ಕ್ಲಬ್ ರಸ್ತೆ ಮೂಲಕ ಗಾಂಧಿ ಸರ್ಕಲ್ (ಅರಗನ ತಲಾಬ), ಶೌರ್ಯ ಚೌಕ್‌ (ಮಿಲ್ಟ್ರಿ ಆಸ್ಪತ್ರೆ). ಕೇಂದ್ರಿಯ ವಿದ್ಯಾಲಯ ನಂ.2, ಶರ್ಕತ್ ಪಾರ್ಕ್‌, ಗ್ಲೋಬ್ ಥಿಯೇಟರ್ ಸರ್ಕಲ್ ಮೂಲಕ ಖಾನಾಪೂರ ರಸ್ತೆಗೆ ಸೇರಿ ಮುಂದೆ ಸಾಗಬೇಕು. ಹಳೆ ಪಿಬಿ ರಸ್ತೆ, ಜೀಜಾಮಾತಾ ಸರ್ಕಲ್‌ದಿಂದ ದೇಶಪಾಂಡೆ ಪೆಟ್ರೋಲ್ ಪಂಪ್, ನರಗುಂದಕರ ಭಾವೆ ಚೌಕ, ಕಂಬಳಿ ಖೂಟ, ಪಿಂಪಳ ಕಟ್ಟಾ, ಪಾಟೀಲ ಗಲ್ಲಿ ಕಡೆಗೆ ಸಂಚರಿಸುವ ವಾಹನಗಳು ಜೀಜಾ ಮಾತಾ ಸರ್ಕಲ್‌ದಿಂದ ನೇರವಾಗಿ ಹಳೆ ಪಿಬಿ ರಸ್ತೆಯ ಮೂಲಕ ಮುಂದೆ ಸಾಗುವುದು.ಗೋವಾವೇಸ್ ಸರ್ಕಲ್ ಹಾಗೂ ನಾಥ ಪೈ ಸರ್ಕಲ್ ಕಡೆಯಿಂದ ಬ್ಯಾಂಕ ಆಫ್ ಇಂಡಿಯಾ ಮಾರ್ಗವಾಗಿ ಕಪಿಲೇಶ್ವರ ಫ್ಲೈ ಓವರ್ ರಸ್ತೆ ಮುಖಾಂತರ ಸಂಚರಿಸುವ ವಾಹನಗಳು ಬ್ಯಾಂಕ ಆಫ್ ಇಂಡಿಯಾ ಸರ್ಕಲ್ ದಿಂದ ಶಿವ ಚರಿತ್ರೆ (ಕುಲಕರ್ಣಿ ಗಲ್ಲಿ) ರಸ್ತೆ, ವೈಭವ ಹೊಟೇಲ್ ಕ್ರಾಸ್, ಹಳೆ ಪಿಬಿ ರಸ್ತೆ ಸೇರಿ ಮುಂದೆ ಸಂಚರಿಸಬೇಕು. ಹಳೆ ಪಿಬಿ ರಸ್ತೆ, ವಿ.ಆರ್.ಎಲ್ ಲಾಜಿಸ್ಟಿಕ್, ಭಾತಕಾಂಡೆ ಸ್ಕೂಲ್ ಕ್ರಾಸ್ ಮಾರ್ಗವಾಗಿ ಕಪಿಲೇಶ್ವರ ಫ್ಲೈ ಓವರ್ ರಸ್ತೆ ಮುಖಾಂತರ ಸಂಚರಿಸುವ ವಾಹನಗಳು ಭಾತಕಾಂಡೆ ಸ್ಕೂಲ್ ಕ್ರಾಸ್ ಹತ್ತಿರ ಎಡತಿರುವ ಪಡೆದುಕೊಂಡು ಶಿವಾಜಿ ಗಾರ್ಡನ, ಬ್ಯಾಂಕ್ ಆಫ್ ಇಂಡಿಯಾ ಕ್ರಾಸ್, ಮಹಾತ್ಮಾ ಫುಲೆ ರಸ್ತೆ ಮಾರ್ಗವಾಗಿ, ಹಳೆ ಪಿಬಿ ರಸ್ತೆ, ಯಶ ಆಸ್ಪತ್ರೆ, ಮಹಾದ್ವಾರ ರಸ್ತೆ, ಕಪಿಲೇಶ್ವರ ಮಂದಿರ ಮೂಲಕ ಕಪಿಲೇಶ್ವರ ಫ್ಲೈ ಓವರ್ ರಸ್ತೆ ಕಡೆಗೆ ಸಾಗುವ ವಾಹನಗಳು ಯಶ್ ಆಸ್ಪತ್ರೆ ಹತ್ತಿರ ಎಡ, ಬಲ ತಿರುವು ಪಡೆದುಕೊಂಡು ಭಾತಕಾಂಡೆ ಸ್ಕೂಲ್ತಾ, ನಾಜಿ ಗಲ್ಲಿ ರೇಲ್ವೆ ಗೇಟ ಮೂಲಕ ಮುಂದೆ ಸಾಗಬೇಕು.

ಗೂಡ್ಸ್ ಶೆಡ್ ರಸ್ತೆ ಮೂಲಕ ಕಪಿಲೇಶ್ವರ ಫ್ಲೈ ಓವರ್ ರಸ್ತೆ ಕಡೆಗೆ ಸಂಚರಿಸುವ ವಾಹನಗಳು ರೇಣುಕಾ ಹೋಟೆಲ್ ಎಸ್‌ಪಿಎಂ ರಸ್ತೆ ಕಡೆಗೆ ಸಂಚರಿಸದೇ ಮರಾಠಾ ಮಂದಿರ ಗೋವಾ ವೇಸ್ ಸರ್ಕಲ್ ಕಡೆಗೆ ಸಂಚರಿಸುವುದು.

ಖಾನಾಪುರ ರಸ್ತೆ, ಬಿಎಸ್‌ಎನ್‌ಎಲ್ ಕ್ರಾಸ್, ಸ್ಟೇಶನ್ ರಸ್ತೆ ಹಾಗೂ ಗೋಗಟೆ ಸರ್ಕಲ್ ಕಡೆಯಿಂದ ರೇಲ್ವೆ ಸ್ಟೇಶನ, ಪೋಸ್ಟಮನ್ ಸರ್ಕಲ್ ಮೂಲಕ ಶನಿ ಮಂದಿರ ಕಡೆಗೆ ಸಂಚರಿಸುವ ವಾಹನಗಳು ಗ್ಲೋಬ್ ಸರ್ಕಲ್ ಹತ್ತಿರ ಎಡ ತಿರುವ ಪಡೆದುಕೊಂಡು, ಶರ್ಕತ್ ಪಾರ್ಕ, ಕೇಂದ್ರಿಯ ವಿದ್ಯಾಲಯ ನಂ.2, ಶೌರ್ಯ ಚೌಕ್‌ (ಮಿಲ್ಟ್ರಿ ಆಸ್ಪತ್ರೆ) ಗಾಂಧಿ ಸರ್ಕಲ್ (ಅರಗನ ತಲಾಬ), ಕ್ಲಬ್ ರಸ್ತೆ, ಚನ್ನಮ್ಮಾ ಸರ್ಕಲ್ ಸೇರಿ ಮುಂದೆ ಸಂಚರಿಸಬೇಕು.

ಮೆರವಣಿಗೆ ಸಾಗುವ ಮಾರ್ಗವಾದ ನರಗುಂದಕರ ಭಾವೆ ಚೌಕ್‌, ಮಾರುತಿ ಗಲ್ಲಿ, ಹುತಾತ್ಮ ಚೌಕ್‌, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಕಾಲೇಜ ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಖಿಂಡ ಗಲ್ಲಿ ರಸ್ತೆ, ಟಿಳಕಚೌಕ್‌, ಹೇಮುಕಾಲನಿ ಚೌಕ್‌, ಶನಿಮಂದಿರ, ರೇಣುಕಾ ಹೋಟೆಲ್, ಕಪಿಲೇಶ್ವರ ಮಂದಿರದ ಎರಡೂ ಬದಿಯ ರಸ್ತೆಗಳಲ್ಲಿ ಮೇ.11 ರಂದು ಮಧ್ಯಾಹ್ನ 2 ಗಂಟೆಯಿಂದ ಮೆರವಣಿಗೆ ಮುಕ್ತಾಯದವರೆಗೆ ಎಲ್ಲ ರೀತಿಯ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಸಂಜೆ 4 ಗಂಟೆಗೆಯಿಂದ ಮರುದಿನ ಬೆಳಗ್ಗೆ ಮೆರವಣಿಗೆ ಮುಗಿಯುವವರೆಗೂ ಡೈವರಶನ್ ಮಾಡಲಿದ್ದು, ಎಲ್ಲ ಮಾದರಿಯ ವಾಹನಗಳು ತಿಳಿಸಲಾದ ಸರ್ಕಲ್‌ ರಸ್ತೆ ಬದಲಿಗೆ ಪರ್ಯಾಯವಾಗಿ ಡೈವರ್‌ಶನ್ ಮಾಡಿದ ರಸ್ತೆಯನ್ನು ಬಳಸಬಹುದಾಗಿದೆ.

ಪಾರ್ಕಿಂಗ್‌ ವ್ಯವಸ್ಥೆ:

ಸರದಾರ ಗ್ರೌಂಡ್‌ನಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ವಾಹನಗಳನ್ನು ಅಲ್ಲಿಯೇ ನಿಲ್ಲಿಸಿ ಕಾಲ ನಡಿಗೆಯಲ್ಲಿ ಯಂಡಿಖೂಟ ಕಡೆ ಬರುವುದು. ಆದ್ದರಿಂದ ಸಂಚಾರ ಮಾರ್ಗ ಬದಲಾವಣೆಗೆ ಸಾರ್ವಜನಿಕರು ಬೆಳಗಾವಿ ನಗರ ಪೊಲೀಸರೊಂದಿಗೆ ಸಹಕರಿಸುವಂತೆ ನಗರ ಪೊಲೀಸರು ಕೋರಿದ್ದಾರೆ.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ